2022 ರ ಕೊನೆಯ ಓದು ಒಂದೊಳ್ಳೆ ಕತೆಯೊಂದಿದೆ ಮುಗಿದಿದ್ದು ತುಂಬಾ ಸಂತಸವನ್ನುಂಟು ಮಾಡಿತು. ಕತೆಯನ್ನು ಒಂದು ಬದಿಗೆ ಇಟ್ಟು ನೋಡುವುದಾದರೆ ಇಲ್ಲಿರುವ ಚಾರ್ಮಾಡಿಯ ಪ್ರಕೃತಿಯ ವಿವರಣೆ ತುಂಬಾ ವಿಸ್ತಾರವಾಗಿ ಬಹಳ ಚೆನ್ನಾಗಿ ಮನ ಮುಟ್ಟುವಂತೆ ಮಾಡಿದ್ದಾರೆ. ತುಂಬಾ ಸರಳವಾಗಿ ಈಗಿನ್ ಪೀಳಿಗೆಯ ಯುವಕರ ಪ್ರೀತಿಯಲ್ಲಾಗುವ ಇಂಟೆರೆಸ್ಟಿಂಗ್ ವಿಷಯಗಳನ್ನು ಬಹಳ ರಿಯಲಿಸ್ಟಿಕ್ ಆಗಿ ಹೇಳಿದ್ದಾರೆ. ಪ್ರೀತಿ ಮಾಡುವಾಗ ಚಾಚು ತಪ್ಪದೆ ಪಾಲಿಸಬೇಕಾದ ವಿಷಯಗಳು ಅಂತ ಲಿಸ್ಟ್ ಮಾಡಿಕೊಳ್ಳೋರು ಇದ್ದರೆ ಮಾಡಿಕೊಳ್ಳುವ ವಿಷಯಗಳು ಇದರಲ್ಲಿವೆ. ಪ್ರೀತಿ ಮಾಡುವವರಿಗೆ; ಪ್ರೀತಿಯಲ್ಲಿ ಬಿದ್ದು ಎದ್ದು ಒದ್ದಾಡಿ ಬ್ರೇಕ್ ಅಪ್ ಮಾಡಿಕೊಂಡವರಿಗೆ; ಅಂಡ್ ಇನ್ನು ಪ್ರೀತಿ ಮಾಡಲು ಕಾತುರದಿಂದ ಯಾರಿಗಾದರೂ ಕಾದಿರುವರು ಇದನ್ನು ಓದಬಹುದು.