Jump to ratings and reviews
Rate this book

ಕಾಡು | Kaadu

Rate this book
Kaadu

106 pages, Mass Market Paperback

Published January 1, 2021

4 people are currently reading
37 people want to read

About the author

Srikrishna Alanahalli

8 books9 followers
Srikrishna Alanahalli was an Indian novelist and poet. The majority of his works are written in the Kannada language. He became popular for his novels Kaadu (1972), Parasangada Gendethimma (1978) and Bhujangayyana Dasavataragalu (1982)

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
11 (17%)
4 stars
36 (57%)
3 stars
13 (20%)
2 stars
3 (4%)
1 star
0 (0%)
Displaying 1 - 17 of 17 reviews
Profile Image for Nayaz Riyazulla.
457 reviews93 followers
June 23, 2023
ಗಟ್ಟಿಮುಟ್ಟಾದ ಭಾಷೆಯಿಂದ ಪಾತ್ರಗಳ ಮೆರಗನ್ನು ಕಸುವುನ್ನು ಹೆಚ್ಚಿಸುವ ಶ್ರೀಕೃಷ್ಣರ ಬರವಣಿಗೆಯ ಸತ್ವವೇ ಕಾದಂಬರಿಯ ಗೆಲುವು.

ಪುಟ್ಟ ಹುಡುಗನ ದೃಷ್ಟಿಕೋನದಿಂದ ಹೇಳುವ ಇಲ್ಲಿನ ಕಥೆ ಒಂದೂರಿನ ಅವನತಿಯದ್ದು. ದ್ವೇಷದ ಕ್ರೂರತೆ ಒಂದು ಪುಟ್ಟ ಮನಸ್ಸಿನ ಮೇಲೆ ಬೀರುವ ಪ್ರಭಾವ ಕಾದಂಬರಿಯ ಮುಖ್ಯ ಗುಣ. ಉತ್ತಮ ಕೃತಿಗಳ ಸಾಲಿನಲ್ಲಿ ನಿಲ್ಲುವ ಈ ಕೃತಿ, ದೃಶ್ಯಗಳ ದಟ್ಟ ವಿವರಗಳಿಂದ ಹುರಿಗೊಂಡಿದೆ, ಆದರೆ ಇದು ಸೋಲುವುದು ಪಾತ್ರಗಳ ಪೂರ್ಣ ಸ್ವರೂಪದ ಕೊರತೆಯಿಂದ. ಕಿಟ್ಟಿ, ಕಮಲಮ್ಮ ಮತ್ತು ಚಂದ್ರೇಗೌಡ ಎಂಬ ಪಾತ್ರಗಳನ್ನು ಹೊರತುಪಡಿಸಿ ಮಿಕ್ಕ ಪಾತ್ರಗಳ ಸಂವೇದನೆಯೇ ಇಲ್ಲದಿರುವದರಿಂದ.

ಪ್ರಸ್ತುತ ದ್ವೇಷದ ಕಿಡಿಯಲ್ಲಿ ಬೆಚ್ಚಗಾಗುತ್ತಿರುವ ವರ್ಗಕ್ಕೆ ಸಂದೇಶ ಕೊಡಬಹುದಾದ ಒಂದೊಳ್ಳೆ ಕೃತಿ.
Profile Image for ಸುಶಾಂತ ಕುರಂದವಾಡ.
466 reviews28 followers
February 2, 2023
ಪುಸ್ತಕ: ಕಾಡು
ಲೇಖಕರು: ಶ್ರೀಕೃಷ್ಣ ಆಲನಹಳ್ಳಿ

