Jump to ratings and reviews
Rate this book

ಜಲ-ಜಾಲ Jala-jaala

Rate this book

152 pages, Paperback

Published January 1, 2023

4 people are currently reading
29 people want to read

About the author

K.N. Ganeshaiah

44 books163 followers
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.

Education:
Ph. D. University of Agricultural Sciences, Bangalore, India, l983
M.Sc. (Agri.) in Genetics & Plant Breeding, UAS, Bangalore, l979
B.Sc (Agri.), University of Agricultural Sciences, Bangalore, l976.

Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.

Though an agriculture scientist, his novels and stories bring to the reader, the lesser-known and hidden facts of history along with science. Some of
his novels are also aimed at bringing the most complicated elements of science to the general reader.

Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.

In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013

Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
12 (33%)
4 stars
15 (41%)
3 stars
7 (19%)
2 stars
2 (5%)
1 star
0 (0%)
Displaying 1 - 6 of 6 reviews
Profile Image for Nayaz Riyazulla.
413 reviews93 followers
January 14, 2023
ಆಹಾ... Splendid writing.... ಹಿಂದಿನ ಕಾದಂಬರಿಯಲ್ಲಿ ನನಗೆ ಬಹಳ ನಿರಾಸೆ ಮಾಡಿದ್ದ ಗಣೇಶಯ್ಯ has bounced back so strongly here... ತುಂಬಾ ಅಚ್ಚುಕಟ್ಟಾಗಿ ಕಾದಂಬರಿಯ ಚೌಕವನ್ನು ರಚಿಸಿ, ಎಷ್ಟು ಬೇಕೋ ಅಷ್ಟೇ ಹೇಳಿ ಓದುಗರ ಮನಮುಟ್ಟುವಂತೆ ಕಥೆ ಹೆಣೆದಿದ್ದಾರೆ.....

ಕೀಟಗಳ ಪರವಾಲಂಬನೆಯ ತಂತ್ರವನ್ನು ಯುದ್ಧತಂತ್ರವಾಗಿ ಬಳಸುವ ಎಳೆಯನ್ನು ಹಿಡಿದು ತಮ್ಮದೇ ಥ್ರಿಲರ್ ಶೈಲಿಯಲ್ಲಿ ಹೇಳಿರುವ ಈ ವಸ್ತು ನಿಜಕ್ಕೂ ಓದಲರ್ಹ...

Recommended...
Profile Image for Karthikeya Bhat.
109 reviews13 followers
January 7, 2023
ಜಲ ಜಾಲ
ಡಾ॥ ಕೆ. ಎನ್. ಗಣೇಶಯ್ಯ

ಇದೊಂದು ರೋಚಕ ಕಾದಂಬರಿ, ಈ ಜನವರಿ ೧ರಂದು ಬಿಡುಗಡೆಗೊಂಡ ಈ ಕಾದಂಬರಿ ,ಅಂದೇ ಕೊಂಡು ಹಾಗು ಗಣೇಶಯ್ಯನವರಿಂದ ಸ್ವಹಸ್ತಾಕ್ಷರವನ್ನೂ ಪಡೆದು, ಈ ಕಾದಂಬರಿಯನ್ನು ಒಂದೇ ದಿನದಲ್ಲಿ ಇತ್ತೀಚೆಗೆ ಓದಿ ಮುಗಿಸಿದೆ ಅಷ್ಟು ಕುತೂಹಲಕರವಾಗಿದೆ.

