Jump to ratings and reviews
Rate this book

హంపి ఎక్స్‌ప్రెస్

Rate this book
Short Story Collection.

241 pages, Paperback

First published January 1, 2008

8 people are currently reading
150 people want to read

About the author

Vasudhendra

40 books390 followers
Vasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.

https://en.wikipedia.org/wiki/Vasudhe...

https://kn.wikipedia.org/wiki/%E0%B2%...

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
61 (39%)
4 stars
73 (47%)
3 stars
15 (9%)
2 stars
3 (1%)
1 star
2 (1%)
Displaying 1 - 23 of 23 reviews
Profile Image for Madhu B.
105 reviews10 followers
March 13, 2023
ಎಲ್ಲ ಕತೆಗಳು ತುಂಬಾ ಆಪ್ಯಾಯಮಾನವಾಗಿವೆ. ಕೆಂಪು ಗಿಣಿ ಎಂಬ ಕಥೆ ಬಳ್ಳಾರಿಯ ಗಣಿಗಾರಿಕೆಗೆ ಅಲ್ಲಿನ ಪ್ರಕೃತಿ ಹೇಗೆ ನಲಿಗೆ ಹೋಗಿವೆ ಅನ್ನೋದಕ್ಕೆ ನಿದರ್ಶನ. ನನಗು ನನ್ನ ಬಾಲ್ಯ ಸಂಡೂರಿನಲ್ಲಿ ಕಳೆದದ್ದು ನೆನಪಾಯ್ತು. ಆ ಹಚ್ಚ ಹಸಿರು ಊರು ಈಗ ಕೆಂಬೂತದ ನಾಡಾಗಿದೆ ಎಂದು ನನ್ನ ಕೆಲವು ಸ್ನೇಹಿತರು ಹೇಳೋದು ಕೇಳಿದ್ರೆ ವಸುದೇಂದ್ರರು ವಾಸ್ತವನ್ನ ಎಷ್ಟು ಚೆನ್ನಾಗಿ ಕಟ್ಟಿ ಕೊಟ್ಟಿದಾರೆ ಅನ್ಸುತ್ತೆ.
ಕ್ಷಮೆಇಲ್ಲದೂರಿನಲ್ಲಿ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ವಾಸಿಸುವವರಿಗೆ ಬೇಗನೆ ಅರ್ಥ ಆಗುತ್ತೆ.
ಎರಡು ರೂಪಾಯಿಯಲ್ಲಿ ಬರುವ ಕಾಶಜ್ಜಿ ನಮ್ಮನೇಲಿ ಇದ್ದ ನಮ್ಮಜ್ಜಿ ಅಕ್ಕ ಕಾಶಜ್ಜಿಯ ನೆನಪಾಯ್ತು. ವೇದಕ್ಕ ಪದ್ಮಾವತಿಯ ಮುಂದೆ ಬಳೆ ಒಡ್ಕೊಳೋ ಸನ್ನಿವೇಶ, ಅಭಿ ತನ್ನ ಮೊದಲನೇ ಸಂಬಳದಲ್ಲಿ ಅಮ್ಮನಿಗೆ ತಂದು ಕೊಡುವ ಸೀರೆ ಇಂತಹ ಮುಂತಾದ ಸನ್ನಿವೇಶಗಳು ತುಂಬಾ ಎಮೋಷನಲ್ ಮಾಡಿಸುತ್ತೆ ಓದುಗರನ್ನ.
Profile Image for Karthikeya Bhat.
110 reviews13 followers
July 4, 2021
*ಹಂಪಿ ಎಕ್ಸ್ ಪ್ರೆಸ್ ಕತೆಗಳು*
*ವಸುಧೆಂದ್ರ*


