Jump to ratings and reviews
Rate this book

ಮಾಯಾಲೋಕ - ೧ | Maayaloka -1

Rate this book
39 people are currently reading
1127 people want to read

About the author

K.P. Poornachandra Tejaswi

59 books1,113 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
109 (50%)
4 stars
71 (32%)
3 stars
27 (12%)
2 stars
4 (1%)
1 star
5 (2%)
Displaying 1 - 24 of 24 reviews
Profile Image for That dorky lady.
400 reviews77 followers
May 24, 2016
ಪೂರ್ಣಚಂದ್ರ ತೇಜಸ್ವಿಯವರ ಇತರೆಲ್ಲಾ ರಚನೆಗಳಿಗಿಂತಲೂ ಭಿನ್ನವಾಗಿ ಇಷ್ಟವಾಗೋದು ಈ ಮಾಯಾಲೋಕ-೧.ಅವರೇ ಹೇಳಿಕೊಂಡಿರುವಂತೆ ಇದೊಂದು ಕೊಲಾಝ್ ಮಾದರಿಯ ಕೃತಿ. ಒಟ್ಟಾರೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಸಾಗೋ ದಿನನಿತ್ಯದ ಘಟನೆಗಳೆಲ್ಲಾ ಸೇರಿ ಒಂದು ಅಪರೂಪದ ಕಥೆ ಸೃಷ್ಟಿಯಾಗಿರು ಪರಿ it's just amazing. ನನ್ನಿಂದ ಹತ್ತಾರು ಸಲ ಮತ್ತೆ ಮತ್ತೆ ಓದಿಸಿಕೊಂಡ ಪುಸ್ತಕ. I love it.
Profile Image for Aadharsha Kundapura.
64 reviews
January 13, 2026
ಮಾಯಾವಿ ತೇಜಸ್ವಿಯ ಕೃತಿಗಳೆಲ್ಲ ಒಂತಾರ ಮಾಯಾಲೋಕ ಇದ್ದ ಹಾಗೆ. ಅದರಲ್ಲೂ ಈ ಶೀರ್ಷಿಕೆ ನೋಡಿ ಇನ್ನಷ್ಟು ಕುತೂಹಲ ಮೂಡಿತ್ತು ನನಗೆ. ಏನಪ್ಪ ಈ ಮಾಯಾಲೋಕ. ಇದೊಂದು ಬೇರೆ ಪ್ರಪಂಚ ಇರಬಹುದೇ? ಆಥವಾ ಅಸಾಮಾನ್ಯ ಮಾಯಾಲೋಕವೇ ಇರಬಹುದಾ? ಅಂದು ಕೊಂಡಿದ್ದೆ. ಆದರೆ ಪುಸ್ತಕ ತೆರೆಯುತ್ತಿದ್ದ ಹಾಗೆಯೇ ನನಗೆ ಇನ್ನೊಂದು ಅಚ್ಚರಿಯೇ ಕಾದಿತ್ತು.

ಇದ್ಯಾವುದೋ ಪ್ಯಾರಲಲ್ ಯೂನಿವರ್ಸ್, ಬೇರೆ ಯಾವುದೋ ಗ್ರಹ, ಪ್ರಪಂಚ ಅಥವಾ ಏಲಿಯನ್‌ಗಳ ಲೋಕವಲ್ಲ. ಇದು ನಮ್ಮ ಸುತ್ತ ಮತ್ತಲಿನ ಪ್ರಪಂಚ. ಸೂಕ್ಮವಾಗಿ ಅರಿತರೆ, ಸೂಕ್ಷ್ಮವಾಗಿ ನೆಡೆಯುತ್ತಿರುವ ವಿದ್ಯಮಾನಗಳು, ಪರಿಸರದಲ್ಲಾಗುವ ಬದಲಾವಣೆಗಳು, ಕ್ರಿಯೇಗಳನೆಲ್ಲ ಗ್ರಹಿಸಿದರೆ ನಾವೇ ಬದುಕುವ ವಾಸ್ತವದ ಲೋಕವೇ ಮಾಯಾಲೋಕ. ನಾವು ತೇಜಸ್ವಿ ರೀತಿ ಬದುಕನ್ನು ಬದುಕಿದರೆ ನಮ್ಮ ಸುತ್ತಮುತ್ತಲಿನ ಪರಿಸರವೇ ಒಂದು ಮಾಯಾಲೋಕ.