ಸರಿ ಸುಮಾರು ೧೦ ಗಂಟೆಗೆ ಒಂದು ಚಿಕ್ಕ ದ್ವೀಪದಲ್ಲಿ ಏರ್ ಕ್ರಾಫ್ಟ್ ಕ್ಯಾರಿಯರ್ ಮೇಲಿದ್ದ ನಾಲ್ಕು ಮಂದಿ ಮೋಟಾರ್ ಬೋಟಿಗೆ ಇಳಿದು ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡಿ ಅವರ ಬಳಿ ಇದ್ದ ಒಂಬತ್ತು ಸೈನಿಕರ ಹೆಣಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು, ಅವನ್ನು ಮೋಟಾರ್ ರಾಟೆಗಳ ಮೂಲಕ ಕ್ಯಾರಿಯರ್ ಮೇಲೆ ಸಾಗಿಸಿ, ಸಾಲಾಗಿ ಜೋಡಿಸಲಾಯಿತು. ಇದೆಲ್ಲವನ್ನು ಸುಮಾರು ಕಿಮೀ ಎತ್ತರದಲ್ಲಿದ್ದ ಸ್ಯಾಟಲೈಟ್ ಒಂದು ಕ್ಯಾಮರಾ ವೀಕ್ಷಿಸುತ್ತಿತ್ತು, ಮತ್ತೊಂದು ಕಡೆ ಫ್ರಾನ್ಸ್ ನ ಮೌಂಟ್ ಪಿಲ್ಲೆಯ ಒಂದು ಆಸ್ಪತ್ರೆಯಲ್ಲಿ ಡಾಕ್ಟರ್ ಸ್ಟೀಪನ್ ಬ್ಯಾರಿ ಒಂದು ಕರೆಗಾಗಿ ಕಾಯುತ್ತಿದ್ದರು, our appreciations to you and success for your efforts good bye ಅಂತ ಹೇಳಿ ಫೋನ್ ಕಟ್ಟಾಯಿತು. ಅದೇ ಸಮಯದಲ್ಲಿ ಭಾರತದ ಪೂರ್ವದಲ್ಲಿನ ಸಣ್ಣ ದ್ವೀಪದಲ್ಲಿ ಕಮ್ಯಾಂಡರ್ ರಾಬರ್ಟ್ ಆ ಒಂಬತ್ತು ಹೆಣಗಳನ್ನು ಪರಿಶೀಲಿಸಿ, ಸತ್ತಿದ್ದವರ ಬಗ್ಗೆ ಎಲ್ಲಾ ರಹಸ್ಯವಾಗಿಡಬೇಕೆಂದು ಅದರಲ್ಲಿ ೬ ಹೆಣಗಳನ್ನು ಕೋಲ್ಡ್ ಸ್ಟೋರೇಜ್ ಘಟಕದಲ್ಲಿಟ್ಟು , ಉಳಿದ ಮೂರರಲ್ಲಿ ಎರಡನ್ನು ಅಮೇರಿಕಾಕ್ಕೆ ಹಾಗು ಒಂದು ಫ್ರಾನ್ಸ್ ಗೆ ಸಾಗಿಸಬೇಕು ಅದು ಹೇಗೆ ಎಂದು ಯೋಚಿಸತೊಡಗಿದನು.
ಅಂದಹಾಗೆ ಯಾರು ಈ ಒಂಬತ್ತು ಸೈನಿಕರು, ಅವರು ಸತ್ತಿದ್ದಾದರೂ ಏಕೆ, ಇದರಲ್ಲಿ ಡಾಕ್ಟರ್ ಬ್ಯಾರಿಯ ಪಾತ್ರವೇನು, ಕಮ್ಯಾಂಡರ್ ಪಾತ್ರವೇನು ಹಾಗು ಈ ಘಟನೆಗೆ ಕಾರಣವಾದ ಅಮೇರಿಕಾ ಹಾಗು ಫ್ರಾನ್ಸ್ ದೇಶಗಳ ಪಾತ್ರವೇನು ಎಂಬ ಜಾಲವನ್ನು ಬಿಡಿಸಲು ಹೊರಡುವ ಪತ್ರಕರ್ತೆ ಎಲಿನಾ ಇಲ್ಲಿ ಮುಖ್ಯ ಪಾತ್ರವಾಗಿ ಕಂಡು ಬರುತ್ತಾಳೆ.

