Yashwant Vithoba Chittal was a Kannada fiction writer born in Hanehalli, Uttara Kannada District
He completed his primary school education from his village school and his high school from the Gibbs High School, Kumta (1944).Later he did his Bachelors in science and Bachelors in technology both from Bombay University being a top ranker and gold medalist in the year 1955 and master's degree in chemical engineering from Stevens Institute of Technology, United States, and simultaneously pursued a career in science and technology along with literature. His contributions in the field of Polymer Science and synthetic resins was well recognized and he was selected as Fellow of Plastics and Rubber Institute, London.
He is well know for his short stories as well as novels earning him Karnataka Sahitya Academy Award, Sahitya Academy Award, Vardhamana Award, Adikavi Pampa Award etc
ಇದು ಚಿತ್ತಾಲದ ಕೊನೆಯ ಕಾದಂಬರಿ. ಅಪೂರ್ಣ ಕಾದಂಬರಿ. ಹಾಗಾಗಿ ಓದಲು ಹಿಂಜರಿಕೆ ಇತ್ತು. ಯಾಕೆ ಎಂದು ಚಿತ್ತಾಲರ ಓದಿದವರಿಗೆ ತಿಳಿದಿರುತ್ತದೆ. ಅವರ ಕೃತಿಗಳಲ್ಲಿ ವೃತ್ತ ಪೂರ್ಣವಾಗುವುದು, ರಹಸ್ಯ ಒಡೆಯುವುದು ಕೊನೆಯಲ್ಲಿ. ಆದರೆ ಮುಖಪುಟ ಮತ್ತು ಚಿತ್ತಾಲರದೇ ವಿಶಿಷ್ಟ ಹೊಳಹುಗಳಿಗಾಗಿ ಅಷ್ಟೆ ಈ ಕೃತಿ ಓದಿದ್ದು. ಅದಕ್ಕೆ ನ್ಯಾಯ ಒದಗಿತೇ ಎಂದರೆ ಅತೃಪ್ತಿಯೇ ಉತ್ತರ. ಅವರ ಮೂರು ದಾರಿಗಳು, ಛೇದ, ಶಿಕಾರಿ ಇವೆಲ್ಲ ಒದಗಿಸಿದ ಆ ಕಾಫ್ಕಾ ಪರಿಸರ ,ಉಸಿರುಗಟ್ಟಿಸುವ ವಾತಾವರಣ ಸಂದರ್ಭ ಇವೆಲ್ಲ ಕನ್ನಡ ಸಾಹಿತ್ಯಕ್ಕೆ ಹೊಸದು. ಹಾಗೆಯೇ ಪುರುಷೋತ್ತಮದ ಜೀವನಸೆಲೆ ,ಧನಾತ್ಮಕ ಚಿಂತನೆ ಕೂಡ. ಆದರೆ ಈ ಗುಟ್ಟು ಒಡೆಯುವ ತಂತ್ರ ಕೇಂದ್ರ ವೃತ್ತಾಂತದಲ್ಲಿ ಗುರಿ ಮುಟ್ಟುವಲ್ಲಿ ಸೋತಿತ್ತು. ಬರವಣಿಗೆಯಲ್ಲಿ ಚಿತ್ತಾಲತಮ ಇದ್ದಿದ್ದರೂ ಅದು ಹೂರಣವಿಲ್ಲದೆ ಸೊರಗಿತ್ತು. ದಿಗಂಬರವೂ ಹಾಗೆಯೇ. ನಿರೂಪಕ ನಮಗೆ ಎಲ್ಲವನ್ನೂ ಹೇಳಹೊರಟ ಪಾತ್ರ ,ಅದನ್ನು ಧಾರಾವಾಹಿಯ ಹಾಗೆ ಅಥವಾ ರೋಚಕತೆಯ ಬಿಡಿಸುವ ಹಾಗೆ ಹೇಳುವ ಅಂದರೆ ನಮ್ಮ ಜೊತೆ ಮಾತಾಡುವ ನಿರೂಪಕ ಆ ಗುಟ್ಟನ್ನು ಮಾತ್ರ ಕೊನೆಯವರೆಗೆ ಕಾಪಿಡುವ ಅಂಶ ,ಪಾತ್ರಕ್ಕಿಂತ ಲೇಖಕನ ಆವಶ್ಯಕತೆ ಎಂಬಂತೆ ತೋರುತ್ತಿತ್ತು. ದಿಗಂಬರ ಚಿತ್ತಾಲರ ಶೈಲಿಗೆ ಹೊಸದೇನೋ ಸೇರಿಸುವುದಿಲ್ಲ. ಅವರ ಇತರ ಕೃತಿಗಳ ಓದಿದವರಿಗೆ ಆ ಜಗತ್ತಿಗೆ ಇನ್ನೊಮ್ಮೆ ನೆನಪುಗಳ ರಿಫ್ರೆಶ್ ಮಾಡಲು ಹೋದ ಹಾಗೆ. ಹಾಗಾಗಿ ದಿಗಂಬರ ಒಬ್ಬ ಶ್ರೇಷ್ಠ ಕಾದಂಬರಿಕಾರರ ಅಧ್ಯಯನ ಮಾಡುವ ದೃಷ್ಟಿಯಿಂದ ಮಾತ್ರ ಓದಬಹುದಷ್ಟೇ. ಕಾದಂಬರಿ ಓದಿನ ರಸಾನುಭವ ಇಲ್ಲಿ ಅಪೂರ್ಣ.
ಚಿತ್ತಾಲರ ಕೊನೆಯ ಕಾದಂಬರಿ ಎಂದು ಈ ಪುಸ್ತಕವನ್ನು ಓದಲು ಶುರು ಮಾಡಿದೆ. ಮಧ್ಯಮ ವರ್ಗದ ಜನರ ಮನಸ್ಥಿತಿ ಚೆನ್ನಾಗಿ ನಿರೂಪಿಸಿದ್ದಾರೆ ಚಿತ್ತಾಲರು. ಬೇರೆಯವರು ಹೇಳುವುದನ್ನು ನಂಬುವುದೋ? ನಮಗೆ ಗೊತ್ತಿರುವುದು ಸತ್ಯವೋ?
ಚಿತ್ತಾಲರ ಈ ಕಾದಂಬರಿ ಪ್ರಕಟವಾಗಲಿದೆ ಎಂಬ ಸುದ್ದಿ ಬಂದಾಗಿನಿಂದ ಕುತೂಹಲವಿತ್ತು. “ಮುಗಿಯಿತು” ಎನ್ನುವ ಮುದ್ರೆ ಬೀಳದ, ಅದೂ ಚಿತ್ತಾಲರಂತಹ ಸದಾ ಎಚ್ಚರದ ಲೇಖಕರ ಅಪೂರ್ಣ ಕಾದಂಬರಿ, ಅವರ ಕಾರ್ಯವೈಖರಿಯ ಬಗ್ಗೆ ಕೊಡಬಹುದಾದ ಸುಳುಹುಗಳ ಕುರಿತ ಕುತೂಹಲ ಇದು. ಚಿತ್ತಾಲತನದ ಹಲವು ಆಯಾಮಗಳು - ಮುಂಬೈ ಪರಿಸರ, ಕನ್ನಡಕ್ಕೆ ಅತಿಥಿಗಳಂತೆ ಅವರು ಕರೆತರುವ ಶಬ್ದಗಳು, ಎಲ್ಲಕ್ಕೂ ಹೆಚ್ಚಾಗಿ ಸಾಮಾನ್ಯ ಎನಿಸುವ ಸಂಗತಿಗಳೇ ನಿಗೂಢವಾಗುವ ವಿಸ್ಮಯ ಈ ಕಾದಂಬರಿಯಲ್ಲಿ ಇನ್ನಷ್ಟು ಸ್ಪುಟವಾಗಿವೆ. ಕತೆಯ ಬೆನ್ನು ಹತ್ತಿ ಹೋಗುವ ಓದುಗರಿಗಿಂತಲೂ ಕಥನದ ಪ್ರಕ್ರಿಯೆಯ ಹಿಂದೆ ಬಿದ್ದವರಿಗೆ ಹೆಚ್ಚು ಪ್ರಿಯವಾಗಬಲ್ಲ ಕಾದಂಬರಿ. ಕಥೆ ಪೂರ್ತಿಯಾಗುವುದಿಲ್ಲ ಎನ್ನುವುದು ತಿಳಿದಿದ್ದರೂ ಕೊನೆ((?)