Malayalam translation of 'Namma Oorina Rasikaru', a beautiful narrative on village life, written by Kannada writer Goruru Ramaswamy Iyengar, who was well known for his humour and satire.
This translation titled 'Nattinpurathe Rasikanmar' is published by National Book Trust. The translation was done by Susheela P. Upadhyaya.
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ. ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ ಶಬ್ದದ ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.
ನಾನು ನನ್ನ ಹೈಸ್ಕೂಲನಲ್ಲಿ ಈ ಪುಸ್ತಕ ಓದಿದ್ದೇ. ಬಹಳ ವರ್ಷಗಳ ನಂತರ ಪುನಃ ಓದುವಾಗ ಖುಷಿಯಾಯ್ತ್ತು. ಬಹಳ ಸಮಯದ ನಂತಕ ಸಿಕ್ಕ ಆಪ್ತ ಸ್ನೇಹಿತರು ನೀಡುವ ಆಹ್ಲಾದಕತೆ ಈ ಪುಸ್ತಕದಲ್ಲಿದೆ. ಕನ್ನಡದ ಅಪರೂಪದ ಲಲಿತ ಪ್ರಬಂಧಗಳು. ಮತ್ತೆ ಮತ್ತೆ ಓದಿ ಆಸ್ವಾದಿಸುವಂತಹು. ಮೇಲ್ನೋಟಕ್ಕೆ ಅಂತಹ ಗಹನ ವಿಷಯಗಳೇನೂ ಇಲ್ಲ, ಗ್ರಾಮ್ಯ ಬದುಕಿನ ಆಗೂಹೋಗುಗಳಷ್ಟೇ ಅನಿಸಿದರು ಹೊಸ ಚಿಂತನೆಗಳ ರುವಾರಿಗಳು ಈ ಪ್ರಬಂಧಗಳು.
Oh wow, I am surprised to to see this on Goodreads, really. Oh boy, it reminds me of my days as a 15 year old reading Kannada books. The book is an absolute treat for a person like me who is interested in non fiction. It gives an insight into the lives of the village folk who live in the village of Gorur (which is near Hassan, in Karnataka, India). Every chapter revolves around a different incident and talks about how the naive village folks went about dealing with it. Sometimes successfully and some times not so successfully. It's funny and I was really transported to Gorur as I was reading this book. Iyengar is quite a well known author in Kannada literature. It wouldn't do justice if I'd say anything about him as I have only read this book of his and a bit of "Bhootayyana Maga Ayyu", which I also think is quite brilliant, but I haven't read it fully, so I shall keep away from talking about it. This book is definitely one of those books whose English translation I await.