ಹಿಂದೂ ಮಹಾಸಾಗರದಲ್ಲಿ ಕೊಚ್ಚಿನ್ ನಿಂದ ಸೀಶೆಲ್ಸ್ ದ್ವೀಪದಿಂದ ಹಿಂದಿರುಗುತ್ತಿದ್ದ ಭಾರತದ ಹಡಗಿನವರಿಗೆ ಒಂದು ದೇಹ ತೇಲುತ್ತಿರುವುದು ಆ ದೇಹ ಚಲಿಸುತ್ತಿದ್ದಂತೆ ಕಂಡುಬರುತ್ತದೆ, ಆತನನ್ನು ಹೇಗೋ ಕಾಪಾಡುತ್ತಾರೆ, ಆದರೆ ಕಾಪಾಡಿದ ಸಂತೋಷಕ್ಕಿಂತ ಆತನನ್ನು ವಿಲೇವಾರಿ ಮಾಡುವುದು ಹೇಗೆ ಎಂಬುದು ಯೋಚನೆಗೀಡುಮಾಡುತ್ತದೆ. ಅಂತೂ ಆತನನ್ನು ಕೊಚ್ಚಿನ್ ಕೋಸ್ಟ್ ಗಾರ್ಡ್ ಗೆ ಒಪ್ಪಿಸುತ್ತಾರೆ. ಈತ ಯಾರೋ ಏನೋ, ಯಾವ ಟೆರರಿಸ್ಟ್ ಗುಂಪಿಗೆ ಸೇರಿದವನೋ, ಅಥವಾ ಯಾವ ಅಪರಾಧವನ್ನು ಮಾಡಿ ತಾನು ದೇಶವನ್ನು ಬಿಟ್ಟು ಬಂದನೋ ಎಂಬ ಯೋಚನೆಯಾಗುತ್ತದೆ, ವಿಚಿತ್ರವೆಂದರೆ ಆತನಿಗೆ ಯಾವ ಭಾಷಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುತ್ತಿರಲಿಲ್ಲ ಅವನ ನಡವಳಿಕೆ ವಿಚಿತ್ರವಾಗಿ ಕಂಡುಬರುತ್ತದೆ. ಆತನ ದೇಹವನ್ನು ಪರಿಶೀಲಿಸಿದಾಗ ega ಎಂದು ಹಾಗು 10.11.1755 ಎಂಬ ಚಿಹ್ನೆಗಳಿರುತ್ತವೆ. ಅದೇ ಸಮಯದಲ್ಲಿ ಒಂಬತ್ತು ಸೈನಿಕರನ್ನು ವೀಕ್ಷಿಸುತ್ತಿದ್ದ ಗೂಡಚರ್ಯೆಯ ಕ್ಯಾಮರಾ ಚಿತ್ರಗಳನ್ನು ಚೀನಾದ ಚುಂಗ್ ಲೀ ಪರಿಶೀಲಿಸುತ್ತಿದ್ದರು, ಆ ಸೈನಿಕರು ಅಮೇರಿಕಾದ ನೌಕಾದಳದ ಸೈನಿಕರು ಅವರು ಮರೈನ್ ಗಳು, ಅಮೆರಿಕಾದವರೆ ಸಮುದ್ರಕ್ಕೆ ಹಾರಲು ಬಿಟ್ಟು ಅವರು ಸಾಯುವವರೆಗೂ ಕಾದು ಆಮೇಲೆ ಹೆಣ ಹೆತ್ತಲು ಬರುವುದು ನಂಬಲು ಸಾಧ್ಯವಾಗಲಿಲ್ಲ. ಚುಂಗ್ ಲೀ ರವರು ಮಾ ಕೆಪಿಂಗ್ ರವರಿಗೆ ಇದನ್ನ ಸಂಶೋಧನೆ ಮಾಡಲು ತಿಳಿಸಿದಾಗ ಪತ್ರಕರ್ತೆ ಎಲಿನಾ ಇದರಲ್ಲಿ ಆಸಕ್ತಿ ವಹಿಸಿ ಸಂಶೋಧನೆ ನಡೆಸುತ್ತಾಳೆ.