ಇನ್ನೂ ಪುಸ್ತಕಕ್ಕೆ ಬಂದರೆ ಇದು ತೇಜಸ್ವಿಯ ಲೇಟೆಸ್ಟ್ ಪುಸ್ತಕ. 21 ಶತಮಾನದ ಕೃತಿಯಾದ್ದರಿಂದ ಈಗಿನ ವಾಸ್ತವಕ್ಕೆ ತುಂಬಾ ಹತ್ತಿರದಲ್ಲಿದೆ.
ಇದೊಂದು ಕತೆಯಲ್ಲ. ಅವರ ಸುತ್ತ ಮುತ್ತಲಿರುವ ಪರಿಸರ, ಹಾಗೇ ಅವರು ದಿನ ನೋಡುವ ಜನ ಜೀವಿಗಳು ಮತ್ತು ಅವರ ವಿಭಿನ್ನ ವ್ಯಕ್ತಿತ್ವಗಳು ಈ ಪುಸ್ತಕವನ್ನು ಮಾಯಾಲೋಕವಾಗಿಸಿದೆ.

ಇಡೀ ಪುಸ್ತಕದೂದಕ್ಕೂ ತುಟಿಯಂಚಲಿ ನಗು ತರುವ ನಿರೂಪಣೆ ಎಲ್ಲೂ ಬೋರ್ ಅನ್ನಿಸಲ್ಲ, ಸರಿಯಾದ ಕತೆ, ಕಥಾನಾಯಕರಿಲ್ಲದ ದೈನಂದಿನ ವಿದ್ಯಮಾನಗಳನ್ನು ಹೊತ್ತ ಈ ಪುಸ್ತಕ ಒಂದು ಮಾಯಾಲೋಕವೆಂದು ಮುನ್ನುಡಿಯಲ್ಲೆ ಸ್ಪಷ್ಟನೆ ನೀಡಿರುತ್ತಾರೆ.

ಇಲ್ಲಿ ಬರುವ ಅಣ್ಣಪಣ್ಣ, ಕರಾಟೆ ಮಂಜಾ, ಕುಡುಕ ಬಾಬು, ಸೂರಿ, ಪ್ರಕಾಶವಾಣಿ ಸಂಪಾದಕ ಪ್ರಕಾಶ ಹೀಗೆ ಕೆಲವರು ಅವರರವರ ದೃಷ್ಟಿಕೋನಕ್ಕನುಗುಣವಾಗಿ ಒಂದೊಂದು ಘಟನೆಗಳನ್ನು ಹತ್ತಾರು ಬಣ್ಣಬಳಿದು ತಮಾಗೆ ಬೇಕಾದ ಹಾಗೆ ಕಲ್ಪಿಸಿ ಹಳ್ಳಿಯುದ್ದಕ್ಕೂ ಹಬ್ಬಿಸುತ್ತಿದ್ದರು. ಅದರ ಅಸಲಿ ಸತ್ಯತೆ ತಿಳಿದು ಕೊಳ್ಳಬೇಕೆನ್ನುವ ಕೂತುಹಲವೇ ಈ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಬರುವ ಕೆಲವು ಸಂದರ್ಭಗಳಂತು ಹುಚ್ಚೆಬ್ಬಿಸಿ ನಗಿಸುತ್ತದೆ.