ಲೇಖಕರ ಊರ ಜನರ ಚಿತ್ರಣವನ್ನು ಸೊಗಸಾಗಿ ಬರೆದಿದ್ದಾರೆ. ಹೇಮಾವತಿ ನದಿ ತೀರದ ಒಂದು ಹಳ್ಳಿಯಲ್ಲಿ ಅನೇಕ ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ವ್ಯತ್ಯಾಸಗಳಿರುವ ಆ ಹಳ್ಳಿಯಲ್ಲಿ ಅದೆಷ್ಟು ಒಡನಾಟದಿಂದ ಒಂದು ಕೂಡು ಕುಟುಂಬದಂತೆ ಜೀವಿಸುತ್ತಿದ್ದರು ಎಂಬುದು ಸದೃಶವಾಗುವಂತಿದೆ. ಅನೇಕ ಕತೆಗಳಿರುವ ಈ ಪುಸ್ತಕ ಕಥಾಸಂಕಲನ ಎಂದು ಹೇಳಲಾಗದು ಏಕೆಂದರೆ ಅನೇಕ ಕತೆಗಳಿದ್ದರೂ ಎಲ್ಲಾ ಕತೆಗಳಲ್ಲೂ ಅದೇ ಹಳ್ಳಿಯ ಜನರು, ಅವರ ಮನಸ್ಥಿತಿ ಎಲ್ಲಾ ಕಥೆಗಳಲ್ಲೂ ಸಾಗುವುದರಿಂದ ಒಂದು ಸಣ್ಣ ಕಾದಂಬರಿಯಂತಿದೆ. ಶೀನಪ್ಪನ ಸದ್ಗುಣ, ಜೋಡೀದಾರರ ಉದಾರತೆ, ರಂಗೇಗೌಡನ ಶುದ್ಧ ಕನ್ನಡ ಪ್ರೇಮ, ಹಳ್ಳಿ ಹೆಂಗಸರ ಕಾರ್ಯವೈಖರಿ ಈ ರೀತಿ ಪುಸ್ತಕದುದ್ದಕ್ಕೂ ಹಳ್ಳಿಯ 'ರಸಿಕರ' ಕಥೆ ನಮ್ಮನ್ನು ಕಥೆಯೊಳಗೆ ಸೆಳೆದುಬಿಡುತ್ತದೆ. ಹಳ್ಳಿ ಜೀವನದ 'ಹೌಲೈಟ್ಸ್' ಮಾದರಿಯಲ್ಲಿ ಸಣ್ಣ ಸಣ್ಣ ಸಂದರ್ಭದ ವಿವರಣೆಯೊಂದಿಗೆ ಹಳ್ಳಿಯವರನ್ನು ಪರಿಚಯಿಸುತ್ತಾ ಹೋಗುತ್ತಾರೆ. ಲೇಖಕರು ನಾಸ್ತಿಕರಾದರೂ ಹಳ್ಳಿಯ ಆಸ್ತಿಕತೆಯನ್ನು ಚಂದವಾಗಿ ಪರಿಚಯಿಸಿದ್ದಾರೆ, ಟೊಳ್ಳು ಮೂಢ ಆಚರಣೆಗಳನ್ನು ಜರೆದಿದ್ದಾರೆ. ಸಂಘ ಜೀವಿಯಾದ ಮನುಷ್ಯನು ಸಂಘಟಿತರಾಗಿ, ಅನ್ಯೋನ್ಯವಾಗಿ, ವಿವಿಧತೆಯಲ್ಲಿ ಏಕತೆಯಾಗಿ ಬದುಕಿದ 36 ಮನೆಗಳಿದ್ದ ಆ ಹಳ್ಳಿಯ ಜನರ ಮೌಲ್ಯವನ್ನು ಹೇಳವಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳಿಗರ ಬದುಕನ್ನು ಅಲ್ಲಿನ ಸೊಗಡನ್ನು ಇಷ್ಟು ಸೊಗಸಾಗಿ ಬಣ್ಣಿಸಿರುವ ಬೇರ್ಯಾವ ಕನ್ನಡ ಪುಸ್ತಕವನ್ನು ನಾನು ಕಾಣೆ. ಗೊರೂರರ ತಮಾಶೆ ಮಿಶ್ರಿತ ನಿರೂಪಣೆ ಶೈಲಿ ಓದಿನುದ್ದಕ್ಕೂ ನಿಮ್ಮನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ!
ಈ ಪುಸ್ತಕವನ್ನು ನಾನು ಓದಿ ಹಲವು ವರುಶಗಳೇ ಸಂದಿವೆ. ಅಷ್ಟಾಗಿ ಹಿಡಿಸಿರಲಿಲ್ಲ, ಹಾಗಾಗಿ ಮರು ಓದನ್ನು ಕೈಗೊಳ್ಳಲಿಲ್ಲ! ಗ್ರಾಮ್ಯ ಬದುಕಿನ ಪರಿಚಯ ನನಗೆ ಇದ್ದಿದ್ದರಿಂದಲೂ ಇರಬಹುದು ಅಥವಾ ಚಿಕ್ಕ ವಯಸ್ಸಿನಲ್ಲಿ ಓದಿದ್ದರಿಂದಲೂ ಇರಬಹುದು. ಈ ಪುಸ್ತಕದ ಬಗೆಗೆ ಒಂದು ವಾಕ್ಯದಲ್ಲಿ ಹೇಳಬೇಕೆಂದರೆ ಇದು ಗೋರೂರಿನ ಜನರ, ಜೀವನದ, ಸಂಸ್ಕೃತಿಯ ಪರಿಚಯ. ಯಾವುದೇ ಒಂದು ಹಳ್ಳಿಯನ್ನ ತೆಗೆದುಕೊಂಡರೆ ಅಲ್ಲಿ ಹತ್ತು ಜನರಿದ್ದರೇ ಹತ್ತು ವನಸ್ಸುಗಳಿರುವುದು ಸಾಮಾನ್ಯ; ಅಲ್ಲಿ ಹಾಸ್ಯವೂ ಇರುವುದು, ತಾರತಮ್ಯವೂ ಇರುವುದು, ಸಂಘಟಿತ ಬಾಳ್ವೆಯೂ ಇರುವುದು, ಅಸೂಯೆಯೂ ಇರುವುದು, ಮುಗ್ಧತೆಯೂ ಇರುವುದು, ಇವೆಲ್ಲವುದರ ಜೊತೆಗೆ ಬಾಳ್ವೆ ಸಾಗುತ್ತಾ ಇರುವುದು ಅಷ್ಟೇ!!!