ಕಾಡು ಚಲನಚಿತ್ರ ನೋಡಿದ್ದೆ ಆದರೆ ಅದರಿಂದ ಎಳ್ಳಷ್ಟೂ ನನಗೆ ಅರ್ಥವಾಗಲಿಲ್ಲ ಅದಕ್ಕಾಗಿ ಪುಸ್ತಕವನ್ನ ಓದಿಯೇ ತಿರೋಣ ಅಂತ ಪುಸ್ತಕ ಓದಿದೆ. ಊರಲ್ಲಿ ನಡೆಯುವ ಮಾಟ ಮಂತ್ರದಿಂದ ಶುರುವಾಗುವ ಪುಸ್ತಕ ಹಳ್ಳಿಯಲ್ಲಿಯ ಜೀವನವನ್ನು ಹೇಳುತ್ತದೆ. ಕಿಟ್ಟಿ ಒಂದು ಭಾವನಾತ್ಮಕ ಹುಡುಗ. ಅತ್ತಿಗೆ ಕಮಲಮ್ಮ ಅಂದರೆ ಪ್ರಾಣ. ಸದಾ ಅವರ ಸುತ್ತಲೇ ಸೆರಗು ಹಿಡಿದು ನಡೆದಾಡುವ ಪುಟಾಣಿ. ಆದರೂ ತಾನೂ ಬೆಳೆದು ನಿಂತ ಸಾಹಸಿ ಹುಡುಗ ಅಂತ ಆಗಾಗ ನಾಗಿಯ ಮುಂದೆ ತನ್ನ ಪೌರುಷವನ್ನು ತೋರಿಸಿಕೊಳ್ಳುವುದುಂಟು. ಕಿಟ್ಟಿಯ ಮಾವ ಚಂದ್ರೇಗೌಡರು ಊರಿಗೆ ದೊಡ್ಡ ಗೌಡರು. ಏನೇ ಒಂದು ಪಂಚಾಯತಿ ನಡೆದರೂ ಅಲ್ಲಿ ಅವರ ಉಪಸ್ಥಿತಿ ಇರಲೇಬೇಕು. ಪುಸ್ತಕದ ಬಹುಭಾಗ ಹಳ್ಳಿಯಲ್ಲಿ ನಡೆಯುವ ರಾಜಕೀಯ ಮತ್ತು ಜಿದ್ದಾಜಿದ್ದಿಗಳನ್ನ ವರ್ಣಿಸಿವೆ. ಹಾಗೆಯೇ ಹಳ್ಳಿಯಲ್ಲಿ ನಡೆಯುವ ಕೃತ್ಯಗಳು ಮುಗ್ಧ ಮನಸಿನ ಕಿಟ್ಟಿಗೆ ತಿಳಿಯಲಾಗುವುದಿಲ್ಲ. ಆದರೆ ಮುಂದೆ ದೊಡ್ಡವನಾದ ಮೇಲೆ ತಿಳಿದಾಗ ಅವನಿಗೆ ಏನು ಅನಿಸಬಹುದು?! ಪಂಚಾಯ್ತಿಯಲ್ಲಿ ಚಂದ್ರೇಗೌಡರು ಕೆಂಚನ ಮೇಲೆ ಕೈ ಮಾಡಿದ್ದು ನೋಡಿ ಕಮಲಮ್ಮನ ಸೆರಗಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅತ್ತಿದ್ದ ಕಿಟ್ಟಿಗೆ ಅಲ್ಲಿ ಕೃತ್ಯಗಳ ಮೂಲ ಉದ್ದೇಶ ತಿಳಿದಾಗ ಅವನು ಅವುಗಳನ್ನು ಹೇಗೆ ಪರಿಗಣಿಸಬಹುದು? ಅವನಿಗೆ ಇನ್ನೂ ಚಂದ್ರೇಗೌಡರು ಸಂಜೆಯ ಹೊತ್ತಿನಲ್ಲಿ ಮನೆ ಬಿಟ್ಟು ಹೊರಗೆ ಹೋದರೆ ಅತ್ತೆ ಯಾಕೆ ಅಳುತ್ತಾರೆ ಎಂಬುದೇ ತಿಳಿದಿರಲಿಲ್ಲ. ಅಂದು ರಾತ್ರಿ ಅತ್ತೆ ಮಂತ್ರವಾದಿಯ ಕಡೆ ಕರೆದುಕೊಂಡು ಯಾಕೆ ಹೋದರು, ಅಲ್ಲಿ ಯಾಕೆ ಪೂಜೆ ಮಾಡಿಸಿದರು ಎಂಬುದು ಇನ್ನೂ ನಿಗೂಢ.
ಇಂತಹ ಗಂಭೀರ ವಿಚಾರಗಳನ್ನು ಕಾದಂಬರಿ ಮೂಲಕ ಶ್ರೀಕೃಷ್ಣ ಅವರು ಬರೆದಿದ್ದಾರೆ. ಈಗ ಬದುಕಿದ್ದಿದ್ದರೆ ಇನ್ನೂ ಒಳ್ಳೆಯ ಕಾದಂಬರಿ ಬರೆಯುತ್ತಿದ್ದರೇನೋ ಆದರೆ ಚಿಕ್ಕವಯಸ್ಸಿನಲ್ಲೆಯೇ ಕೊನೆಯುಸಿರೆಳೆದು ಬದುಕಿದ್ದಾಗಲೇ ಒಳ್ಳೆಯ ಕಾದಂಬರಿಗಳನ್ನು ಬರೆದವರು ಶ್ರೀಕೃಷ್ಣ ಆಲನಹಳ್ಳಿ.
Profile Image for Vasanth.
122 reviews26 followers
July 28, 2022
ಶ್ರೀಕೃಷ್ಣ ಆಲನಹಳ್ಳಿಯವರ "ಕಾಡು" ೧೦೪ ಪುಟಗಳ ಕಿರು ಕಾದಂಬರಿ. ಈಗಾಗಲೇ ನಾನು ಓದಿದ ಕಡಿಮೆ ಪುಟಗಳ ಕಾದಂಬರಿಗಳಿಂದ ತಿಳಿದಿದ್ದೇನೆಂದರೆ - ಕೆಲವೇ ಪುಟಗಳಲ್ಲಿ ಓದುಗರಿಗೆ ಅಗಾಧವಾದ ಓದಿನ ಅನುಭವವನ್ನು ಕೊಡಬಹುದು ಮತ್ತು ಅಂತಹ ಸಾಕಷ್ಟು ಕೃತಿಗಳು ನಮ್ಮ ಕನ್ನಡದಲ್ಲಿವೆ ಅನ್ನುವುದು.