ಪ್ರತಿಯೊಂದು ಸಮಸ್ಯೆಗೂ ತನ್ನದೇ ಆದ ಕಾರಣವಿರುತ್ತದೆ. ಮಳೆ ಬಂದು ಬರಗಾಲ ಬಂದರೆ ನೀರಿಗೆ ಬರಗಾಲ ಉಂಟಾಗುವುದು, ನೀರಿಲ್ಲ ಅಂದ್ರೆ ವಿದ್ಯುತ್‌ಗೆ ಬರಗಾಲ, ಹಾಗಂತ ವಿದ್ಯುತ್ ಇಲಾಖೆ ಮೇಲೆ ದೂರಿದರೆ ಎಷ್ಟು ಸರಿ? ಸಮಸ್ಯೆಯ ಮೂಲ ತಿಳಿದುಕೊಳ್ಳದೆ ಇರುವ ಕೆಲಸ ಬಿಟ್ಟು ರಸ್ತೆಗೆ ಇಳಿದು ಹೋರಾಟ ಮಾಡಿದರೆ ಇರುವ ಕಷ್ಟಗಳ ನಡುವೆ ಇನ್ನೊಂದಿಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದು ಕೊಂಡಂತಾಗುತ್ತದೆ..

ಇಂತಹ ಹಲವಾರು ಸಂದರ್ಭಗಳು ಇಲ್ಲಿ ಮಾಯಾಲೋಕವನ್ಮು ಸೃಷ್ಟಿಸಿದೆ. ತನ್ನದೊಂದು ಸಮಸ್ಯೆಗೆ ಇಡೀ ಜಗತ್ತನ್ನೆ ದೂರಿ ಇರುವ ಇನ್ನೊಂದಿಷ್ಟು ನೆಮ್ಮದಿ ಹಾಳುಮಾಡಿಕೊಳ್ಳುವ ನಾವು ಈ ಕೃತಿಯಲ್ಲಿ ಬರುವ ಪಾತ್ರಗಳಲ್ಲಿ ಜೀವಿಸುತ್ತಿದ್ದೇವೆ.

ಪ್ರತಿಯೊಂದು ಹೂವು ಅರಳುವುದಕ್ಕೂ ಕಾರಣವಿದೆ, ಉದುರುವುದಕ್ಕೂ ಕಾರಣವಿದೆ. ಅದನ್ನರಿತರೆ ಮಾತ್ರ ಈ ಜಗತ್ತು ಒಂದು ಮಾಯಾಲೋಕ. ಇಲ್ಲ ಅಂದರೆ ಇದೊಂದು ಲೋಕವಷ್ಟೇ.