ಇಲ್ಲಿ ಬರುವುದು ಒಟ್ಟು ಎಂಟು ಕಥೆಗಳು, *ಸೀಳು ಲೋಟ, ಕೆಂಪು ಗಿಣಿ, ಕ್ಷಮೆಯಿಲ್ಲದೂರಿನಲ್ಲಿ, ಕೆಂಧೂಳಿ, ಹೊಸ ಹರೆಯ, ಎರಡು ರೂಪಾಯಿ, ನವಿರುಗರಿ, ಪೆದ್ದಿ ಪದ್ಮಾವತಿ*. ಈ ಕಥೆಗಳು ಕೆಲವು ಕಡೆ ಹಾಸ್ಯಕರವಾಗಿಯೂ ಹಾಗು ಕೆಲವರ ಜೀವನದಲ್ಲಿ ಇಂಥಾ ಘಟನೆಗಳು ನಡೆದಿರಬಹುದೇನೋ ಎಂದು ಅನ್ನಿಸುತ್ತದೆ.

ಇದರಲ್ಲಿ ನನಗೆ ತುಂಬಾ ಇಷ್ಟವಾದದ್ದು ಸೀಳು ಲೋಟ, ಕೆಂಪು ಗಿಳಿ, ನವಿರುಗರಿ ಹಾಗು ಪೆದ್ದಿ ಪದ್ಮಾವತಿ.

ಸೀಳು ಲೋಟದಲ್ಲಿ, ವಂಶಪಾರಂಪರ್ಯವಾಗಿ ಬಂದ ಆಚಾರದ ಪ್ರಕಾರ ತಿರುಪತಿ ತಿಮ್ಮಪ್ಪನನ್ನು ನೋಡಬೇಕೆಂದರೆ ಯಾವುದಾದರು ವಸ್ತುವನ್ನು ಕಳ್ಳತನ ಮಾಡಿ ಹುಂಡಿಗೆ ಹಾಕಬೇಕು ಎಂಬುದು‌. ಆಚಾರ್ಯರ ಮನೆಯಲ್ಲಿ *ಹುಲಿಕುಂಟಿ* ಸೀಳು ಲೋಟ ಕದಿಯುವ ಪ್ರಸಂಗ ತುಂಬಾ ಸೊಗಸಾಗಿದೆ. ಅದನ್ನು ತಿರುಪತಿ ಹುಂಡಿಗೆ ಹಾಕಲು ಹುಲಿಕುಂಟಿ, ತನ್ನ ಪತ್ನಿ ರಮಾಬಾಯಿ ಪಡುವ ಪ್ರಯತ್ನಗಳು ಹಾಗು ಮಧ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ.