ಪುಸ್ತಕದ ಹೆಸರು ನೋಡಿದಾಕ್ಷಣ ಇದು ರಸಿಕರ ಕಥೆ ಎಂದುಕೊಂಡುಬಿಟ್ಟೀರೆ. ಅಲ್ಲವೇ ಅಲ್ಲ. ಇದು ಒಂದು ಹಳ್ಳಿಯಲ್ಲಿನ ಜೀವನ, ಅಲ್ಲಿನ ಸಂಪ್ರದಾಯ, ಅಲ್ಲಿನ ಜನರ ಬದುಕು, ಸಂಸ್ಕೃತಿ, ಇವೆಲ್ಲವನ್ನು ಒಳಗೊಂಡ ಒಂದು ಕಥಾಲೋಕ.ಹಾಸ್ಯ ಎಂದರೆ ಬಿದ್ದು ಬಿದ್ದು ನಗುವ ಹಾಸ್ಯವಲ್ಲ. ಹಾಸ್ಯವೆಂದರೆ ಕೊಠಡಿಯಲ್ಲಿ ಒಬ್ಬನೇ ಕುಳಿತು ಓದಿ ನಗುವ ಹಾಸ್ಯವಲ್ಲ. ಹಾಸ್ಯ ಎಂದರೆ ದಿನನಿತ್ಯದ ಬದುಕಿನಲ್ಲಿ ನಡೆಯುವ ಘಟನೆಗಳಲ್ಲಿನ ಹಾಸ್ಯ. ಹಾಸ್ಯ ಎಂದರೆ ಎಷ್ಟೇ ಕಷ್ಟವಿದ್ದರೂ ಅನುಭವಿಸಬಹುದಾದ ಹಾಸ್ಯ. ಇದು ಜೀವನ ಪಾಠ ಮತ್ತು ಹಾಸ್ಯ ಎರಡೂ ಸರಿಯಾಗಿ ಮಿಳಿತಗೊಂಡು ಮೃಷ್ಟಾನ್ನವನ್ನು ತಿನ್ನುವ ಅನುಭವ ನೀಡುವ ಪುಸ್ತಕ.
The only book from school syllabus that I wanted to re-read. 16 years later this book is still as fresh as ever. It gives you a sample of the simple village life and its colorful characters. An enjoyable light read in simple day to day Kannada.
ತುಂಬಾ ಸರಳವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ಹಳ್ಳಿಯ ಜನರ ವಿನೋದ, ಚೇಷ್ಟೆ, ಸರಳ ಜೀವನ ಅಲ್ಲದೆ ಆಗಿನ ಕಾಲದ ಹಬ್ಬ, ಸಂಸ್ಕೃತಿ, ಪರಂಪರೆ ಮತ್ತು ಬೇಸಾಯದ ಪದ್ದತಿಗಳನ್ನು ನೆನಪಿಸುತ್ತದೆ.
one of the beautiful narrations. The author talks about his place so beautifully. The write up takes up you to his place and literally make you visualize the narration.
I listened to this audiobook on storytel. It is not a novel or even a story. It is just a series of random incidents that happened in the author's village in malnad region in the 1930s. This is sort of similar to the introduction given in the hugely popular Hindi webseries gullak -- yeh kahani nahin, kisse hai (idu kathe alla, ghatanegalu)
It gives a fantastic view of how India was reshaping around 90 years ago. There are incidents of setting up a rural panchayat, random incidents of ghosts, of someone trying hard to pass SSLC and after passing, correcting everyone to avoid "gramya bhashe" ... A series of small totally forgettable incidents. But as I read (or rather listened to) it 90 years later, it gave me a view of the life of malnad region back then. Books like this teach more about history rather than all those history books talking about kings, kingdoms and wars.
Unfortunately there is little to no literature (at least I am not aware) like this book written in 19th century or earlier ... It is almost impossible to figure what life was for normal people during those days. The only source are the inscription stones ...