ತೇಜಸ್ವಿಯವರ ಮಾಯಾಲೋಕ ಕೈಗೆತ್ತಿಕೊಳ್ಳಲು ಯಾವುದೇ ಅನುಮಾನಗಳು ಬೇಡ. 😊
Profile Image for Sanjay Manjunath.
213 reviews11 followers
December 29, 2024
Connected with an unconnected charcaters, places, etc.. makes a beautiful collage called as maayaaloka..❤️
Profile Image for Ramachandra M.
41 reviews5 followers
June 17, 2021
ತೇಜಸ್ವಿಯವರ ಬೇರೆಲ್ಲಾ ಕೃತಿಗಳಿಗಿಂತ ಮಾಯಾಲೋಕ ಓದುಗರಿಗೆ ಹೆಚ್ಚು ಕುತೂಹಲ ಕೆರಳಿಸುವ ಕೃತಿ. ಕತೆಯಲ್ಲಿ ಬರುವ ಎಲ್ಲಾ ಪಾತ್ರ ಹಾಗೂ ಸನ್ನಿವೇಶಗಳ ವರ್ಣನೆ ನಿಜಕ್ಕೂ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇಂತಹ ಲೋಕವನ್ನು (ಮಾಯಾ) ತೇಜಸ್ವಿಯವರಿಗೆ ಮಾತ್ರ ಸೃಷ್ಟಿಸಲು ಸಾಧ್ಯ. ನೀವೂ ಓದಿ ಮಾಯಾಲೋಕದ ಪಯಣ ಮಾಡಿ !
14 reviews7 followers
September 17, 2020
ಮಾಮೂಲಿ ತೇಜಸ್ವಿಯವರ ಕೃತಿಗಳಂತಿರದೆ ಕೊಂಚ ಭಿನ್ನ ಈ ಮಾಯಾಲೋಕ.
ಓದಿಸಿಕೊಳ್ಳುವುದರಿಂದ ಹಿಡಿದು ಪುಸ್ತಕವನ್ನು ಹಿಡಿದುಕೊಳ್ಳುವುದೂ ಕಷ್ಟವೆ (ಅದರ ಆಕಾರ :-)) .
ಕೊಲಾಜ್ ಮಾದರಿಯ ಕೃತಿ ಎಂದು ಮೊದಲ ಮಾತುಗಳಲ್ಲಿ ಲೇಖಕರು ಹೇಳುತ್ತಾರೆ.
ಗೊತ್ತಿಲ್ಲ, ಮುಂದೆ ಇನ್ನೊಮ್ಮೆ ಓದುವಾಗ ಇನ್ನೂ ಹೆಚ್ಚು ಆಪ್ತವೆನಿಸಬಹುದು. ಮೊದಲ ಓದಿನಲ್ಲಂತೂ ಅಷ್ಟೊಂದು ರುಚಿಸಲಿಲ್ಲ.
Profile Image for Vignesh ವಿಮರ್ಶೆ.
36 reviews
March 24, 2023
This is probably Tejasvi’s last novel and there’s a different style of writing. Story basically revolves around Makkigadde, Gondalageri and few more villages near Charmadi(Western Ghats,KA). Elements covering agri life of villagers, protests, crop failure, politics and casteism narrated in funny Malnad slang takes the reader to a different world- “Mayaloka”
Profile Image for Bharath Manchashetty.