*ಕೆಂಪು ಗಿಳಿಯಲ್ಲಿ ಬರುವ ಪ್ರಸಂಗ*: ಎಷ್ಟೋ ವರ್ಷಗಳಾದರು ತಮ್ಮ ಸ್ವಂತ ಹೊಲವನ್ನೇ ಕಾಣದಿರುವ ಮಕ್ಕಳು ಅಪ್ಪನ ಜೊತೆ ಹೊಲಕ್ಕೆ ಹೊರಡುತ್ತಾರೆ. ಕಾರಣ ಶಾಲೆಯಲ್ಲಿ *ನಮ್ಮ ಹೊಲ* ಬಗ್ಗೆ ‌ಪ್ರಬಂಧ ಬರೆಯಲು ಮಾಸ್ತರರು ಹೇಳಿದಾಗ, ಮರದಲ್ಲಿ ಈರುಳ್ಳಿ ಬೆಳೆಯುತ್ತವೆಂದು, ಕೆಂಪು ಅಲ್ಲದೆ ನೀಲಿ,ಹಳದಿ,ಹಸಿರು, ಕಪ್ಪು ಈರುಳ್ಳಿ ಬೆಳೆಯುತ್ತವೆಂದು, ದಾರಿಯ ಹೆಜ್ಜೆ ಹೆಜ್ಜೆಗೂ ಕಮಲ ಹೂವು ಬೆಳೆಸಿದ್ದೇವೆಂದು, ಆಗಾಗ ಲಕ್ಷ್ಮಿ, ಸರಸ್ವತಿ, ಬ್ರಹ್ಮ ಬಂದು ತಮ್ಮ ಹೊಲದಲ್ಲಿ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾರೆಂದು, ಹೊಲದಲ್ಲಿ ಸಮುದ್ರವಿದೆಯಂದು, ಅಲ್ಲಿ ತಾನು ಖುಷಿಯಾಗಿ ಈಜಾಡುತ್ತಾನೆಂದು, ತನಗೆ‌ ತೋಚಿದ್ದು ಬರೆದಾಗ ಮಾಸ್ತರರು ಬೈಯ್ಯುತ್ತಾರೆ, ಆತನ ಅಜ್ಞಾನವನ್ನು ಕಂಡು ಸ್ನೇಹಿತರೆಲ್ಲ ಬಿದ್ದು ಬಿದ್ದು ನಕ್ಕಾಗ ಅವಮಾನವಾಗುತ್ತದೆ. ಮಗನು ಬರೆದ ಪ್ರಬಂಧ ದಿಂದ ಅವನ ಅಜ್ಞಾನವನ್ನು ಕಂಡು ಸಿಟ್ಟಾಗಿ ಹೊಲ ತೋರಿಸಲು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ವಿಚಿತ್ರವೆಂದರೆ ತಂದೆಗೂ ಹೊಲ ಎಲ್ಲಿರುವುದೆಂದು ಮರೆತುಹೋಗಿರುತ್ತದೆ. ಈರಪ್ಪನ ಹೊಲ ಎಂದು ಕೇಳಿದಾಗ ದಾರಿಗೊತ್ತಾಗುತ್ತದೆ. ಇದರಿಂದ ತಂದೆಗೆ ಅಸಮಾಧಾನ ಹೊಲ ತನ್ನದು ಈರಪ್ಪನದಲ್ಲ. ಆತನು