ಖ್ಯಾತ ಕಾದಂಬರಿಕಾರ ರಾವಬಹಾದ್ದೂರ ಅವರ ಕಾದಂಬರಿ- ತಬ್ಬಲಿಗಳು. ದೇಶದ ಜನತೆಯು ಸ್ವಾತಂತ್ರ್ಯ ನಂತರ ತಬ್ಬಲಿಗಳಾದರೆ? ರಾಜಕೀಯದಲ್ಲಿ, ಪಾಶ್ಚಾತ್ಯರ ಅನುಕರಣೆ ಸಲ್ಲದು. .ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಆಗದು. ಭಾರತಕ್ಕೆ ವಿಶೇಷ ಸಂಸ್ಕೃತಿ, ರಾಜ್ಯನೀತಿ ಇದೆ. ದೇಶ ಸ್ವಾತಂತ್ರ್ಯ ನಂತರ ದಾರಿದ್ರ್ಯ ನಿವಾರಣೆಯ ಹೆಜ್ಜೆ ಹಾಕಿದೆಯೇ? ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ್ದ ರಾವಬಹಾದ್ದೂರರು, ಭಾರತವು ಸ್ವಾತಂತ್ರ್ಯ ಪಡೆದ ಉದಯ ಕಾಲದಲ್ಲಿ ಕಂಡ ಚಿತ್ರಣವನ್ನು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಈಗಲೂ ಈ ಕೃತಿಯ ವಸ್ತು ಅರ್ಥಗರ್ಭಿತ ಹಾಗೂ ಚಿಂತನಾರ್ಹವಾಗಿದೆ. ದೇಶದ ಸ್ವಾತಂತ್ಯ್ರ ನಂತರ ಜನರ ದಾರಿದ್ಯ್ರ ಮಾತ್ರ ಹೋಗಲಿಲ್ಲ. ಬಡತನದಿಂದ ಅವರಿಗೆ ಮುಕ್ತಿ ಸಿಗಲಿಲ್ಲ ಎಂಬುದೇ ಈ ಕಾದಂಬರಿಯ ವಸ್ತು ವಿಶೇಷ-ಸಂದೇಶ.
ಇ ಕತೆ ಸ್ವತಂತ್ರ ಬಂದ ರಾತ್ರಿ ಪಾಂಡವಪುರ ಎಂಬ ಒಂದು ಹಳ್ಳಿಯಲ್ಲಿ ನಡೆಯುವ
ಕತೆ. ಪಾಡುರಂಗರಾಯರು ಗಾಂಧಿವಾದಿಗಳು ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಪಾಲುಗೊಂಡವರು. ಅದೇ ಊರಿನ ತಿಪ್ಪಣ್ಣ ತಾನೂ ಗಾಂಧಿವಾದಿ ಅಂತ ಹೇಳಿಕೊಂಡು ಜನರ ದರೋಡೆಗೆ ನಿಂತ, ಪಾಂಡುರಂಗರಾಯರ ಮಗ ಸೋದರಮಾವನ ಸಹಾಯದಿಂದ ಓದಿ ಒಳ್ಳೆ ನೌಕರಿ ಹಿಡಿದು ಆಂಗ್ಲ ಹುಡಗಿಯನ್ನ ಮದುವೆಯಾಗಿದ್ದ. ತಂದೆ ಸತ್ತ ಸುದ್ದಿಕೇಳಿ ಊರಿಗೆ ಬಂದು ತಿಪ್ಪಣ್ಣನ ಸಹವಾಸ ಮಾಡಿ ಹಾಳಾಗಿ ಕೊಲೆ ಮಾಡಿಸಿ. ಅಧಿಕಾರ ದುರುಪಯೋಗ ಮಾಡಿಕೊಂಡು ಕೊನೆಗೆ ಜೈಲಿಗೆ ಹೋದ.
ಇ ಕಾದಂಬರಿ ಮುಖ್ಯವಾಗಿ ಕಾಂಗ್ರೆಸ್ ಹೆಸರು ಹೇಳಿಕೊಂಡು ಭ್ರಷ್ಟರೂ ಹೇಗೆ ಜನರನ್ನ ಯಾಮಾರಸಿ ತಮ್ಮ ಸ್ವಾರ್ಥ ಸಾಧನೆ ಮಾಡಿಕೊಂಡರು ಅಂತ ಮಾತನಾಡುತ್ತೆ....
ಈ ಕಾದಂಬರಿ ಓದೋಕೆ ಶುರು ಮಾಡ್ದಾಗ ಇನ್ಯಾವ ಕಾಲ ಬರುತ್ತೆ ಇದನ್ನ ಮುಗ್ಸೋಕೆ ಅಂತ ಬಾರೀ ಟೆನ್ಷನ್ ಶುರು ಆಗಿತ್ತು. ೩೦೦ ಚಿಲ್ರೆ ಪುಟಗಳು, ಏಕ್ದಂ ಒಂದರ ಮೇಲೆ ಒಂದು ಜಾಗ ಕೊಡೆದೆ ಬರೋ ಚಾಪ್ಟರುಗಳು ಇದನ್ನ ಮುಗ್ಸೋಕೆ ಆಗುತ್ತ ಅಂತ ಹೆದ್ರಿಕೆ ಹುಟ್ಟಿಸಿದಂತೂ ಹೌದು. ಸ್ವಾತಂತ್ಯ ಹೋರಾಟ, ಗಾಂಧಿ ತತ್ವ, ಹಿಂಸೆ ಮಾರ್ಗದ ಹೋರಾಟ ಅಂತೆಲ್ಲ, ಕೊನೆಗೆ ಸ್ವಾತಂತ್ರ್ಯ ಬಂದಮೇಲೆ ರಾಜಕತೆ, ಅರಾಜಕತೆ ಅಂತೆಲ್ಲ ಸ್ವತಃ ಲೇಖಕರೇ ಸ್ವಾತಂತ್ಯ ಹೋರಾಟದಲ್ಲಿ ಭಾಗಿಯಾಗಿ, ಸ್ವಾತಂತ್ಯ ಸಿಕ್ಕ ಕಾಲದಲ್ಲಿ ಕಂಡ ಚಿತ್ರಣವನ್ನು ಇಲ್ಲಿ ನೀಡಿದ್ದಾರೆ.