206 reviews3 followers
January 21, 2026
ಒಂದೇ ಗುಕ್ಕಿನಲ್ಲಿ ದಬದಬ ಓದಿದ್ದು, ಮಾಯಾಲೋಕದ ಪಾತ್ರಗಳೊಟ್ಟಿಗೆ ಹಲವು ಬಾರಿ ನಕ್ಕಿದ್ದೇನೆ, ಮನಸ್ಸಿಗೆ ಮುದ ನೀಡುವ ತೇಜಸ್ವಿಯವರ ಶೈಲಿ ಯಾವತ್ತಿಗೂ ಇಷ್ಟ.
Profile Image for ಸುಶಾಂತ ಕುರಂದವಾಡ.
466 reviews28 followers
December 3, 2025
ಯಾವುದೇ ಪ್ರಧಾನಭೂಮಿಕೆಯಿಲ್ಲದೆ ಸುತ್ತಮುತ್ತಲಿನ ಜನರನ್ನೇ ನಾಯಕ/ಕಿಯರನ್ನಾಗಿ ಬರೆದ ಪುಸ್ತಕವಿದು. ಇಂತಹ ಪುಸ್ತಕಗಳು ಕೇವಲ ತೇಜಸ್ವಿಯವರಿಂದ ಮಾತ್ರ ಸಾಧ್ಯ.
5 reviews6 followers
August 31, 2021
ತೇಜಸ್ವಿಯವರ ಜೀವನದ ಪಯಣವೇ ಒಂದು ಅದ್ಬುತ ಊರಿನ ದಾರಿಯಾಗಿ , ಅದು ಅಲ್ಲಿ ಓದುತ್ತ ಅಡ್ಡಾಡುವ ನಮ್ಮಂಥವರಿಗೆ ಒಂದು ಸುಂದರ ಸ್ಪೂರ್ತಿಯಾಗಿ ಸದಾ ಅಚ್ಚರಿ ಮೂಡಿಸುತ್ತೆ . ಅವರ ಪುಸ್ತಕ ಎಂದರೆ ನನಗೆ ಪ್ರಾಣ . ಅವರ ಪಟ್ಟಾ ಶಿಷ್ಯನಾದ ನಾನು ಇದನ್ನ ನೀವು ಒಂದು ಬಾರಿ ಓದಿ ಎಂದು ಹೆಮ್ಮೆಯಿಂದ ಹೇಳಬಲ್ಲೆ .
Profile Image for Yashawanth Ramaswamy.
96 reviews8 followers
July 28, 2016
One who lives in small town and in its surrounding will really experience the flavour of this book. You will feel like you are a part of this story as it gives you the realistic feeling.
23 reviews9 followers
July 23, 2022
ಊರಳ್ಳಿ, ಮಕ್ಕಿಗದ್ದೆ, ಅವೆರಡರ ನಡುವೆ ಹಾದು ಹೋಗೋ ಒಂದು ಸಣ್ಣ ಹಳ್ಳ, ಹಳ್ಳದ ಪಕ್ಕದಲ್ಲೇ 2 ಎಕರೆ ಜಮೀನಿಗೆ ಹಸಿ ಮೆಣಸಿನ ಸಸಿ ಹಾಕಿರೋ ಅಣ್ಣಪ್ಪಣ್ಣ ಮತ್ತು ಬಂಡಾರಿ ಬಾಬು, ಅವರ ಜೊತೆಗಾರರಾದ ಜಗ್ಗ ಮತ್ತು ಕರಾಟೆ ಮಂಜ, ಇವರೆಲ್ಲರೂ ಸೇರಿ ಆಗಾಗ ಮಾಡಿಕೊಳ್ಳೋ ತೊಂದರೆಗಳು, ಮುಖ್ಯ ಪೇಟೆ ಗೊಂದಲಗೇರಿ, ರೈತ ಸಂಘ, ಪ್ರಕಾಶವಾಣಿ ಪತ್ರಿಕೆಯ ಸಂಪಾದಕ ಪ್ರಕಾಶ, ಬರಗಾಲ, ಹಾಗೂ 'ನಿಮಗೆ ಮಾನ ಮರ್ಯಾದೆ ಚೂರೂ ಇಲ್ಲ ಕಣ್ರೋ, ಮತ್ತೆ ಏನಾದ್ರು ಒಂದು ಕಿತಾಪತಿ ಮಾಡ್ತಾನೆ ಇರ್ತೀರ' ಅಂತ ಮಾತಾಡಿಕೊಂಡು ಸಿಗುವ ನಮ್ಮ ತೇಜಸ್ವಿ. ಇದು ಮಾಯಾಲೋಕದ ಪುಟ್ಟ ಪರಿಚಯ.