ಹೊಲದಲ್ಲಿ ದುಡಿಯುವುದು ಮಾತ್ರಕ್ಕೆ ಹೊಲ ತನ್ನದಾಗುತ್ತದಯೇ ಎಂಬ ಅಸಮಾಧಾನ. ಆದರೆ ಹೊಲವನ್ನು ಕಂಡಾಗ ತನಗೂ ಅಕ್ಕನಿಗೆ ಆದ ಖುಷಿ ಅಷ್ಟಿಷ್ಟಲ್ಲ. ಹೊಲ ತುಂಬಾ ಕಣ್ಣಾಯಿಸುವಾಗ ತಂದೆ ಬಂದು ಈರುಳ್ಳಿ ಗಿಡವನ್ನು ತೋರಿಸಿ ಮರದಲ್ಲಿ ಬೆಳೆಯುವುದಿಲ್ಲ ಎಂದಾಗ ತೆಪ್ಪಗಿದ್ದೆ. ಮೆಣಸಿನಕಾಯಿ ಗಿಡಗಳು, ಇತರೆ ತರಕಾರಿ ಗಿಡಗಳನ್ನು ಕಂಡು ಆನಂದವಾಯಿತು, *ಈರಪ್ಪ ಪಕ್ಕನೆ ಒಂದು ಗಿಣಿಯನ್ನು ಹಿಡಿದು ಬಿಟ್ಟ, ಅದರ ಹಸಿರು ಮೈ, ಕೆಂಪು ಕೊಕ್ಕು ನೋಡುವುದರಲ್ಲೇ ಆಶ್ಚರ್ಯ. ಗಿಣಿಗೆ ಕೆಂಪು ಬಣ್ಣ ಹಚ್ಚಿ ಬಿಟ್ಟರೆ ಹಸಿರು ಗಿಡದಲ್ಲಿ ಕೆಂಪು ಬಣ್ಣದ ಗಿಳಿಯನ್ನು ಕಾಣುವ ಆಸೆಯಾಯಿತು.* ಅಕ್ಕನ ಮದುವೆಗೆ‌ ಹೊಲವನ್ನು ಅಪ್ಪ ಮಾರಿದರು. ಹೀಗೆ ವರ್ಷಗಳು ಕಳೆದು ಇಂಜಿನಿಯರಿಂಗ್ ಕಡೇ ಸೆಮಿಸ್ಟರ್ ವೇಳೆಯಲ್ಲಿ ಊರಿಗೆ‌ಭೇಟಿ ಕೊಟ್ಟಾಗ ತನ್ನ ಹೊಲವನ್ನು ಗುರುತು ಹಿಡಿಯುವುದೇ ಕಷ್ಟವಾಯಿತು. ಅಂತೂ ಮಿತ್ರನ ಜೊತೆ ಹುಡುಕಿಕೊಂಡು ನೋಡಿದಾಗ ಮೈನಿಂಗ್ ಪ್ರಭಾವದಿಂದ‌ ರಸ್ತೆ, ಕಟ್ಟಡ ಹಾಗು ಹೊಲ ಎಲ್ಲಾ ಕೆಂಪು ‌ಮಣ್ಣಿನ ಧೂಳೇ ತುಂಬಿಕೊಂಡಿತ್ತು. ಮರದ ಮೇಲೆ ಕೆಂಪೂ ಧೂಳಿನ ಗಿಣಿಯನ್ನು ಕಂಡು ಬೇಸರವಾಗಿ ಬೌದುಬಿಟ್ಟೆ, ಎಷ್ಟು ಪರಿವರ್ತನೆಗೊಂಡಿದೆ, ಆಗಿನ ಕೆಂಪು ಗಿಣಯ ವರ್ಣನೆಗೂ, ಈಗಿನ ಪರಿಸ್ಥಿತಿಯನ್ನು ನೆನೆದು ದುಃಖವಾಗುತ್ತದೆ.