ಇಡೀ ಕಾದಂಬರಿಯನ್ನು ಶ್ರೀಕೃಷ್ಣ ಆಲನಹಳ್ಳಿಯವರು "ಕಿಟ್ಟಿ" ಎಂಬ ಎಂಟು ವರ್ಷದ ಚಿಕ್ಕ ಹುಡುಗನ ಮೂಲಕ ನೋಡುವಂತೆ ರಚಿಸಿರುವುದು ಈ ಕೃತಿಯ ವಿಶೇಷ. ಕಿಟ್ಟಿಯ ಮೂಲಕ ನಾವಿಲ್ಲಿ ನೋಡುವುದು ಬರೀ ಅವನ ವಯಸ್ಸಿಗೆ ಅರ್ಥೈಸಿಕೊಳ್ಳಬಹುದಾದ ಸಾಮಾನ್ಯ ವಿಷಯಗಳಲ್ಲ ಅಥವಾ ಅವನ ಬಾಲ್ಯದ ದೈನಂದಿನ ಚಟುವಟಿಕೆಗಳಲ್ಲ. ಬದಲಾಗಿ ಎರಡು ಊರುಗಳ ನಡುವಿನ ಕಲಹ, ದ್ವೇಷ, ಹೊಡೆದಾಟ. ಅನೈತಿಕ ಸಂಬಂಧಗಳು. ಅಕಾಲಿಕ ಸಾವುಗಳು ( ಕಿಟ್ಟಿಗೆ ಹತ್ತಿರದವರು ಮತ್ತು ಅವನ ಪ್ರಿಯ ಸಾಕು ಪ್ರಾಣಿಗಳು - ಹಸು, ನಾಯಿ). ಈ ಎಲ್ಲಾ ಘಟನೆಗಳಿಂದ ಮಾನಸಿಕವಾಗಿ ಜರ್ಜರಿತನಾಗುವ ಕಿಟ್ಟುವಿಗೆ ತಾನಿರುವ ಊರು ರಾಕ್ಷಸ ಲೋಕದಂತೆ ಭಾಸವಾಗುತ್ತದೆ. ಆ ರಾಕ್ಷಸ ಲೋಕದಿಂದ ಪಾರಾಗಲು ಹಾತೊರೆಯುವ ಮೂಲಕ ಕಾದಂಬರಿ ಅಂತ್ಯವಾಗುತ್ತದೆ.

ಮೇಲೆ ತಿಳಿಸಿದ ಘಟನೆಗಳ ನಿಗೂಢತೆ ಕಿಟ್ಟುವಿಗೆ ಅಥವಾ ಕಿಟ್ಟುವಿನ ಮೂಲಕ ಕಾದಂಬರಿಯಲ್ಲೆಲ್ಲೂ ಅನಾವರಣವಾಗುವುದಿಲ್ಲ, ಅದು ಕೃತಿಯ ಮಿತಿಯೂ ಹೌದು. ಆದರೆ ಓದುಗರಾದ ನಮಗೆಲ್ಲಾ ಅರಿವಿಗೆ ಬಂದು "ಕಾಡು" ಒಂದು ಸಂಪೂರ್ಣ ಕೃತಿಯಾಗಿ ಕಾಣುತ್ತದೆ. "ಕಾಡು" ಕಾದಂಬರಿ ೧೯೭೩ ರಲ್ಲಿ ಗಿರೀಶ್ ಕಾರ್ನಾಡ್ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಹೊರಹೊಮ್ಮಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ ಎನ್ನುವುದು ಹೆಮ್ಮೆಯ ವಿಷಯ.
Profile Image for mahesh.
272 reviews25 followers
January 23, 2025
When i bought this book based on the title, I was expecting some stories around the forest. However its not about the forest, it's basically about a small village kid describing his day-to-day misadventures and horrific incidents around the village. When Girish Karnad, U G Ananthamurty, and a few more Kannada authors appreciated this book, I was a bit skeptical about buying it. Then I realized I should not cloud my judgment based on my opposite opinion towards the authors, So I decided to give it a try.

This book is barely around 100 pages, the Kannada language used here feels authentic and natural which I deeply appreciate. But when it comes to the story, It was boring and going everywhere. The author failed to build any single character that we can dwell deep, The Author introduces new characters all of a sudden and makes them disappear in the same phase. Except for that small kid Kitti, Every character appears and disappears like a girlfriend's mood swings.

I didn't get it, What author trying to portray here? Is he trying to compare the horrors of the village to the wild horrors of the Forest? Is he comparing animals in the forest to people in the village?

I don't know what he tried to portray here.

Profile Image for Swathi.
5 reviews3 followers
December 28, 2025
ಬಾಲ್ಯದ ದಿನಗಳಲ್ಲಿ ನಮ್ಮ ಸುತ್ತ ಮುತ್ತ ಸಮಾಜದ ನಡೆ,ನಮಗಿಂತ ದೊಡ್ಡವರ ನಡುವೆ ನಡೆವ ಆಗು ಹೋಗುಗಳ ಬಗ್ಗೆ ಎಷ್ಟೇ ತಿಳಿಯ ಹೊರಟರು ಅದು ಬಾಲ್ಯದಲ್ಲಿ ನಮಗೆ ಸಂಪೂರ್ಣ ಅರ್ಥವಾಗುವುದೇ ಇಲ್ಲ. ಕೆಲವೊಂದಿಷ್ಟು ನೀವು ಚಿಕ್ಕವರು ನಿಮಗರ್ಥವಾಗುವುದಿಲ್ಲ ಬಿಡಿ ಎಂದು ಎಂದು ದೊಡ್ಡವರು ನಮ್ಮನ್ನು ಸುಮ್ಮನಾಗಿಸಿದರೆ,ಇನ್ನು ಕೆಲವೊಂದಿಷ್ಟು ನಮ್ಮ ವಯಸ್ಸಿಗೆ ಮೀರಿದ ವಿಚಾರಗಳೆಲ್ಲವನ್ನು ಹೇಳಿದರೂ ಅದು ನಮಗೆ ಸಂಪೂರ್ಣವಾಗಿ ಅರ್ಥವಾಗುವುದೇ ಇಲ್ಲ.ಹೆಚ್ಚಿನ ಸಂಗತಿಗಳು ನಮಗೆ ನಮ್ಮ ಜೀವನಾನುಭವವೇ ಮುಂದೆ ಅರ್ಥ ಮಾಡಿಸಬೇಕು.ಹೀಗೆ ಈ ಕಾದಂಬರಿಯಲ್ಲಿ ಬರುವ ಪುಟ್ಟ ಹುಡುಗ ಕಿಟ್ಟಿ ಅಪ್ಪ ಅಮ್ಮನಿಂದ ದೂರವಿದ್ದು ಮಾವನ ಮನೆಯಲ್ಲಿ ಬೆಳೆಯುತ್ತಿರುವಾಗ ತನ್ನ ಮನೆಯವರ ನಡುವೆ ಸಂಬಂಧಗಳ ಬಗ್ಗೆ ಮೂಡುವ ಪ್ರಶ್ನೆಗಳು,ಶಾಲಾ ಸಹಪಾಠಿಗಳೊಂದಿಗೆ ಕಳೆವ ಕುತೂಹಲದ ಸಂಗತಿಗಳು,ತಮ್ಮೂರಲ್ಲಿ ನಡೆವ ರಾಜಕೀಯ ವಿಚಾರಗಳು,ವಯೋಸಹಜ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಹೀಗೆ ಲೇಖಕ ಇಲ್ಲಿ ಪ್ರತಿಯೊಂದನ್ನೂ ಕಿಟ್ಟಿಯ ದೃಷ್ಟಿ ಕೋನದಿಂದ ಈ ಕಾದಂಬರಿಯ ಕಥೆ ಹೆಣೆದಿದ್ದಾರೆ.ಕೇವಲ ೧೦೪ ಪುಟಗಳನ್ನೊಳಗೊಂಡ ಈ ಪುಟ್ಟ ಕಾದಂಬರಿಯು ಒಂದೊಳ್ಳೆ ಓದಾಗಿದ್ದು, ಹಾಗೆ ಇದು ಗಿರೀಶ್ ಕಾರ್ನಾಡ್ ಅವರ ನಿರ್ದೇಶನದಲ್ಲಿ ಕಾಡು ಎಂಬ ಕನ್ನಡ ಚಲನಚಿತ್ರವಾಗಿ ಮೂಡಿ ಬಂದಿದೆ.
Profile Image for Suchetha.
37 reviews
August 18, 2020
ಒಮ್ಮೆ ಓದಬಹುದಾದಂತಹ ಪುಸ್ತಕ. ಓದಿಸಿಕೊಂಡು ಹೋಗುತ್ತದೆಯಾದರೂ ಅಲ್ಲಲ್ಲಿ ಪಾತ್ರಗಳು ಅಪೂರ್ಣವೆನಿಸಿಬಿಡುತ್ತವೆ.
Profile Image for Guruprasad.
119 reviews13 followers
April 27, 2022
ಒಂದು ಎಳೆಯ ಬಾಲಕನ ನಿರೂಪಣೆಯಲ್ಲಿ ಒಂದು ಸಂಸಾರದ ಮತ್ತು ಹಳ್ಳಿಯ ಚಿತ್ರಣ ಸಿಗುತ್ತದೆ , ಮನುಷ್ಯರ ನಡುವಿನ ಸಂಬಂಧ , ಮತ್ಸರ , ಕ್ರೌರ್ಯ ಎಲ್ಲ ಕಾಣುತೇವೆ . ಕಮಲಮ್ಮನ ಪಾತ್ರಕೆ ಆದ ಅನ್ಯಾಯ ಸಮಾಜದ ಕ್ರೌರ್ಯದ ಉದಾಹರಣೆ.
Profile Image for Muhammad Aslam Al-Mueeni .
2 reviews2 followers
February 10, 2021
#ನಾನುಓದಿದಪುಸ್ತಕ #ಕನ್ನಡಪುಸ್ತಕ
#ಇಪ್ಪತ್ತೊಂದರ #ಕನಸು

