ಕನ್ನಡ ಚಲನಚಿತ್ರಗಳು ಬಿಡುಗಡೆಯ ಮುನ್ನವೆ ಟಿಕೆಟ್ಗಳೆಲ್ಲ ಖಾಲಿ ಆಯ್ತೆಂದ್ರೆ ಇಲ್ಲವೇ ಕನ್ನಡ ಪುಸ್ತಕವೊಂದು ಲೋಕಾರ್ಪಣದ ಮುನ್ನವೆ ಮೊದಲ ಮುದ್ರಣ ಖಾಲಿ ಆದಾಗ ಕನ್ನಡದ ಅಭಿಮಾನಿಯಾಗಿ ನಮಗೆ ಬಹಳ ಸಂತೋಷವಾಗುತ್ತದೆ.. ಈ ರೀತಿಯ ಸಂತೋಷ ನನಗೆ ಆಗಿದ್ದು ತೀರ ಇತ್ತೀಚೆಗೆ, ವಸುದೇಂದ್ರರ ತೇಜೋ ತುಂಗಭದ್ರಾ ಪುಸ್ತಕ ಬಿಡುಗಡೆಯ ಮುನ್ನವೇ ಮೊದಲ ಮುದ್ರಣ ಖಾಲಿ ಎಂಬ ಸುದ್ದಿ ಓದಿದಾಗ...ಬಿಡುಗಡೆಯ ಮುನ್ನವೇ ಪುಸ್ತಕ ನಿಮ್ಮ ಕೈ ಸೇರುತ್ತದೆ ಎಂಬ ಸುದ್ದಿ ಕೇಳಿದ ತಕ್ಷಣ order ಮಾಡಿದ್ದಯ್ತು, ಆದರೆ ನನ್ನ ದುರಾದೃಷ್ಟಕ್ಕೆ ನನ್ನ ಕೈ ಸೇರಿದ್ದು ಬಿಡುಗಡೆ ಆಗಿ 4 ದಿನದ ನಂತರ, ಏನೇ ಇರಲಿ ಪುಸ್ತಕ ಸಿಕ್ಕಿದ್ದು ಆಯ್ತು, ಓದಿದ್ದು ಆಯ್ತು.... ಒಂದೇ ಶಬ್ದದಲ್ಲಿ ಪುಸ್ತಕವನ್ನು ವಿಮರ್ಶಿಸಬೇಕಂದರೆ "ಅದ್ಬುತ"...
ವಸುದೆಂದ್ರರು ಈ ಕಾದಂಬರಿ ಬರೆಯೋಕೆ ಮಾಡಿಕೊಂಡಿರುವ ತಯ್ಯಾರಿ ಅಗಾಧ ಮತ್ತು ಅತ್ಯವಶ್ಯಕ, ಕೃಷ್ಣದೇವರಾಯರ ಕಾಲದ ಕಷ್ಟ ಕಾರ್ಪಣ್ಯ, ಅವರ ಉಡುಗೆ ತೊಡುಗೆ, ಅವರ ಆಹಾರ ಪದ್ದತಿ, ಪೋರ್ಚುಗೀಸರ ಪದ್ದತಿಗಳು, ಬಹಮನಿಗಳ ಪದ್ದತಿಗಳು, ಯಹೂದಿಗಳ ಪದ್ದತಿಗಳು ಇವೆಲ್ಲವನ್ನು ಅಗೆದು ಬಗೆದು ಒಂದು ಸುಕೃತಿಯನ್ನು ನಮ್ಮ ಮಡಿಲಿಗೇರಿಸಿದ್ದಾರೆ,
ಇಲ್ಲಿ ಚಿಕ್ಕ ಚಿಕ್ಕ ಪಾತ್ರಗಳು ಕಾಡುತ್ತದೆ, ಎಲ್ಲ ಪಾತ್ರಗಳು ಇಲ್ಲಿ ಎಷ್ಟು ಅದ್ಭುತವಾಗಿ ಕಾದಂಬರಿಗೆ ಹೊಂದುಕೊಳ್ಳುತದೆಯಂದರೆ ಒಂದು ಪಾತ್ರ ಇಲ್ಲದಿದ್ದರೂ ಕಾದಂಬರಿ ಅಪೂರ್ಣ ಆಗುತ್ತಿತೇನೋ ಎಂದು ಭಾಸವಾಗುತ್ತದೆ, ಗೇಬ್ರಿಯಲ್, ಬೆಲ್ಲಾ, ಹಂಪಮ್ಮ, ಕೇಶವ, ಮಾಪನ, ಚಂಪಕ್ಕ, ಗುಣಸುಂದರಿ, ಜಕೋಬ್, ಅಗ್ವೇದ, ಅಡವಿಸ್ವಾಮಿ, ಈಶ್ವರಿ, ಅಹ್ಮದಕಣ್ಣ, ಬ್ಯಾಲಮ್, ಮಮ್ತಾಜ್ ಮುಂತಾದವು ಒಂದೊಂದು ಪಾತ್ರವು ಒಂದೊಂದು ಕಥೆ ಹೇಳುತ್ತದೆ...