ಉಳಿದ ಕಥೆಗಳೂ ಇಷ್ಟವಾಯಿತು

*ಕಾರ್ತಿಕೇಯ*
Profile Image for Vageesha.
54 reviews29 followers
December 26, 2016
I read it in one go. interesting Stories. Vasudendra way of narrating story is simple and connects readers to the stories. "ಕೆಂಪು ಗಿಣಿ" is my favorite.❤❤❤
Profile Image for ಸುಶಾಂತ ಕುರಂದವಾಡ.
431 reviews26 followers
June 3, 2023
ಪುಸ್ತಕ: ಹಂಪಿ ಎಕ್ಸಪ್ರೆಸ್
ಲೇಖಕರು: ವಸುಧೇಂದ್ರ

ವಸುಧೇಂದ್ರ ಅವರ ಪುಸ್ತಕಗಳನ್ನು ಓದುವುದೇ ಮಜ. ತಿಳಿಹಾಸ್ಯ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುವ ಕಹಿನೆನಪುಗಳ ಲೇಖನಗಳು ಇರುತ್ತವೆ. ಪಾತ್ರಗಳ ಸಂಭಾಷಣೆಗಳು ನಮ್ಮನಮ್ಮೊಳಗೆಯೇ ಹಿಂದೆ ಆಗಿವೆ ಅಂತ ಅನಿಸುತ್ತವೆ. ಈ ಪುಸ್ತಕದಲ್ಲಿ ಎಂಟು ಕಥೆಗಳಿದ್ದು, ಕಥೆಯ ಸಾರಾಂಶ ನಮಗೆ ಸಾಧಾರಣ ಅಂತ ಅನಿಸಿದರೂ ಪಾತ್ರಗಳಲ್ಲಿಯ ಭೋಳೆತನ, ಹೆದರಿಕೆ ನಮ್ಮ ಜೀವನದಲ್ಲಿ ಆಗಿರುತ್ತವೆ.
ಮೊದಲನೇ ಕಥೆ ಸೀಳುಲೋಟದಲ್ಲಿ ಅಣ್ಣ ತಂಗಿಯ ಕೆಥೆಯಿದ್ದು, ಅಣ್ಣ ಸಿರಿವಂತ ಮತ್ತು ತಂಗಿಯ ಕುಟುಂಬ ಅಷ್ಟೇನು ಸಿರಿವಂತ ಇರುವುದಿಲ್ಲ. ಆ ತಂಗಿ ಅಣ್ಣನ ಮಗಳ ಮದುವೆಗೆ ತಿರುಪತಿಗೆ ಹೋದಾಗ ಅಲ್ಲಿ ನಡೆಯುವ ಪ್ರಸಂಗ ಇಲ್ಲಿ ಲೇಖಕರು ಚಿತ್ರಿಸಿದ್ದಾರೆ. ಹಾಗೆ, ಸೀಳುಲೋಟ ಈ ಕಥೆಗೆ ಹೆಸರು ಇಡಲು ಕಾರಣವೇನು ಅಂತ ತಿಳಿಯಲು ಕಥೆ ಓದಬೇಕು. ಅದು ತಿಳಿಹಾಸ್ಯದಿಂದಾಗಿದೆ. ಹಾಗೆಯೇ ಆ ಕಾರಣ ತಿಳಿದಾಗ ಪಾತ್ರಗಳು ಎಷ್ಟು ಭೋಳೆ ಸ್ವಭಾವದವರು ಅಂತ ಅನಿಸುವುದುಂಟು