'ಕಾಡು' ಶ್ರೀಕೃಷ್ಣ ಆಲನಹಳ್ಳಿಯವರ ಚೊಚ್ಚಲ ಕಾದಂಬರಿ. ಕನ್ನಡದ ಪ್ರಮುಖ ಕಾದಂಬರಿಗಳ ಸಾಲಿನಲ್ಲಿ ಕಾಡು ಕೂಡ ಒಂದು. ಇದು 104 ಪುಟಗಳನ್ನು ಹೊಂದಿರುವ ತೀರ ಚಿಕ್ಕದಾದ ಕಾದಂಬರಿ. ಕಾದಂಬರಿ ಘಟನೆಗಳು ಕೊಪ್ಪಲು ಮತ್ತು ಹೊಸೂರು ಎಂಬ ಗ್ರಾಮಗಳಲ್ಲಿ ನಡೆಯುತ್ತದೆ. ಕಾಡು ಕಾದಂಬರಿಯಲ್ಲಿ ಬೊಂಬಾಯಿ ಕಲ್ಕತ್ತಾಗಳು ಒಂದೆರಡು ಬಾರಿ ಬಂದುಹೋಗುತ್ತದೆ. ಊರವರು ಆಡುವ ನಾಟಕಕ್ಕೆ ಮಂಡ್ಯದಿಂದ ಡ್ರೆಸ್ಸು, ಸೀನರಿಗಳು, ಕೋಟೆ ಪೊಲೀಸರ ಪ್ರಸ್ತಾಪವೂ ಕಾಡು ಕಾದಂಬರಿಯಲ್ಲಿ ಕಾಣಬಹುದು. ನಾನು ಓದಿದ ಕಾದಂಬರಿಗಳಲ್ಲಿ ಶ್ರೀಕೃಷ್ಣ ಆಲನಹಳ್ಳಿಯವರ ಕಾಡು ಹಲವು ಕಾರಣಗಳಿಗಾಗಿ ಒಂದು ವಿಶಿಷ್ಟ ಕೃತಿ. ಈ ಆಧುನಿಕ ಯುಗದಲ್ಲಿ ಮಾನವ ಬಹುದೂರ ಬಂದಿದ್ದರೂ ಅವನ ಮೂಲ ಪ್ರವೃತ್ತಿಗಳಾದ ಕಾಮ, ದ್ವೇಷ, ಕ್ರೌರ್ಯಗಳು ಇನ್ನೂ ಆದಿಮ ಸ್ಥಿತಿಯಲ್ಲಿಯೇ ಇರುವ ಜೀವನದ ಒಂದು ದುರಂತವನ್ನು ಕಾದಂಬರಿ ಕಟ್ಟಿಕೊಡುತ್ತದೆ. ಕೊನೆಯಿಲ್ಲದ ಅವಸ್ಥೆಯನ್ನೇ ಕೊಪ್ಪಲು, ಹೊಸೂರು ಇಂಥ ಕಾಡಿನ ನಡುವಿನ ಗ್ರಾಮಗಳ ಪರಿಸರದಲ್ಲಿ ನಡೆಯುವ ಕ್ರಿಯೆಗಳ ಮೂಲಕ ಶ್ರೀಕೃಷ್ಣ ಆಲನಹಳ್ಳಿಯವರು ಈ ಕಾದಂಬರಿಯಲ್ಲಿ ಅಭಿನಯಿಸಿ ತೋರಿಸಿದ್ದಾರೆ.

