ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಕನ್ನಡ ಪಂಡಿತರಾದ ಅವರು ಶಾಸನಗಳ ಅಧ್ಯಯನ ಮತ್ತು ಶಾಸನಗಳ ಪದಕೋಶಗಳ ರಚನೆಯ ಜೊತೆಗೆ ಶಾಸನಗಳಲ್ಲಿ ಬಳಸಲ್ಪಟ್ಟ ಲಿಪಿಗಳ ಅಧ್ಯಯನ ನಡೆಸಿದ್ದಾರೆ. ಖರೋಷ್ಟಿ, ಬ್ರಾಹ್ಮಿ, ಶಾರದಾ, ನಾಗರೀ ನಂದಿನಾಗರೀ ಮತ್ತು ಕನ್ನಡ ಲಿಪಿಗಳ ಲಿಪ್ಯಂತರಣ. ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಪಾಲಿಯೋಗ್ರಾಫಿ ಮತ್ತು ಮ್ಯಾನ್ಯುಸ್ಕ್ರಿಪ್ಟಾಲಜಿಯಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ಶಿಲೆಗಳಲ್ಲಡಗಿದ ಸತ್ಯ’, ’ನಾಸತ್ಯಾ’ ಅವರ ಕೃತಿಗಳು. ’ಕಾಲಯಾನ’ ಅವರ ಇತ್ತಿಚಿನ ಕೃತಿ.
ಸದ್ಯೋಜಾತರ ಈ ಹಿಂದಿನ ಪುಸ್ತಕಗಳ ಓದಿದವರಿಗೆ ಅವರ ವಿದ್ವತ್ತಿನ ಬಗ್ಗೆ ತಿಳಿದಿರುತ್ತದೆ. ಈ ಪುಸ್ತಕವು ಅವರ ಪ್ರಕಟಗೊಂಡ ಕೃತಿಗಳಲ್ಲೇ ಶಿಖರಪ್ರಾಯವಾದದ್ದು. ಮಗಧವನ್ನು ಕೇಂದ್ರವಾಗಿಟ್ಟುಕೊಂಡು ಅವರು ಇತಿಹಾಸವನ್ನು ಆಧಾರಸಹಿತ ಪುನರ್ ನಿರೂಪಿಸುತ್ತಾರೆ. ಹೆಜ್ಜೆ ಹೆಜ್ಜೆಗೂ ಪಾಶ್ಚಾತ್ಯರ ತಪ್ಪು ಲೆಕ್ಕಾಚಾರ ಹಾಗೂ ನಮ್ಮವರ ಗೋಸುಂಬೆತನಕ್ಕೆ ಇತಿಹಾಸದ ಸತ್ಯಗಳು ಬದಲಾದ ರೀತಿ ನೋಡಿ ದಂಗಾಗಿಬಿಡುತ್ತೇವೆ.
ಈ ಕೃತಿ ಒಂದು ಮಥನ. ನಿಮಗೆ ಭಾರತದ ನೈಜ ಇತಿಹಾಸ ತಿಳಿವ ಆಸಕ್ತಿ ಇದ್ದರೆ ಈ ಕೃತಿ ಓದಿ. ಅಗಾಗ ಉಲ್ಲೇಖಿಸಲು ಆಕರ ಗ್ರಂಥವಾಗಿಯೂ ಸಂಗ್ರಹದಲ್ಲಿ ಇರಬೇಕಾದ ಪುಸ್ತಕ ಇದು.