ಇಲ್ಲಿ ಇಂಥದ್ದೇ ಕಥೆ ಅಂತ ಇಲ್ಲ. ಒಂದು ಪ್ರದೇಶದಲ್ಲಿ ಒಂದು ಕಾಲಘಟ್ಟದಲ್ಲಿ ನಡೆಯೋ ಘಟನಾವಳಿಗಳು ಹಾಗೂ ಅದು ಒಂದಕ್ಕೊಂದು ಹೇಗೆ ಬೆಸೆದುಕೊಂಡು ಹೋಗಿರುತ್ತೆ ಅನ್ನೋ ಚಿತ್ರಣನಾ ತೇಜಸ್ವಿ ಇಲ್ಲಿ ತುಂಬಾ ಚೆನ್ನಾಗಿ ಅಚ್ಚುಕಟ್ಟಾಗಿ ಹೆಣೆದಿದ್ದಾರೆ. ಅವರ ಎಲ್ಲಾ ಬರವಣಿಗೆಯ ಹಾಗೆ ಸಾಕಷ್ಟು ಕಡೆ ನಿಮ್ಮನ್ನು ನಗಿಸುತ್ತಾರೆ. ಹಾಗೆಯೇ ಪ್ರಸ್ತುತ ವಿದ್ಯಮಾನಗಳು ಹಾಗೂ ಸಮಾಜದ ಅವ್ಯವಹಾರಗಳನ್ನು ಕಥೆಯೊಂದಿಗೆ ಜೋಡಿಸಿ ತಮ್ಮದೇ ಧಾಟಿಯಲ್ಲಿ ಹೇಳುತ್ತಾ ಹೋಗುತ್ತಾರೆ.

ಈ ಪುಸ್ತಕದ ಇನ್ನೊಂದು ಪ್ರಮುಖ ಅಂಶ ಎಂದರೆ, ಪ್ರತಿಯೊಂದು ಪುಟಗಳಲ್ಲಿ ಸಿಗುವ ಸ್ಕೆಚ್ ಹಾಗೂ ರೇಖಾಚಿತ್ರಗಳು. ಅವೆಲ್ಲ ತೇಜಸ್ವಿ ಹೇಳಿದ ಹಾಗೆ ಕೃತಿಯ ಸಾಂದರ್ಭಿಕ ವಿವರಣೆಗಳು.