📚📚📚 ಓದುಗ
Profile Image for Vinod.
33 reviews3 followers
October 12, 2024
I’d rate this a 3.5, largely because I appreciate that it wasn’t stretched into a 300+ page novel with unnecessary character development. If it had been more detailed, it likely would have become a sensitive and possibly even traumatic read. Alanahalli Srikrishna’s brilliance lies in keeping the story concise and focused. It’s not the length that matters, but the raw, unfiltered depiction of village life and the events that reveal the decline of human values. The significance of the title only became apparent to me towards the end.

The author smartly chose to tell the story from the perspective of an innocent child. A child doesn’t apply ideological or rational interpretations to the events, leaving it to the reader to interpret the societal issues that emerge throughout the narrative. It’s a reflection on society's long-standing hypocrisy in the name of preserving dignity—though whose dignity and what kind is often ambiguous. What’s considered wrong for one person could easily be right for another.

The film adaptation, featuring iconic actors like Girish Karnad, Amrish Puri, and Lokesh, was beautifully shot in black and white in 1973. You can watch it here:https://www.youtube.com/watch?v=yS4TgOi4P1E&ab_channel=SGVDigital-KannadaFullMovies

Profile Image for MK  Book Reader .
9 reviews
February 18, 2025
ಕಾಡು, ಶ್ರೀ ಕೃಷ್ಣ ಆಲನಹಳ್ಳಿ : ಎರಡು ಹಳ್ಳಿಗಳ ನಡುವಿನ ಪೈಪೋಟಿಯ ಬಗ್ಗೆ ಬರೆದಿರುವ ಒಂದು ಹಿಂಸಾತ್ಮಕ ಗ್ರಾಮೀಣ ಕಾದಂಬರಿ.

8 ವರ್ಷದ ಬಾಲಕ ಕಿಟ್ಟಿ ಎಂಬ ಯುವಕನ ಕಣ್ಣುಗಳ ಮೂಲಕ ಕಾಡನ್ನು ನಾವು ನೋಡಬಹುದು. ತಾತ್ಕಾಲಿಕವಾಗಿ ತನ್ನ ಚಿಕ್ಕಪ್ಪ ಚಂದ್ರೇಗೌಡ ಮತ್ತು ಚಿಕ್ಕಮ್ಮ ಕಮಲಿ ಜೊತೆ ವಾಸಿಸುತ್ತಿರುವ ಹುಡುಗ, ಹಳ್ಳಿಯಲ್ಲಿ ತನ್ನ ಪ್ರೇಯಸಿಗೆ ತನ್ನ ಚಿಕ್ಕಪ್ಪನ ರಹಸ್ಯ ಭೇಟಿಗಳನ್ನು ಗಮನಿಸುತ್ತಾನೆ. ಈ ಸಂಬಂಧವು ಚಂದ್ರೇಗೌಡ ಮತ್ತು ಅವನ ಪ್ರತಿಸ್ಪರ್ಧಿ ಶಿವಗಂಗಾ ನಡುವಿನ ದೊಡ್ಡ ಘರ್ಷಣೆಗೆ ಕಾರಣವಾಗುತ್ತದೆ.

ಗೌಡನನ್ನು ಬಸಕ್ಕನಿಂದ ದೂರವಿಡಲು ಯಜ್ಞವನ್ನು ಮಾಡುವರೀತಿ. ಕಮಲಿಯನ್ನು ಬಸಕ್ಕನ ಮಡಿಲಿನಿಂದ ಹಿಂತಿರುಗಿಸುವುದಾಗಿ ಅವನು ಭರವಸೆ ನೀಡುವ ಪರಿ.