Military ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಲಿನಾ ಕೆಲವು ವಿಷಯಗಳನ್ನು ಸಂಗ್ರಹಿಸುತ್ತಾಳೆ, ಪ್ರಾಣಿಗಳಲ್ಲಿ ಆತ್ಮಹತ್ಯೆ, ಕೀಟಗಳ ಮತ್ತು ಇತರೆ ಪ್ರಾಣಿಗಳ ವರ್ತನೆಯ ಮೇಲೆ ಪರಾವಲಂಬಿಗಳ ಪ್ರಭಾವ, ತಿಗಣೆ ಕಾಟಗಳಿಂದ ಮನುಷ್ಯರ ಮನೋವಿಕಲತೆ. ಆ ಸಮಯದಲ್ಲಿ ಅವಳಿಗೆ ಒಂದು ವಿಷಯ ಆಶ್ಚರ್ಯವಾಗಿ ಕಂಡುಬರುತ್ತದೆ, ಈ ಆಕಸ್ಮಿಕದಲ್ಲಿ ಸತ್ತ ಮರೈನ್ ಗಳು ಆಫ್ರಿಕನ್ ರಕ್ತದವರು, ತಮ್ಮ ತಮ್ಮ ಮನೆಯಲ್ಲಿ ಒಬ್ಬರೇ ಮಕ್ಕಳಾಗಿದ್ದವರು, ಒಬ್ಬನಿಗೆ ತಾಯಿ ತಂದೆ ಇಬ್ಬರೂ ಇರುವುದಿಲ್ಲ, ಮತ್ತೊಬ್ಬನಿಗೆ ತಾಯಿ ಇದ್ದರೂ ಆಕೆಗೆ ವಯಸ್ಸಾಗಿರುತ್ತದೆ, ಅಂತವರನ್ನೇ ಅಮೇರಿಕಾ ಆಯ್ಕೆ ಮಾಡಿರುತ್ತದೆ. ಈ ಮರೈನ್ ಗಳು ಹಿಂದೂ ಮಹಾಸಾಗರದಲ್ಲಿರುವ ಅಮೇರಿಕಾ ನೌಕಾದಳದ ಡೀಗೋ ಗಾರ್ಸಿಯ ದ್ವೀಪದ ಘಟಕದಲ್ಲಿ ಸತ್ತಿರುವುದು, ಅಮೇರಿಕಾವೇ ಅಮೇರಿಕಾ ಸೈನಿಕರನ್ನು ಕೊಲ್ಲುವುದು ಆಕಸ್ಮಿಕವಾಗಿ ಕಂಡುಬರುತ್ತದೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸೋಫೆನ್,ಕಾರ್ಟನ್ ರವರು ಪ್ರಾಣಿಗಳ ವರ್ತನೆಯಿಂದ ಪರಾವಲಂಬಿಗಳಾಗುವುದು ಹೇಗೆ ಎಂಬುದು ಎಲಿನಾಗೆ ವಿವರಿಸುತ್ತಾರೆ. ಉದಾಹರಣೆಗೆ ಒಂದು ತ್ಯಾಗದ ರೀತಿಯ ಆತ್ಮಹತ್ಯೆ, ತಮ್ಮ ಕುಟುಂಬಕ್ಕೆ ಎದುರಾಗುವ ತೊಂದರೆಯನ್ನು ಎದುರಿಸಲು ಹೋಗಿ ತಮ್ಮ ಜೀವವನ್ನೇ ಬಲಿಕೊಟ್ಟು ತ್ಯಾಗ ಮಾಡುತ್ತವೆ. ಕೆಲವು ಗೆದ್ದಲು ಹುಳುಗಳು ಶತ್ರುಗಳನ್ನು ಎದುರಿಸಲು ತಮ್ಮ ದೇಹದಿಂದ ರಾಸಾಯನಿಕವನ್ನು ಚಿಮ್ಮಿಸಿ ಶತ್ರುಗಳನ್ನು ಓಡಿಸುತ್ತವೆ, ಪರಾವಲಂಬಿ ಜೀವಿಗಳು ತಮ್ಮ ಅತಿಥೇಯ ಪ್ರಾಣಿಗಳ ವರ್ತನೆಯಲ್ಲಿ ಚಿತ್ರ ವಿಚಿತ್ರ ಮಾರ್ಪಾಟನ್ನು ತರುವುದು ವಿಜ್ಞಾನಿಗಳು ತಿಳಿಹೇಳುತ್ತಾರೆ. ಇವೆಲ್ಲವೂ ಆ ಒಂಭತ್ತು ಜನರ ಕೊಲೆಗೆ ಹೇಗೆ ಸಂಬಂಧ ಎಂದು ನಂತರ ತಿಳಿದುಕೊಳ್ಳುತ್ತಾಳೆ.