ಒಟ್ಟಿನಲ್ಲಿ ಸುಲಭವಾಗಿ ಓದಿಸಿಕೊಂಡು ಹೋಗುವ ಮನಸ್ಸಿಗೆ ಖುಷಿ ಕೊಡುವ ಒಂದೊಳ್ಳೆ ಓದು.
Profile Image for Sangeetha.
62 reviews23 followers
September 29, 2022
I wish Kuvempu and K P Poornachandra Tejaswi wrote more fictions . They are treat to read from Father and Son duo. Alas, they wrote very less on fiction .

Coming to this book, it isn't the story of anyone but of everyone in the town. You will know that there is no start and end to any of the stories here but still you cant put down this book. It can only happen when the writing is interesting and fun. KPP is no doubt a master in writing anything with fun. Overall a good book to read.
Profile Image for Yashwanth Lakke Gowda.
77 reviews5 followers
October 19, 2023
ಒಂದು ಸಾಮಾನ್ಯ ಹಳ್ಳಿಯಲ್ಲಿ ನಡೆಯುವ ಘಟನೆಗಳನ್ನು ನಿರಾಯಾಸವಾಗಿ ಹೇಳುತ್ತ ಹೋಗಿರುವ ತೇಜಸ್ವಿಯವರು, ಈ ಪುಸ್ತಕದಲ್ಲಿ ಹಳ್ಳಿ ಜನ ಮಾಡುವ ಕಿತಾಪತಿಗಳು, ರಾಜಕೀಯ, ಗಂಡ ಹೆಂಡಿರ ಜಗಳ, ಯುವಕರು ಮಾಡುವ ಸಾಹಸ ಮುಂತಾದವುಗಳನ್ನು ಬಹಳ ಸರಳವಾಗಿ ಹೇಳಿದ್ದಾರೆ.
ಒಟ್ಟಾರೆ ಯಾವುದೇ ಮುಖ್ಯವಾದ ಕಥಾಹಂದರ ಹೊಂದಿಲ್ಲದಿದ್ದರು ಸುಮ್ಮನೆ ಕೊನೆವರೆಗೂ ಓದಿಸಿಕೊಂಡು ಹೋಗಿ ಎಲ್ಲೂ ಕೂಡ ಬೋರ್ ಹೊಡೆಸದಂತ ಒಂದು ಪುಸ್ತಕವಿದು.
1 review
Want to Read
January 12, 2022
Not even his father can compitate with him,,
ಕನ್ನಡಕ್ಕೊಬ್ಬರೇ ತೇಜಸ್ವಿ.
10 reviews
September 22, 2022
Very interesting and funny book. Stories were on things happening in day to day life.
Profile Image for pustakamare.
91 reviews15 followers
September 17, 2025
ಅಮ್ಮ/ಅಪ್ಪ ಮಕ್ಕಳಿಗೆ, ಗಂಡ ಹೆಂಡತಿಗೆ, ಪ್ರೇಮಿ ಪ್ರೇಯಸಿಯರಿಗೆ, ಜೊತೆಗೆ ಕೆಲಸ ಮಾಡೋರಿಗೆ ಜಗಳ... ಮನೇಲಿ, ಕೆಲಸದಲ್ಲಿ, ದುಡ್ಡಲ್ಲಿ, ಜಾಗದಲ್ಲಿ, ಅಕ್ಕಪಕ್ಕದವರಲ್ಲಿ, ಶಾಲೇಲಿ, ಇತಿಹಾಸದಲ್ಲಿ, ಸಮಾಜದಲ್ಲಿ, ಜಾತೀಲಿ, ಧರ್ಮದಲ್ಲಿ, ಬದುಕೋ ರೀತಿಯಲ್ಲಿ, ಅಲ್ಲಲ್ಲಿ ಹೀಗೆ ಸಮಸ್ಯೆ... ಇಂತವೆ ಎಲ್ಲಾನು ಪಿಂಡೆ ಕಟ್ಟಿ ಚಂಡಿ ಮಾಡಿದ್ ಗೋಣಿ ಹಗ್ಗದಲ್ಲಿ ಕಗ್ಗೆಂಟು ಹಾಕಿ ಒಂದು ಕಡೆ ಇಟ್ರೆ ಅಬ್ಬಾ ಮುಕ್ಕಾಲು ಅಂಶ ಭಾರ ಕಾಲಿ ಆಯ್ತು ಅನಿಸಿದಂಗೆ ವಿಷಯಗಳ ಬಿಟ್ಟು ಒಂದು ಫೀಲ್ ಗುಡ್ ಪುಸ್ತಕ ಓದಬೇಕು ಅಂತ ಇದ್ರೆ ಈ ಪುಸ್ತಕ ಓದಿ.
ನಿಜ ಹೇಳಬೇಕು ಅಂದ್ರೆ ಈ ಪುಸ್ತಕ ಓದೋಕೆ ಹೋದ್ರೆ ಫುಲ್ ಬೋರು ಅನಿಸುತ್ತೆ. ನೆಟ್ಟಗೆ ಒಂದು ಕತೆ ಇಲ್ಲ, ರುಚಿ ಕೊಡೋ ಮಸಾಲೆ ಇಲ್ಲ, ಥ್ರಿಲ್ ಇಲ್ಲ ಅನಿಸುತ್ತೆ. ಇದೊಂದು ತರಹ ಅಮೆಜಾನ್ ಪ್ರೈಮ್ ಅಲ್ಲಿ ಪಂಚಾಯತ್ ಸರಣಿ ಬರೋಕೂ ಮುಂಚೆನೇ ಕ್ಲಾಸಿಕ್ ಆಗಿ ಬಂದಿರೋ ಪುಸ್ತಕ. ಇಲ್ಲಿ ನಿಧಾನಕ್ಕೇ ಸ್ಲೋ ಲೈಫ್ ಅಂತ ಊರ್ ತುಂಬಾ ಬಿಟ್ಟಿ ಬಿಲ್ಡಪ್ ಕೊಟ್ಟುಕೊಂಡು ತಿರುಗೋ ಇಲ್ಲ ಹಾಗೆ ಬದುಕೋ ಮಹಾನ್ ಮಹನೀಯರ ತರಹ ಒಂದಾದಮೇಲೆ ಒಂದು ಜರುಗೋ ಘಟನೆಗಳನ್ನ ಕೊಡ್ತಾ ಊರು ತೆರೆದುಕೊಳ್ಳುತ್ತೆ. ಗೊಂದಲಗೇರಿ, ಊರಳ್ಳಿ, ಮಕ್ಕೀಗದ್ದೆಗಳ ಬರಗಾಲದ ಬೇಸಿಗೆ ಕಾಲ ಹೇಗೆ ಉರುಳ್ತಾಉರುಳ್ತಾ ಹೋಯ್ತು, ಜನ ಏನೇನೆಲ್ಲಾ ಮಾಡ್ತಾ ಕಾಲಾನ ಹಿಂದೆಹಿಂದೆ ತಳ್ತಾತಳ್ತಾ ಮುಂದೆ ಸಾಗಿದ್ರು ಅನ್ನೋದೇ ಮಾಯಾಲೋಕ.
ಜೈ
Profile Image for Madhukara.
Author 8 books5 followers
September 5, 2020
One of the unique story by Tejaswi. As the author states, in the beginning, the whole book is a collage of different stories. The author explores the dynamics of two different villages in a time of drought. Even though there are many disparate stories, they all have a common theme of human nature. Tejaswi stories always tie human nature with outside nature beautifully. This book also follows the same pattern. Overall gooad read.
3 reviews
August 17, 2017
This is another light read by Tejaswi sir, it takes you through the magical world of western ghats and the characters come out full of life as you read on. A must for any nature lover and Tejaswi fan!
Profile Image for Anirudh .
838 reviews
February 23, 2014
With great anticipations I began reading this book. Unfortunately, despite having some interesting characters and humour, it is no Karvalo.
Displaying 1 - 24 of 24 reviews