ಇದು ಅಂತಿಮವಾಗಿ ಹಿಂಸೆ, ಚಿಕ್ಕಮ್ಮ ಕಮಲಿಯ ಸಾವು ಮತ್ತು ಪೊಲೀಸರ ಆಗಮನಕ್ಕೆ ಕಾರಣವಾಗುತ್ತದೆ. ಹುಡುಗನು ತನ್ನನ್ನು ಸುತ್ತುವರೆದಿರುವ ನಿರ್ದಿಷ್ಟವಾಗಿ ಮಾನವ ನಿರ್ಮಿತ ಹಿಂಸಾಚಾರವನ್ನು ದಟ್ಟವಾದ ಕಾಡು ಪ್ರಸ್ತುತಪಡಿಸುವ ಹೆಚ್ಚು ಪ್ರಾಚೀನ ಬೆದರಿಕೆಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ, ದಂತಕಥೆಯ ಪ್ರಕಾರ, ಅದರ ಬಲಿಪಶುಗಳನ್ನು ಹೆಸರಿನಿಂದ ಕರೆಯುವ ಕೊಲೆಗಾರ ಪಕ್ಷಿಯನ್ನು ಒಳಗೊಂಡಿದೆ. ಅಂತ್ಯದಲ್ಲಿ, ಪಕ್ಷಿಯು ಕಿಟ್ಟಿಯನ್ನು ಕರೆಯುವುದನ್ನು ಊಹಿಸುತ್ತಾನೆ ಮತ್ತು ಅವನು ಕರೆಯನ್ನು ಅನುಸರಿಸುತ್ತಾದೆ. ಕಿಟ್ಟಿಯನ್ನೂ ಮನೆಗೆ ಕರೆದೊಯ್ಯಲು ಬಯಸುವ ತನ್ನ ಹೆತ್ತವರ ಉದ್ರಿಕ್ತ ಪರಿಸ್ಥಿತಿಯನ್ನು ನೋಡಬಹುದು.

ಒಂದು ಫ್ಯಾಂಟಸಿಯ ಪ್ರಕಾರ ಕಾಡು ಕಾದಂಬರಿಯೂ ಅಂತ್ಯವಾಗುತ್ತದೆ.
This entire review has been hidden because of spoilers.
Profile Image for Akshatha ⭐.
116 reviews17 followers
July 16, 2024
A village story as seen by a child (Kitti).

Whenever there are adults fighting or there is domestic abuse, you get to see it in Kitti's view. And how easily a kid can understand that the abuse is bad and the abuser has become suddenly evil but he just doesn't understand why people do such things. The times when his uncle is nice to his aunt (instead of hitting her) and Kitti silently wishes that his uncle stay this way always is just so pure.

We get to see the patriarchal double standards of the society, domestic abuse and just people's mindset in general. It is all very well shown without glorifying their behavior.

I feel so bad for Kamalamma and all the other women who were mistreated.

Understanding the dialect was a bit difficult at first but I got used to it after the first few chapters. Overall a nice story to see the people and culture from a older times.
Profile Image for Yashawanth Ramaswamy.
96 reviews8 followers
January 7, 2026
ಮೈಸೂರು ಭಾಗದಲ್ಲಿ 1970ರ ಸುಮಾರಿನಲ್ಲಿ ನಡೆಯುವ ಹಳ್ಳಿ ಗಾಡಿನ ದ್ವೇಷದ ಕತೆ. ಇಲ್ಲಿನ ಪಾತ್ರಗಳಿಗೆ ಜೀವ ಸಂವೇದನೆ ಕಡಿಮೆ ಅದಕ್ಕೇನೂ ಲೇಖಕರು ಕಾಡು ಎಂದು ಹೆಸರಿಟ್ಟಿದ್ದಾರೆ. ಕಿಟ್ಟಿ ಎಂಬ ಪುಟ್ಟ ಹುಡುಗನ ಮೂಲಕ ಈ ಕತೆಯನ್ನು ಶ್ರೀಕೃಷ್ಣ ಅವರು ಹೇಳಿದ್ದಾರೆ. ಪಾತ್ರಗಳು ಪರಿಪೂರ್ಣವಾಗಿ ಈ ಕತೆಯಲ್ಲಿ ಕೈಗೆ ಸಿಗುವುದಿಲ್ಲ. ಲೇಖಕರು ವೇಗವಾಗಿ ಕತೆಯನ್ನು ಹೆಣೆದಿದ್ದಾರೆ. ಇಂದಿನ ದಿನಮಾನದಲ್ಲು ಸಹ ಈ ಕತೆಯೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ ಏಕೆಂದರೆ ಸಣ್ಣ ವಿಚಾರಕ್ಕೂ ಸಹ ಗಲಾಟೆಗಳು ಇಂದು ಸಾಮಾನ್ಯವಾಗಿದ್ದು, ಎಲ್ಲೆಲ್ಲೂ ದ್ವೇಷ, ಅಸೂಯೆಗಳು ಹೆಚ್ಚಾಗುತ್ತಿವೆ. ಮನುಷ್ಯನು ಎಷ್ಟೇ ಮುಂದುವರಿದರೂ ತನ್ನ ಮೂಲ ಗುಣಗಳನ್ನು ಎಂದು ಬಿಡಲಾರ. ಒಟ್ಟಾರೆ ಕಾಡು ಒಂದು ಒಳ್ಳೆಯ ಓದು.
47 reviews3 followers
November 24, 2023
This is a novel for adults but narrated by a child. That allows it to point out how ridiculous many of the things that adults do are.
The setting is a village in karnataka , probably post independence period.
I had some trouble understanding the dialect as it was very unfamiliar to me
While the technique itself is commendable, I felt something even more ambitious could have been done with it, rather than being limited to a slice of life drama.
Profile Image for Deekshith Shetty.
4 reviews
May 25, 2024
ಶ್ರೀ ಕೃಷ್ಣ ಆಲನಹಳ್ಳಿಯವರ ಈ ಕಾಡು ತುಂಬಾ ಗಾಢವಾದದ್ದು.! ಕಿಟ್ಟಿಯೇನ್ನುವ ಪುಟ್ಟ ಹುಡುಗನ ಸುತ್ತ ಹಣೆದಿರುವು ಹಳ್ಳಿಯ ಜೀವನದ ಈ ಕಥೆ ಜನರ ಕೋಪ, ಅಸೂಯೆ, ತ್ಯಾಗ ಮತ್ತು ಸಮಾಜದ ಶೋಷಣೆಗಳಿಗೆ ಹಿಡಿದ ಕೈಗನ್ನಡಿ.! ಈ ಹೊತ್ತಗೆ ಓದಿ ಮುಗಿಸುವ ಹೊತ್ತಿಗೆ ಮನಸಿನೊಳಗೆ ದಟ್ಟ ಮೌನದ ಮೋಡವೊಂದು ಕವಿದಿರುತ್ತದೆ.!
- ದೀ...!
Profile Image for Thejas Murthy.
4 reviews
March 17, 2026
'ಕಾಡು' ಬರಿಯೇ ಒಂದು ಹಳ್ಳಿಯ ಕತೆಯಾಗಿ ಉಳಿಯದೆ ಪ್ರಸ್ತುತ ನಮ್ಮ ಸಮಾಜದ ಕರಾಳ ಚಿತ್ರಣವಾಗಿವೇ ಆಗಿದೆ. ಇಡೀ ಕತೆಯ ಸುಖ, ದುಃಖ, ವ್ಯಥೆಯನ್ನು ಕಿಟ್ಟಿ ಎಂಬ ಎಂಟು ವರ್ಷ ವಯಸ್ಸಿನ ಹುಡುಗನ ದೃಷ್ಟಿಯಿಂದ ಲೇಖಕರು ತೋರಿಸಿರುವುದು ಅದನ್ನು ಇನ್ನೂ ಹೆಚ್ಚಾ ನಾಟುವಂತೆ ಮಾಡುತ್ತದೆ. ಓದುತ್ತಾ ಹೋದಂತೆ ನಾವೂ ಕಿಟ್ಟಿಯಾಗಿ, ಅವನ ಅಳುವೆ ನಮ್ಮ ಅಳುವಾಗಿ, ಆತನ ಖುಷಿಯೇ ನಮ್ಮ ಖುಷಿಯೂ ಆಗಿ, ಬೇಸರದ ಬಿಕ್ಕುವ ಸನ್ನಿವೇಶಗಳು ನಮ್ಮನೂ ಬಿಕ್ಕಿಸಿ ಕರುಳು ಹರಿಯುತ್ತವೆ; ಶ್ರೀಕೃಷ್ಣ ಆಲನಹಳ್ಳಿಯವರ ʼಕಾಡುʼ ಸದಾ ನಮ್ಮ ಮನದಲ್ಲೇ ಉಳಿಯುತ್ತದೆ.
Displaying 1 - 17 of 17 reviews