ಯಾವುದು ಚರಿತ್ರೆ? - (ತೆಲುಗು ಮೂಲ - ಎಂ.ವಿ.ಆರ್.ಶಾಸ್ತ್ರಿ ಕನ್ನಡಕ್ಕೆ- ಬಾಬು ಕೃಷ್ಣಮೂರ್ತಿ)
ಚರಿತ್ರೆ ಅಂದರೆ ಗೆದ್ದವರು ಬರೆದ ಕತೆ ಎಂಬ ಮಾತಿದೆ. ಅವರ ಮೂಗಿನ ನೇರಕ್ಕೆ ಯಾವುದು ಸರಿಯೋ ಅದು. ನಮ್ಮ ಇತಿಹಾಸ ಓದಿದರೆ ಇದು ಸ್ಪಷ್ಟವಾಗುತ್ತದೆ.
ಇಂತಹ ಇತಿಹಾಸದಲ್ಲಿ ಹುದುಗಿಹೋದ ಅನೇಕ ಸತ್ಯಗಳ ಅಧ್ಯಯನದಿಂದ ಧೂಳು ಕೊಡವಿ ಸಾಕ್ಷ್ಯಗಳ ಸಮೇತ ಇಲ್ಲಿ ಬರೆದಿದ್ದಾರೆ. ಮ್ಯಾಕ್ಸ್ ಮುಲ್ಲರ್ ನ ವೇದಗಳ ಅನುವಾದ ಕಾರ್ಯದ ಅಸಲೀಯತ್ತು, ಚಂದ್ರಗುಪ್ತ ಮೌರ್ಯ ಅಲೆಗ್ಸಾಂಡರನ ಕಾಲದಲ್ಲಿ ಇದ್ದ ಅನ್ನುವುದು ಸುಳ್ಳು ಆ ಚಂದ್ರಗುಪ್ತನೇ ಬೇರೆ ಅನ್ನುವುದನ್ನು ನಿರೂಪಿಸುವ ಲೇಖನ, ಮೊಗಲ್ ರಾಜರ ರಕ್ತ ಪಿಪಾಸುತನದ ಹಸಿ ಹಸಿ ಚಿತ್ರಣ, ನಮ್ಮ ರಜಪೂತರ ಶೌರ್ಯಗಾಥೆ, ಇತಿಹಾಸ ಪುಟಗಳಲ್ಲಿ ಮರೆಯಾಗಿ ಹೋದ ಹೇಮು ಎಂಬ ರಾಜನ ಕತೆ, ಆದಿ ಶಂಕರರ ಜೀವನ ಕಾಲದ ಕುರಿತ ನಿಜ ಚಿತ್ರಣ, ಬುದ್ಧನ ಕಾಲಘಟ್ಟದ ಕುರಿತ ಆಧಾರಪೂರ್ಣ ಲೇಖನ ಒಂದೇ ಎರಡೇ.
ಹೀಗೆ ನಾವು ಇತಿಹಾಸ ಅಂತ ಓದಿದ್ದ ಎಲ್ಲವನ್ನೂ ಅನುಮಾನದಿಂದ ನೋಡಬೇಕಾದಂತೆ ಮಾಡುತ್ತದೆ ಈ ಪುಸ್ತಕ. ಅಲ್ಲಲ್ಲಿ ಸ್ವಲ್ಪ ಹಿಂದೂಪರ ವಾಲಿದಂತೆ ಕಂಡರೂ ಇದರ ಸತ್ಯಾಸತ್ಯತೆ ಪರೀಕ್ಷಿಸಲು ಅವರು ಉದ್ಧರಿಸಿದ ಮೂಲ ಗ್ರಂಥಗಳ ಓದುವುದೊಂದೇ ಪರಿಹಾರ. (ಆವರಣ ನೆನಪಾಯಿತಾ?)
ಈ ಹೊತ್ತಿನಲ್ಲಿ ಎಷ್ಟೋ ಜನ ಹಾಕುತ್ತಿರುವ ಪ್ರಶ್ನೆಗಳಿಗೂ, ಪ್ರತಿಭಟನೆ ಮಾಡುತ್ತಿರುವ ವಿಷಯಗಳಿಗೂ ಈ ಪುಸ್ತಕದ ಓದು ಕಣ್ಣು ತೆರೆಯಿಸಬಹುದು ಅಂತ ನನಗನ್ನಿಸುತ್ತದೆ. ಓದುವ ತಾಳ್ಮೆ, ಸತ್ಯ ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕಷ್ಟೇ.
It is a book every Bhaarathian should be read. We can know very well by reading this How our history is written by false by pseudo secularists I demanding the govt.to exempt the taxes to this book because every one can buy and read