ಕೆಂಪು ಗಿಣಿ ಕಥೆಯಲ್ಲಿ ಬಳ್ಳಾರಿ ಸಮೀಪದ ಹಳ್ಳಿಯಲ್ಲಿಯ ಹುಡುಗ ಬೆಳೆದು ದೊಡ್ಡವನಾದ ಮೇಲೆ ಬೆಂಗಳೂರಿಗೆ ಕೆಲಸಕ್ಕಾಗಿ ಹೋಗಿತ್ತಾನೆ. ಬಹುವರ್ಷದ ತರುವಾಯ ತನ್ನ ಊರಿಗೆ ಮರಳಿದಾಗ ತನ್ನ ಊರಿನಲ್ಲಾದ ಬದಲಾವಣೆ ಕಂಡು ವಿಷಮದ ಛಾಯೆ ಅವನ ಮುಖದ ಮೇಲೆ ಏರುತ್ತದೆ.
ಕ್ಷಮೆಯಿಲ್ಲದೂರಿನಲಿ ಕಥೆಯಲ್ಲಿ ದೊಡ್ಡ ಪಟ್ಟಣಗಳಲ್ಲಿ ನಡೆಯುವ ಅರ್ಥಹೀನ ಬದುಕುಗಳು ಮತ್ತು ಕೃತಘ್ನ ಜನಗಳ ಬಗ್ಗೆ ಬರೆದಿದ್ದಾರೆ.
ಹೊಸ ಹರೆಯ ಕಥೆಯಲ್ಲಿ ಇಂದಿನ ಪೀಳಿಗೆಯ ಜನರು ಎಷ್ಟು ಮುಂದುವರೆದಿದ್ದಾರೆ ಮತ್ತು ಅದರಿಂದ ಅವರ ತಂದೆತಾಯಿಗಳ ಮನಸ್ಸಿನಲ್ಲಿ ಯಾವ ರೀತಿ ವ್ಯಾಕುಲ ಮೂಡಿಸುತ್ತದೆ ಎಂಬುದರ ಬಗ್ಗೆ ಇದೆ.
ಎರಡು ರೂಪಾಯಿ ಮಾನವೀಯತೆ ಮತ್ತು ಮೌಲ್ಯಗಳ ಆಧಾರದ ಮೇಲೆ ರಚಿಸಿರುವ ಸುಂದರ ಕಥೆ. ಇನ್ನು ನವಿಲು ಗರಿ ಮತ್ತು ಪೆದ್ದಿ ಪದ್ಮಾವತಿ ಕಥೆಗಳೂ ಮಾನವೀಯತೆ ಮೌಲ್ಯಗಳ ಮೇಲೆ ಆಧಾರಿತವಾದ ಸುಂದರವಾದ ಕಥೆಗಳು.
ಕಥೆಗಳಲ್ಲಿಯ ಭಾಷೆಯು ನಗೆ ತರಿಸುವ ಹಾಗಿದ್ದರೂ ಆ ಪ್ರದೇಶಗಳಲ್ಲಿ ಅವು ಸಹಜ. ಕಥೆಗಳ ಸಾರಾಂಶ ಅಷ್ಟು ಗಂಭೀರವಾಗಿದ್ದರೂ ಭಾಷೆ ಮೂಲಕ ತಿಳಿ ಹಾಸ್ಯವನ್ನು ಸೃಷ್ಟಿಸಿದ್ದಾರೆ ವಸುಧೇಂದ್ರ ಅವರು.
1 review
January 8, 2023
ಹಂಪಿ ಎಕ್ಸ್ ಪ್ರೆಸ್,ವಸುಧೇಂದ್ರ ಅವರ ಈ ಪುಸ್ತಕಕ್ಕೆ ಎಕ್ಸ್ ಪ್ರೆಸ್ ವೇಗದಲ್ಲಿಯೇ ಓದಿಸಿಕೊಂಡು ಹೋಗುವ ಶಕ್ತಿಯಿದೆ. ಈ ಪುಸ್ತಕದ ಪ್ರತಿ ಕಥೆಯ ಓದಿನ ಪಯಣ ಸರಾಗವಾಗಿ ಮತ್ತು ಅಷ್ಟೇ ನಿರ್ಲಿಪ್ತವಾಗಿ ಶುರುವಾಗಿ ಕಥೆ ಮುಕ್ತಾಯದ ನಿಲ್ದಾಣಕ್ಕೆ ಬರುವಷ್ಟರಲ್ಲಿ ಗಾಢವಾದ ವಿಚಾರಧಾರೆಗೆ ಒಳಗಾಗಿಸುತ್ತವೆ. ಈ ಕಥಾಸಂಕಲನ ಅತಿ ಹೆಚ್ಚು ಆಪ್ತವಾಗುವುದು ಇಲ್ಲಿನ ಬಹುತೇಕ ಪಾತ್ರಗಳಿಗಿರುವ ಸ್ಥೈರ್ಯ ಮನೋಭಾವದಿಂದ, ಜೀವನದ ಆಳಕ್ಕೆ ಬಿದ್ದರೂ ಎದೆಗುಂದದೆ ಮೇಲೆದ್ದು ಜೀವಿಸಲು ಹೊರಟ ಆ ವಿಶಿಷ್ಟ ಪಾತ್ರಗಳ ಹೋರಾಟದ ಪ್ರಕ್ರಿಯೆಯಿಂದ.ಇದು ಬರೀ ಪಾತ್ರಗಳ ಸ್ವಭಾವ ಆಗಿರದೆ ಸಮಸ್ತ ಬಯಲು ಸೀಮೆಯ ಸ್ವರೂಪವನ್ನ ಪ್ರತಿನಿಧಿಸುತ್ತದೆ. ಕೆಲ ಕತೆಗಳಲ್ಲಿ ಈಗೀನ ಯುವ ಪೀಳಿಗೆ ತ್ರಂತಜ್ಞಾನದ ಎಣಿ ಹಿಡಿದು ಮುಗಿಲೆತ್ತಕ್ಕೆ ಹಾರಿದರೂ ಸಂಭಂದಗಳಲ್ಲಿ ದುರ್ಗಮ ಪ್ರಪಾತಕ್ಕಿಳಿದು ಅಧಃಪತನಗೊಳ್ಳುವುದನ್ನ ಭೀಕರ ಮೌನದಿಂದ ಹೇಳಿದ್ದಾರೆ. ಶುರುವಾತಿನ ಸ್ಟೇಷನ್ ಸಿಳುಲೋಟದಿಂದ ಹಿಡಿದು ಕೊನೆಯ ಸ್ಟೇಷನ್ ಪೆದ್ದಿ ಪದ್ಮಾವತಿತನಕ ಒಂದೊಳ್ಳೆ ಓದಿನ ಪಯಣದ ಅನುಭೂತಿಯನ್ನು ಈ ಪುಸ್ತಕ ನೀಡುತ್ತದೆ.
23 reviews9 followers
July 26, 2022
ಹಂಪಿ ಎಕ್ಸ್ ಪ್ರೆಸ್ ಇದು ವಸುಧೇಂದ್ರ ಅವರ 8 ಕಥೆಗಳ ಸಂಕಲನ.
ಸೀಳು ಲೋಟ, ಕೆಂಪು ಗಿಣಿ, ಕ್ಷಣೆಯಿಲ್ಲದೂರಿನಲ್ಲಿ, ಕೆಂಧೂಳಿ, ಹೊಸ ಹರೆಯ, ಎರಡು ರೂಪಾಯಿ, ನವಿರುಗರಿ, ಪೆದ್ದಿ ಪದ್ಮಾವತಿ.
ಪ್ರತಿಯೊಂದು ಕಥೆಯೂ ತುಂಬಾ ಅಚ್ಚುಕಟ್ಟಾಗಿದೆ.
ರಮಾಬಾಯಿ ಮತ್ತು ಹುಲಿಕುಂಟನ ಮುಗ್ಧತೆ, ಬಳ್ಳಾರಿಯ ಮೈನ್ಸ್ ನಿಂದ ಆದ ವಿಷಾದದ ಅಭಿವೃದ್ದಿ, ವಿಷ್ಣುವಿನ ಸಾವು, ಗಾಯಿತ್ರಿಯ ಮಾತೃ ಮಮತೆ, ಕಾಶವ್ವನ ಪ್ರಾಮಾಣಿಕತೆ, ವೆಂಕಟೇಶನ ನೆರವೇರದ ಬಯಕೆ, ವೆದಮ್ಮ ಮತ್ತು ಪದ್ಮಾವತಿಯ ಕಷ್ಟ ಕಾರ್ಪಣ್ಯ ಬದುಕು. ಹೀಗೆ ಒಂದೊಂದು ಕಥೆಯು ಒಂದೊಂದು ಬಗೆಯಲ್ಲಿ ಪ್ರಭಾವ ಬೀರುತ್ತ ಹೋಗುತ್ತೆ. ಪ್ರತೀ ಕಥೆಯೂ ಒಂದೊಂದು ನಿಟ್ಟುಸುರಿಂದ ಮುಗಿದು ಹೋಗುತ್ತೆ.