ಅತ್ತ ಕೊಚ್ಚಿನ್ ಕೋಷ್ಟ್ ಗಾರ್ಡ್ ಬಳಿ ಇದ್ದ ವ್ಯಕ್ತಿಯನ್ನು ಪರಿಶೀಲಿಸುತ್ತಿದ್ದಾಗ ega ಎಂದು ಹಾಗು 10.11.1755 ಎಂಬ ಚಿಹ್ನೆಗಳಿರುತ್ತವೆ. ಅಂದರೆ eagle, globe and anchor ಎಂದು ಅದು ಅಮೇರಿಕಾದ ನೌಕಾದಳದ ಪತಾಕೆಯ ವಿವರಣೆ, ಗಿಡುಗ, ಪೃಥ್ವಿ ಮತ್ತು ಲಂಗರು. ಹೀಗೆ ಮರೈನ್ ಗಳು ಮಾತ್ರವೆ ಅಚ್ಚು ಹಾಕಿಸಿಕೊಳ್ಳುತ್ತಿದ್ದರು.10.11.1755 ಎಂಬುದು ಅಮೇರಿಕಾದ ನೌಕಾದಳದ ಹುಟ್ಟಿದ ತಾರೀಕು. ಅಂದರೆ ಈತನು ಮರೈನ್, ಅದೃಷ್ಟವಶಾತ್ ಅಮೇರಿಕಾ ನಡೆಸಿದ ಶಡ್ಯಂತ್ರದಲ್ಲಿ ಈತ ಪಾರಾಗಿರುತ್ತಾನೆ, ಈ ಸುದ್ಧಿ ಎಲಿನಾಗೂ ಮುಟ್ಟುತ್ತದೆ. ಈತನ ಹೆಸರು ಸೋನಿ ಡಾಕೆಲ್ ಎಂದು ಎಲಿನಾ ಪತ್ತೆ ಹಚ್ಚುತ್ತಾಳೆ, ಅಂತೂ ತಪ್ಪಿಸಿಕೊಂಡ ಸೋನಿ ಡಾಕೆಲ್ ಈ ಕೊಲೆಯ ಸಂಚಿನ ಕುರಿತು ವಿವರಿಸುತ್ತಾನೆ.