ಕಾದಂಬರಿಯ ಸಂಭಾಷಣೆ ಮತ್ತು ಭಾಷೆ ಎಷ್ಟು ಚಂದವೋ ಅಷ್ಟೇ ಹರಿತವು ಕೂಡ... ನನಗೆ ಬಹಳ ಕಾಡಿದ ಕೇಲವು ಹೀಗಿವೆ
1. ಒಮ್ಮೆಇಡೀ ಜಗತ್ತಿಗೆ ಒಂದೇ ಧರ್ಮವಿದ್ದರೆ ಚೆನ್ನಾಗಿತ್ತು ಹೀಗೆ ಒಬ್ಬರನ್ನೊಬ್ಬರು ಅಧರ್ಮಿಗಳೆಂದು ಜರಿದು ಬಡಿದಾಡುವ ಸಂದರ್ಭ ಇರುತ್ತಿರಲಿಲ್ಲ
2. ಸತ್ಯವನ್ನು ಅರುಹಿದರೂ ಅರ್ಥ ಮಾಡಿಕೊಳ್ಳುವ ಯೋಗ್ಯತೆ ಮನುಷ್ಯರಿಗಿಲ್ಲವೆಂದು ನದಿ ಬೆಟ್ಟಗಳು ಮೌನಿಗಳಾದವೆ?
3. ಭವಿಷ್ಯದ ತಿರುವುಗಳನ್ನು ನಮಗೆಲ್ಲ ಊಹಿಸಲು ಸಾಧ್ಯವಾಗಿಬಿಟ್ಟರೆ, ಇನ್ನು ಬದುಕಿನಲ್ಲಿ ಉಳಿಯುವ ಆಸಕ್ತಿಯಾದರು ಏನು?
4. ದ್ವೇಷ ಅದೆಷ್ಟು ಭೀಕರವಾಗಿತ್ತೆಂದರೆ, ಪೋರ್ಚುಗೀಸ್ ಯುವಕ ತುಂಬು ಬಸುರಿಯನ್ನು ಕೊಂದಿದ್ದು ಅಲ್ಲದೆ, ಆಕೆಯ ಹೊಟ್ಟೆಯನ್ನು ಬಗೆದು ಆ ಹುಟ್ಟದ ಮಗುವಿನ ತಲೆಯನ್ನು ಕಡಿದುಬಿಟ್ಟ.
ಹೀಗೆ ಪುಟ ಪುಟಕ್ಕೂ ಅನಮ್ಯ ಪಾತ್ರಗಳ ಮತ್ತು ಸೊಗಸಾದ ಭಾಷೆಯ ಮೂಲಕ ವಸುದೆಂದ್ರರು ನಮ್ಮನ್ನು ಆವರಿಸುತ್ತ ಹೋಗುತ್ತಾರೆ.... ಈಗಿನ ಭಾರತೀಯ ರಾಜಕೀಯ ಪರಿಸ್ಥಿತಿಗು ಕಾದಂಬರಿಯ ವಸ್ತುವಿಗೂ ಬಹಳ ಸಾಮ್ಯವಿರುದರಿಂದ ಈ ಕೃತಿ ನಮ್ಮನ್ನು ಒಂದು ಗಳಿಗೆಗಾದರೂ, ಮನುಜ ಎಷ್ಟೇ ಪ್ರತಿಭಾವಂತನಾದರೂ ಇವ ಪಾಪಿಯೆ ಎನಿಸುತ್ತದೆ, ಏಕೆಂದರೆ ಶತಮಾನಗಳು ಉರಳಿದರೂ ಮನುಜ ಇತಿಹಾಸದಿಂದ ಏನನ್ನೂ ಕಲಿಯಲಿಲ್ಲ, ಅದಕ್ಕೆ ಎನೋ ಹಸ್ತಾಕ್ಷರದ ಜೊತೆಗೆ ಲೇಖಕರು ಇತಿಹಾಸವೆಮಗೆ ಗುರು ಎಂದು ಬರೆದದ್ದು....
ಹೀಗೆ ಹೇಳುತ್ತಾ ಹೋದರೆ ಗ್ರಂಥವಾದಿತು... ಒಟ್ಟಿನಲ್ಲಿ ಇದು ಎಲ್ಲ ಕನ್ನಡಿಗರು ಓದಲೇಬೇಕಾದ ಕೃತಿ.... ಇದು ದೀರ್ಘ ಅನ್ನಿಸೋದೆ ಇಲ್ಲ... ಗಾತ್ರ ನೋಡಿ ಓದದೇ ಇರಬೇಡಿ... ಮೊದಲ ಪುಟದಿಂದ 451ನೆ ಪುಟದ ವರೆಗೂ ಇದು ನಿಮ್ಮನ್ನು ನಿರಾಶೆ ಮಾಡೋದಿಲ್ಲ...
ಕಾದಂಬರಿಯ ಓದಿದ ಕೊನೆಗೆ ನಮಗೆ ಅನಿಸೋದು ಇಷ್ಟೇ "ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ"...