ಒಂದೇ ಸಲ ಕುಳಿತು, ಸರಾಗವಾಗಿ ಓದಿಸಿಕೊಂಡು ಹೋಗುವ ಪುಸ್ತಕ ಇದು.
Profile Image for Vaidya.
260 reviews81 followers
March 23, 2025
Beautiful set of shorts. I liked the ones set in Bellary a lot more than the ones in Bangalore. Not that the latter weren't good, the former were a class apart!

The attention to details, with the customs and rituals, is what makes them so attractive. In so many ways Vasudhendra's gaze reminded me of Yasujiro Ozu's movies and the way Ozu looks at families and their bonds.
Profile Image for Dhananjay Hegde.
34 reviews3 followers
February 7, 2020
ಹೊಸತನದಿಂದ ಕೂಡಿದ, ಸರಳವಾಗಿಯೂ ಇರುವ ವಸುಧೇಂದ್ರರವರ ಬರವಣಿಗೆಯ ಶೈಲಿ ಹಿಡಿಸಿತು. ‘ಕೆಂಪು ಗಿಣಿ’ ಮತ್ತು ‘ಪೆದ್ದಿ ಪದ್ಮಾವತಿ’ ತುಂಬ ಚೆನ್ನಾಗಿವೆ. ಬದಲಾದ ಸಾಮಾಜಿಕ ಪರಿಸ್ಥಿತಿಯನ್ನು ಎತ್ತಿ ತೋರಿಸುವ ‘ಹೊಸ ಹರೆಯ’ ಮತ್ತು ‘ಕ್ಷಮೆಯಿಲ್ಲದೂರಿನಲಿ’ ಓದುಗರನ್ನು ಚಿಂತನೆಗೆ ಹಚ್ಚುತ್ತವೆ.
Profile Image for Nathan.
435 reviews11 followers
November 18, 2019
Very nice short story collection. ಕೆಂಪು ಗಿಣಿ was my favorite!!!
ಕನ್ನಡ ಅಂತ ಒಂದು ಶೇಲ್ಫ್ add ಮಾಡೋದಕ್ಕೆ ಆಗಲಿಲ್ಲ😟😔
Profile Image for Nandeesh.
8 reviews2 followers
October 10, 2020
ಕಥೆಗಳಲ್ಲಿ ಹೊಸತನವಿದೆ.ಒಂದೊಂದು ವಿಭಿನ್ನ.ನವಿಲುಗರಿ,ಹೊಸ ಹರೆಯ,ಸೀಳು ಲೋಟ, ಕೆಂಪು ಗಿಳಿ ಹಿಡಿಸಿದ ಕಥೆಗಳು.
5 reviews1 follower
August 20, 2021
ಕೆಂಪು ಗಿಣಿ, ಸೀಳು ಲೋಟ ಇಷ್ಟವಾಯಿತು
4 reviews4 followers
August 10, 2022
ಅಲ್ಲಲ್ಲಿ ಬಂದು ಹೋಗುವ ಹಂಪಿ ಎಕ್ಸ್ಪ್ರೆಸ್ ವಸುಧೇಂದ್ರ ಸರ್ ಅವರ ಬರವಣಿಗೆ ಮೂಲಕ ನಮ್ಮಲ್ಲಿ ಗೊತ್ತಾಗದೆ ಹಾದು ಹೋಗುವ ರೀತಿ ಇದೆ, ಸಮಯ ಮಾಡ್ಕೊಂಡ್ ಓದಿ
.
ತುಂಬಾನೇ ಇಷ್ಟ ಆಗುತ್ತೆ
Profile Image for Nishchita.
15 reviews4 followers
January 31, 2023
ಒಟ್ಟು ೮ ಕಥೆಗಳಿರುವ ಕಥಾಸಂಕಲನ. ಪ್ರತಿಯೊಂದು ಕಥೆಯು ಓದುಗನಿಗೆ ಖುಷಿ ಕೊಡುತ್ತೆ. ಸರಳವಾಗಿ ಅಷ್ಟೇ ರಸವತ್ತಾಗಿ ಕಥೆಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವಂತ‌ಹ ಪುಸ್ತಕ.
Profile Image for Krishna Teja.
5 reviews
July 18, 2023
One of those beautiful books, with stories that touched various aspects of life in a beautiful way and rarely viewed perspective..
Profile Image for Keerthan G.
3 reviews1 follower
December 19, 2018
The book is a collection of short stories. The most notable among them is 'ಕೆಂಪು ಗಿಳಿ' which is a work of brilliance. I read it sometime back and only remember this story among others as it stuck with me. A 6/5 for this particular story.
Displaying 1 - 23 of 23 reviews

Can't find what you're looking for?

Get help and learn more about the design.