ತನಕ ಓದುವ ಕುತುಹಲ, ಮುಗಿಸಿದ ಮೇಲೆ ಕಥೆಯ ಮುಕ್ತಾಯ ಏನಿರಬಹುದಿತ್ತು ಎನ್ನುವ ಊಹಾಪೋಹ, ಏನಿರಬೇಕು ಎನ್ನುವ ಆಶಯ.. ಹುಟ್ಟದಿರುವುದಿಲ್ಲ. ವಾಸ್ತವದಲ್ಲಿ ಯಾವ ಕಥೆಯೂ ಮುಕ್ತಾಯವಾಗುವುದಿಲ್ಲ. “ಈವರೆಗೆ ಮಂಡಿಸಿದ ವಾದ-ವಿವಾದಗಳನ್ನು ಪರಿಶೀಲಿಸಿದ ನಂತರ…” ಎಂದು ನ್ಯಾಯಾಧೀಶರು ತೀರ್ಮಾನ ಕೊಡುವ ಹಾಗೆ ಲೇಖಕನೋ, ಓದುಗರೋ ಆ ಕತೆಯನ್ನು ಮುಗಿಸಿ ಮತ್ತೊಂದನ್ನು ಎತ್ತಿಕೊಳ್ಳುತ್ತಾರೆ. ಬೇಕಾದಾವಾಗ ಮತ್ತೆ ಅದೇ ಅಥವಾ ಮತ್ತೊಂದು ರೂಪದಲ್ಲಿ ಕಥೆ ಮುಂದುವರೆಯುತ್ತದೆ. ಹಾಗಾಗಿ ಕಾದಂಬರಿಗೆ ಘೋಷಿತ ಮುಕ್ತಾಯವಿಲ್ಲ ಎನ್ನವುದು ಒಂದು ಸಮಸ್ಯೆಯಾಗುವುದಿಲ್ಲ. ಚಿತ್ತಾಲರ ಜಗತ್ತಿನ ಇನ್ನೂ ಕೆಲವು ಮುಖಗಳನ್ನು, ಆಯಾಮಗಳನ್ನು ಈ ಕಾದಂಬರಿ ತೆರೆದಿಡುವುದರಿಂದ ಇದನ್ನು ಸ್ವಾಗತಿಸಬೇಕು. ಚಿತ್ತಾಲರು ಸೃಷ್ಟಿಸಿದ ಜಗತ್ತಿನ ಕೊನೆಯ ಕಂತಾದ ಈ “ದಿಗಂಬರ” ಇಲ್ಲದೇ ನಮ್ಮ ಓದು ಪೂರ್ತಿಯಾಗದು. ರಾಜೇಂದ್ರ ಚೆನ್ನಿ, ವಿವೇಕ ಶಾನಭಾಗರ ಮೊದಲ ಮಾತುಗಳು, ಚಿತ್ತಾಲರ ಕೈಬರೆಹದ ಪುಟಗಳು ಕಾದಂಬರಿಗೆ ಮೆರುಗು ತಂದಿವೆ.
This is the final novel written by Chittal and is incomplete. However, it's still interesting enough to read on.
I've noticed two themes that are recurring in his works. One is the self inflicted wounds through doubt and over thinking and the other, the social stigma that lower middle class families face. Characters in his books often seem to get entangled in situations beyond their control and then make it worse by their own thoughts and decisions. This novel is no different.
Chittal is one of the finest writers of Kannada. Anyone who likes to read Kannada books should give him a try