'கங்கவ்வா கங்காமாயி'க்கு கன்னட இலக்கியத்தில் ஒரு சிறப்பான இடம் உண்டு.
அழிக்கும் தன்மையுள்ள போக்குகள் சமூகத்தின் வாயிலாகவே நடத்தப்படுகின்றன என்பது மோகாசி வெளியிட்டுள்ள சித்தாந்தத்தின் சாரம். நாவலின் சூழ்நிலையில் இந்தப் பொருள் வலுவற்றுவிடக் கூடாது என்பதும் 'கங்கவ்வா கங்காமாயி'யின் முக்கியமான நோக்கமாக இருந்திருக்கிறது. ஆகையால் நாவலில் துன்பியல் முடிவின் நிழல் இருந்தும் கூட அதனுடைய மொத்த தரிசனம் இன்பியல் முடிவாக இருக்கிறது. இந்த சித்தாந்தத்திற்கு முதன்மை கொடுத்து மலரும் படைப்பில், அனுபவத்தை கடைவதால்க் வெளிவருகின்ற நஞ்சை முழுமையாக ஜீரணித்துக் கொள்ளும் ஆற்றல் தேவைப்படுவதில்லை. ஏனெனில் பண்பாட்டு மட்டத்திலும் புத்திவாத மட்டத்திலும் அது பரம்பரையாகக் கிடைத்து விடுகிறது. சித்தாந்த சிறப்புகள் படைப்பின் அனுபவத்தை தம்வசப்படுத்திக் கொண்டு விடவில்லை என்பதும் இந்நாவலின் வெற்றியாகும்.
ಇದು ಇವರ ಮೊದಲ ಕಾದಂಬರಿ. ಐವತ್ತರ ದಶಕದ್ದು.ಸಂಪ್ರದಾಯಬದ್ಧ ಅಂತ ಹೇಳಿಕೊಂಡಿರುವ, ಆ ಪ್ರಕಾರದ ಲಕ್ಷಣಗಳ ಅಳವಡಿಸಿಕೊಂಡಿರುವ ಕಾದಂಬರಿ. ಗಂಗವ್ವ, ಅವಳ ಮಗ ಕಿಟ್ಟಿ, ಗಂಗವ್ವ ನ ತಮ್ಮ ರಾಘವ, ದೇಸಾಯರು, ಕಿಟ್ಟಿಯ ಹೆಂಡತಿ ರತ್ನ, ಕಿಟ್ಟಿಯ ಕಛೇರಿಯ ಜನ ಇವಿಷ್ಟು ಮುಖ್ಯ ಪಾತ್ರಗೞ ಇಟ್ಟುಕೊಂಡು ಆ ಕಾಲಕ್ಕೆ ಬರೆದ ಇದು ಒಂದು ಕ್ಲಾಸಿಕ್. ಕಾಶೀ ಯಾತ್ರೆಗೆ ಹೋಗಿಬರುವಾಗ ಗಂಗವ್ವನಿಗೆ ತಾನು ಗಂಗೆಯ ತರುವುದು ಸಾವಿಗಂಜಿ ಅಂತಂದುಕೊಂಡು ಬದುಕಬೇಕು ಅನ್ನುವ ಛಲದಲ್ಲಿ ಗಂಗೆಯ ಚೆಲ್ಲುತ್ತಾಳೆ. ಅವಳ ಕೊಂಚ ರೊಕ್ಕ ದೇಸಾಯರ ಬಳಿ ಭದ್ರ ವಾಗಿದೆ. ಮಗನ ಮೇಲೆ ಗಂಗವ್ವನ ಹಿಡಿತ ಬಿಗಿ ಯಾಗಿದೆ. ಮಗ ಕಿಟ್ಟಿಗಾದರೋ ಕಛೇರಿಯಲ್ಲಿ ಕೆಲಸ ಹೊಸತಾದ ಕಾರಣ ಹೆಜ್ಜೆ ಹೆಜ್ಜೆಗೂ ಅವಮಾನ ಎದುರಿಸಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಗಂಗವ್ವನ ತಮ್ಮ, ಕಿಟ್ಟಿಯ ಸೋದರಮಾವ ರಾಘವನ ಪ್ರವೇಶವಾಗುತ್ತದೆ. ಅವನಿಗೂ ಗಂಗವ್ವನಿಗೂ ಹಳೆಯ ವೈರ. ಈಗ ರಾಘವನಿಗೆ ತನ್ನ ಮಗಳ ಕಿಟ್ಟಿಗೆ ಮಾಡಿಕೊಡಬೇಕೆಂಬ ಆಸೆ; ಅದಕ್ಕಾಗಿ ಕಿಟ್ಟಿಯ ಮೇಲಾಧಿಕಾರಿಗೂ ತನಗೂ ಇದ್ದ ಪರಿಚಯದ ಮೂಲಕ ಕಿಟ್ಟಿಯ ಮೇಲೆ ಪ್ರಭಾವ ಬೀರುತ್ತಾನೆ.ಈ ತಂತ್ರಗಳ ಬಲೆಗೆ ಗಂಗವ್ವ ಪ್ರತಿ ತಂತ್ರ ಹೂಡಿದರೂ ಮಗನ ಆಗ್ರಹಕ್ಕೆ ಮಣಿದು ಮದುವೆಗೆ ಸಮ್ಮತಿಸುತ್ತಾಳೆ. ಹೊಸ ಸಂಸಾರದಲ್ಲಿ ಯಾವತ್ತಿನ ಅತ್ತ ಸೊಸೆ ಜಗಳ, ಮಗನ ಮಾತಿಗೆ ಕೋಪಗೊಂಡು ಹೊರಟರೆ ಎಲ್ಲಿ ಅವನು ತಮ್ಮ ರಾಘವನ ಬಲೆಯ ಒಳಗೆ ಬೀಳುತ್ತಾನೋ ಎಂಬ ದುಃಖದಿಂದ ಹಲ್ಲು ಮುಡಿ ಕಚ್ಚಿ ಅವಮಾನ ತಾಳಿಕೊಂಡು ಬದುಕುವ ಗಂಗವ್ವ, ಇದರ ನಡುವೆ ದೇಸಾಯರ ಉಡಾಳ ಮಗ ವಸಂತ, ಕಿಟ್ಟಿಯ ಕಛೇರಿಯ ಬದುಕಿನ ಬದಲಾವಣೆ, ಇವೆಲ್ಲ ಬರುತ್ತದೆ.ಬದುಕಿನ ನದಿಯ ಒಂದು ಹರಿವಿನ ಚಿತ್ರಣ ಮುಗಿದು ಹೊಸ ನೀರು ಬರುವಲ್ಲಿಗೆ ಕಾದಂಬರಿ ಮುಗಿಯುತ್ತದೆ. ಶಂಕರ ಮೊಕಾಶಿ ಪುಣೇಕರ್ ಸೃಷ್ಟಿಸಿದ ಗಂಗವ್ವ ನಾನು ಕಂಡ ಸಶಕ್ತ ಸ್ತ್ರೀ ಪಾತ್ರಗಳಲ್ಲೊಂದು. (ಇನ್ನೆರಡು ಅವರದೇ ಅವದೇಶ್ವರಿಯ ಪುರುಕ್ಸುತಾನಿ,ಗೃಹಭಂಗದ ನಂಜಮ್ಮ) ಬದುಕು ಎಸೆವ ಯಾವ ಸವಾಲುಗಳಿಗೂ ಅಂಜದೆ ಬದುಕುವ ಗಟ್ಟಿಗಿತ್ತಿ. ಈ ಕಾದಂಬರಿಯ ವೈಶಿಷ್ಟ್ಯ ಇರುವುದು ಪಾತ್ರಗಳ ಮನಸಿನ ಆಳಕ್ಕೆ ಪಾತಾಳಗರಡಿ ಹಾಕಿ ಅವುಗಳ ದರ್ಶನ ಮಾಡಿಸುವ ಬಗೆಯಲ್ಲಿ. ಅದರಿಂದಾಗಿ ನಮಗೆ ಆ ಪಾತ್ರಗಳೊಡನೆ ಒಡನಾಡಿದ ಭಾವ ಬರುತ್ತದೆ. 'ಚಿಕ್ಕಪುಟ್ಟ ಕಲಹಗಳು ಬಾಳಿನ ಏಕತಾನಕ್ಕೆ ನಡುನಡುವೆ ನಲುಗಾಗಿ ಬಂದು ಸೊಗಸನ್ನು ಹೆಚ್ಚಿಸುತ್ತಿದ್ದವು' ಎಂಬ ಒಂದೇ ವಾಕ್ಯದಲ್ಲಿ ಇಡೀ ಕಾದಂಬರಿಯ ಸಾರ ಅಡಗಿದೆ. ಸಾವಧಾನದ ಓದಿಗೆ ರುಚಿಸುವ , ನಿಧಾನಗತಿಯ ಬೇಡುವ ಈ ಪುಸ್ತಕ ಓದಬೇಕಾದ್ದು.