ಅಮೆರಿಕಾದವರಿಂದ ಒಂಬತ್ತು ಸೈನಿಕರ ಕಗ್ಗೊಲೆ, ಅವರ ಸೈನ್ಯ ಅವರ ಸೈನಿಕರನ್ನೇ ಸಾಯಿಸುವುದು ಆಶ್ಚರ್ಯವಾದದ್ದು, ಅವರು ಯಾವ ಒಂದು ಗುಂಡಿಗೂ ಬಲಿಯಾಗಿರಲಿಲ್ಲ, ಅವರು ಬಲಿಯಾದದ್ದು ಒಂದು ಸ್ಪ್ರೇಗೆ, ಈ ಸ್ಪ್ರೇ ವಿಷಕಾರಿ ಅಲ್ಲ,. ಡೀಗೋ ಗಾರ್ಸಿಯಾದ ನೌಕಾದಳಕ್ಕೆ ಮೂರು ಫ್ರಾನ್ಸ್ ಸೈನಿಕರನ್ನು ಕರೆತರಲಾಗಿತ್ತು, ಮರುದಿನ ಇದ್ದಕ್ಕಿದ್ದಂತೆ ತಮಗೆ ಅಂದರೆ ಏಳು ಮರೈನ್ಗಳಿಗೆ ಕರೆ ಬಂದು ಒಂದು ವಿಷೇಶ ಎಕ್ಸರ್ ಸೈಜ್ ಗೆ ಆ ಮೂರು ಸೈನಿಕರೊಂದಿಗೆ ಜೊತೆಯಾಗಬೇಕೆಂದು ಅಮೇರಿಕಾ ಆದೇಶ ನೀಡುತ್ತದೆ. ನಂತರ ಕಮ್ಯಾಂಡರ್ ಎಲ್ಲರನ್ನೂ ಒಂದುಕೋಣೆಗೆ ಕರೆದು ಎ.ಸಿ ಮುಖಾಂತರ ಸ್ಪ್ರೇ ಮಾಡಿದರು, ಆ ಸ್ಪ್ರೇ ಎಲ್ಲರ ಮೇಲೂ ಪರಿಣಾಮ ಬೀರಿತು ತನ್ನೊಬ್ಬನನ್ನು ಬಿಟ್ಟು ಕಾರಣ ತಾನು ಗ್ರಾಸ್ ಸೇವಿಸಿದ್ದು ಅದು ಶ್ವಾಸಕೋಶದಲ್ಲಿದ್ದದ್ದಕ್ಕೆ ಆದ್ದರಿಂದ ತನ್ನ ಮೇಲೆ ಪರಿಣಾಮ ಬೀರಲಿಲ್ಲ, ಆದರೆ ಇತರರಿಗೆ ಸುಮಾರು ೩೦ ನಿಮಿಷದಲ್ಲಿ ಅವರೆಲ್ಲರೂ ಪ್ರಜ್ಞೆ ಕಳೆದುಕೊಂಡುನಂತರ ಒಬ್ಬೊಬ್ಬರಾಗಿ ಬೇರೆ ಬೇರೆ ಸಮಯದಲ್ಲಿ ರಾಸಾಯನಿಕಕ್ಕೆ ಸ್ಪಂದಿಸತೊಡಗಿದರು. ಈ ರಾಸಾಯನಿಕ ಇವರಲ್ಲಿ ನೀರಿನ ಭೀತಿ ಹುಟ್ಟಿಸಿ, ಇದರಿಂದ ತಾವಾಗಿಯೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಪರಿಣಾಮ ಬೀರಿತು. ಅದರಂತೆ ಒಂಬತ್ತು ಮರೈನ್ ಗಳು ಸಮುದ್ರದ ಉಪ್ಪು ನೀರು ಅತಿ ಹೆಚ್ಚು ಸೇವಿಸಿ ಸತ್ತರು, ಈ ಮರೈನ್ ಗಳು ಆಫ್ರಿಕನ್ ರಕ್ತದವರು, ತಮ್ಮ ತಮ್ಮ ಮನೆಯಲ್ಲಿ ಒಬ್ಬರೇ ಮಕ್ಕಳಾಗಿದ್ದವರು, ಒಬ್ಬನಿಗೆ ತಾಯಿ ತಂದೆ ಇಬ್ಬರೂ ಇರುವುದಿಲ್ಲ, ಮತ್ತೊಬ್ಬನಿಗೆ ತಾಯಿ ಇದ್ದರೂ ಆಕೆಗೆ ವಯಸ್ಸಾಗಿರುತ್ತದೆ. ಆದ್ದರಿಂದ ಮರೈನ್ ಗಳನ್ನೇ ಆಯ್ಕೆ ಮಾಡಿ ಈ ರಾಸಾಯನಿಕ ಪ್ರಭಾವ ಪರಿಣಾಮದಿಂದ ತಮ್ಮ ಮುಂದಿನ ಯೋಜನೆಗೆ ತಯಾರಿ ನಡೆಸುವುದಕ್ಕೆ ಅಧ್ಯಯನ ಮಾಡುತ್ತಾರೆ. ಈ ಒಂಬತ್ತು ಮರೈನ್ ಗಳು ರಾಸಾಯನಿಕ ಪ್ರಭಾವದಿಂದ ನೀರಿಗಾಗಿ ಸಮುದ್ರಕ್ಕೆ ಹಾರಿ ಪ್ರಾಣ ಬಿಡುತ್ತಾರೆ, ಹಾಗೆಯೇ ಈ ಸ್ಪ್ರೇ ಅನ್ನು ಯಾವುದೇ ನೌಕೆಯ ಮೇಲೆ ಸಿಂಪಡಿಸಿದರೆ ಅದರಲ್ಲಿರುವ ಎಲ್ಲಾ ಸಿಬ್ಬಂದಿಗಳೂ ತಾವಾಗಿ ನೀರಿಗೆ ಹಾರಿಕೊಂಡು ಸಾಯುತ್ತಾರೆ, ಗುಂಡು ಹಾರಿಸಿದೆಯೇ, ರಾಕೆಟ್ ಹಾರಿಸಿದೆಯೇ ಇಡೀ ನೌಕಾದಳವನ್ನು ನಿಶ್ಚಯಗೊಳಿಸಿ ಬಿಲಿಯನ್ ಗಟ್ಟಲೆ ಬೆಲೆ ಬಾಳುವ ಶತ್ರುಗಳ ಹಡಗನ್ನು ಅದರ ಸುಸ್ಥಿತಿಯಲ��ಲಿ ಸೆರೆಹಿಡಿಯಬಹುದು ಇದೊಂದು ಹೊಸಮಾದರಿಯ ಯುದ್ಧ (ಜೈವಿಕ ಯುದ್ಧ ) ತಂತ್ರವಾಗುತ್ತದೆ. ಕೀಟಗಳ ಮತ್ತು ಇತರೆ ಪ್ರಾಣಿಗಳ ವರ್ತನೆಯ ಮೇಲೆ ಪರಾವಲಂಬಿಗಳ ಪ್ರಭಾವ ತಂತ್ರವನ್ನೇ ಉಪಯೋಗಿಸಿ ಇಂತಹ ರಾಸಾಯನಿಕವನ್ನು ಕೃತಕವಾಗಿ ತಯಾರಿಸುವ ಕ್ರಮ ಹಾಗು ಆ ತಂತ್ರಗಾರಿಕೆಯನ್ನು ಯಾವುದೇ ದೇಶದ ಯುದ್ಧದ ತಂತ್ರಗಾರಿಕೆಯೊಳಗೆ ಅಳವಡಿಸಿಕೊಂಡರೆ ಅಂತಹ ದೇಶಕ್ಕೆ ನೌಕಾದಳದ ಹಾಗೂ ಅದು ಹೊತ್ತು ಸಾಗುವ ವಿಮಾನಗಳ ಅಂಜಿಕೆಯೇ ಇರುವುದಿಲ್ಲ. ಹೀಗೆ ಎಲಿನಾ ಚೀನಾರವರ ಸಹಾಯದಿಂದ ಹಾಗು ತನ್ನ ಸಂಶೋಧನೆಯಿಂದ ಅಮೇರಿಕಾ ಮರೈನ್ ಗಳ ಮೇಲೆ ಹಾಗು ಇವರ ಜೊತೆ ಫ್ರಾನ್ಸ್ ಸಹ ಸೇರಿಕೊಂಡು ನಡೆಸಿದ ಈ ಗ್ರಾಸ್ ಸೇವನೆಯ ಹೊಸ ಮಾದರಿಯ ಯುದ್ಧ ಕುತಂತ್ರವನ್ನು ಇಡೀ ದೇಶಕ್ಕೆ ಎತ್ತಿ ತೋರುಸುತ್ತಾಳೆ.