“ನಮ್ಮೂರಿನ ರಸಿಕರು-ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಚಿಸಿರುವ ಈ ಕೃತಿ ೧೯೩೨ ರಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯದ ಅಮೂಲ್ಯ ಹಾಸ್ಯ ಸಂಗ್ರಹ. ಲೇಖಕರು ತಮ್ಮ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ಹಳ್ಳಿಯ ಜನ, ಅವರ ಸಂಭಾಷಣೆಗಳು, ಕಿರು ಘಟನೆಗಳನ್ನು ಹಾಸ್ಯವಾಣಿಯಾಗಿ ಬಿಂಬಿಸಿದ್ದಾರೆ. ಹೇಮಾವತಿ ನದಿ ತಪ್ಪಲಿನ ಒಂದು ಹಳ್ಳಿಯ ಜನಗಳ ಮೂಲಕ ಭಾರತದ ಪ್ರತಿ ಹಳ್ಳಿಯನ್ನೂ ಅನಾವರಣಗೊಳಿಸಿದ್ದಾರೆ.”
“ಗ್ರಾಮೀಣ ಬದುಕಿನ ಸರಳತೆ, ಜನರ ಅಂತರಂಗದ ಭಾವನೆಗಳು ಮತ್ತು ಹಳ್ಳಿಗರ ಕಲೆ-ಸಂಸ್ಕೃತಿಯ ನಿಜವಾದ ಚಿತ್ರಣ ಪಡೆಯುತ್ತದೆ. ಹಾಸ್ಯ, ವ್ಯಂಗ್ಯ, ನೈಸರ್ಗಿಕ ಹಾಸ್ಯ ಸಂಭಾಷಣೆಗಳ ಮೂಲಕ ಕಥೆ ಓದುಗರ ಮನಸ್ಸಿನಲ್ಲಿ ಹಳ್ಳಿಯ ಸುವಾಸನೆ ಮೂಡಿಸುತ್ತದೆ. ಗ್ರಾಮೀಣ ಸಮಾಜದ ಸೌಂದರ್ಯವನ್ನು ಮಾತ್ರವಲ್ಲ, ಅದರ ಒಳಗೆ ಅಡಗಿರುವ ಅನೇಕ ಮನುಷ್ಯರ ಸ್ವಭಾವ, ಸ್ಪರ್ಧೆ, ಸ್ನೇಹ, ಮುಗ್ಧತೆ ಮತ್ತು ಮನರಂಜನೆಗಳ ಜೊತೆಗೆ ವ್ಯಕ್ತಿತ್ವಗಳನ್ನು ಹತ್ತಿರದಿಂದ ತೋರಿಸುತ್ತದೆ.
ಓದುತ್ತಾ ಹೋದಂತೆ ಪ್ರತಿ ಊರಿನಲ್ಲಿರುವ ಹಾಸ್ಯಮಯ ಪಾತ್ರಗಳು ಕಣ್ಣೆದುರಿಗೆ ಬಂದು ನಗಿಸುತ್ತವೆ. ವ್ಯಂಗ್ಯದ ಜೊತೆಗೆ ಸರಳತೆ, ನೈಜ ಜೀವನದ ಸುವಾಸನೆಯ ಜೊತೆಗೆ ಸಾಮಾಜಿಕ ಕಳಕಳಿಯೂ ಈ ಪುಟ್ಟ ಕೃತಿಯಲ್ಲಿದೆ.”
ಸುಲಭ ಓದು ಮತ್ತು ಓದುವವರಲ್ಲಿ ಬಾಲ್ಯದ ನೆನಪು, ಹಳ್ಳಿಯ ವಾತಾವರಣ ಮತ್ತು ಹಾಸ್ಯದ ಉಲ್ಲಾಸತನ ಮೂಡಿಸುತ್ತದೆ.
ರಮ್ಯವಾದ ಲಲಿತ ಪ್ರಬಂಧಗಳು ಸಂಕಲನ. ಹಳ್ಳಿಗರ ಬದುಕು , ಜೀವನ ಶೈಲಿ, ವಿನೋದಗಳು ಓದಿನುದ್ದಕ್ಕೂ ಲಭಿಸುತ್ತವೆ. ಅತಿ ಉತ್ತಮವಾದ ಕೃತಿ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಲೋಕಕ್ಕೆ ಧುಮುಕುತ್ತಿರುವವರಿಗೆ ಇಂಥಹ ಕೃತಿಗಳ ಅಧ್ಯಾಯನದ ಕೊರತೆ ಖಂಡಿತ ಕಾಣುತ್ತಿದೆ.