*ಕಾರ್ತಿಕೇಯ*
Profile Image for Madhukara.
Author 7 books5 followers
April 20, 2023
A good short read. The author nicely combines the thriller genre with evolutionary science. Even though the story structure and pros are very basic, the core idea of the story is really good. Overall an enjoyable read.
5 reviews
October 2, 2024
The story starts nicely by setting stage to a military conspiracy, however it loses steam after first few chapters.

The involvement of Chinese and Indian governments in the story is teased early, but that plot point is also not explored much.

The protagonist easily uncovers the conspiracy and discloses it to the whole world with no fuss from the perpetrators as they are made to look so dumb by the writer.
Second half of the book is disappointing.
Profile Image for Ashwini.
34 reviews3 followers
May 8, 2024
ಗಣೇಶಯ್ಯ ಅವರ ಪುಸ್ತಕಗಳನ್ನು ವಿಭಿನ್ನ ಆಯಾಮದಲ್ಲಿ ನೋಡಲು ಶುರು ಮಾಡಿದ ಮೇಲೆ i ಪುಸ್ತಕ ನನಗೆ ತುಂಬಾ ಹಿಡಿಸಿತು...
ಅವರ ಅಷ್ಟೂ ಪುಸ್ತಕಗಳನ್ನು ಓದಿದ್ದೆ. ನಿರೂಪಣೆ ಒಂದೇ ತರ ಏಕತಾನತೆ ಅನ್ನಿಸ್ತಾ ಇತ್ತು.
ಸದ್ಯ ಅವರ ಒಂದು ಸಂದರ್ಶನ ನೋಡಿದ ಮೇಲೆ ಅವರ ಈ ಬಗೆಯ ಬರವಣಿಗೆಯ ಹಿಂದಿನ ಆಶಯ ಅರ್ಥ ಆಯ್ತು.
ಈ ಪುಸ್ತಕ ತುಂಬಾ ಚೆನ್ನಾಗಿ ಇದೆ.
ಪುಟ್ಟ ಪುಸ್ತಕ, ಆರಾಮದ ಓದು, ಹೊಸಬರಿಗಂತೂ ಹೇಳಿ ಮಾಡಿಸಿದ ಹಾಗೆ ಇದೆ. ಎಲ್ಲರೂ ಓದಿ.
Profile Image for Soumya.
217 reviews48 followers
February 3, 2024
Parasitic behavior ಅನ್ನು ಯುದ್ಧಗಳಲ್ಲಿ ಉಪಯೋಗಿಸುವ tactics ನ ಒಂದು ಹೆಳೆ ಹಿಡಿದು ಬರೆದಿರುವ ಕಾದಂಬರಿ.
As always typical ಗಣೇಶಯ್ಯ ಅವರ ಶೈಲಿಯಲ್ಲಿ suspense thriller.
ಸಣ್ಣ ಪುಸ್ತಕ, ಕಥೆ ಚೆನ್ನಾಗಿದೆ. ಹಾಗಾಗಿ ವೇಗವಾಗಿ ಓದುತ್ತಾ ಹೋಗಬಹುದು.
Displaying 1 - 6 of 6 reviews

Can't find what you're looking for?

Get help and learn more about the design.