ಇತ್ತೀಚೆಗೆ ಅವಧೇಶ್ವರಿ ಕಾದಂಬರಿ ಓದಿ ಮುಗಿಸಿದಾಗ ಕೆಲವು ಪಾತ್ರಗಳು ಹಾಗು ಸನ್ನಿವೇಶಗಳು ಮನಸ್ಸಿನಲ್ಲಿಯೇ ಉಳಿದುಬಿಟ್ಟಿದೆ, ಆ ಕಾದಂಬರಿ ಇಷ್ಟವಾದ್ದರಿಂದ ಪುಣೇಕರ ರವರ ಇತರ ಕಾದಂಬರಿಗಳನ್ನು ತರೆಸಿಕೊಂಡು ಅದರಲ್ಲಿ ಗಂಗವ್ವ ಗಂಗಮಾಯಿ ಕಾದಂಬರಿ ಓದಿ ಮುಗಿಸಿದಾಗ ಈ ಕಾದಂಬರಿಯು ಇಷ್ಟವಾಯಿತು.
ಮುಖ್ಯ ಪಾತ್ರಗಳು: ಗಂಗವ್ವ, ಗಂಗವ್ವನ ಮಗ ಕಿಟ್ಟಿ, ಗಂಗವ್ವನ ತಮ್ಮ ರಾಘಪ್ಪ, ದೇಸಾಯರು, ದೇಸಾಯರ ಮಕ್ಕಳು ಅಚ್ಯುತ, ವಸಂತ. ರಾಘಪ್ಪನ ಹೆಂಡತಿ ಚಂಪಕ್ಕ, ಮಕ್ಕಳು ರತ್ನಾ, ಶಾಂತ. ರಾಘಪ್ಪನ ಸಖಿ ಮೆಹಬೂಬಜಾನ್.
ದೇಸಾಯರು ಕಾಶಿಯಾತ್ರೆಗೆ ಹೊರಟದ್ದನ್ನು ಕಂಡು ಗಂಗವ್ವನೂ ಕಾಶಿಯಾತ್ರೆಗೆ ಹೊರಟಳು. ವಿಶ್ವನಾಥ, ಕಾಲಭೈರವ,ಬಿಂದುಮಾಧವ, ಗಂಗಾಮಾತೆಯ ದರ್ಶನ ಮಾಡಿಕೊಂಡು ಯಾತ್ರೆ ಮುಗಿಸಿ ಗಂಗಾಜಲ ತುಂಬಿಸಿಕೊಂಡು ಬರುವಾಗ ಅದು ಸಾವಿನ ಸಂಕೇತವಾಗಿ ಕಂಡಿದ್ದರಿಂದ, ಇಲ್ಲ ತಾನು ಸಾಯಬಾರದು ಕಿಟ್ಟಿಗೋಸ್ಕರ ಬದುಕಲೇ ಬೇಕೆಂದು ಗಂಗಾಜಲವನ್ನು ಚೆಲ್ಲಿಬಿಡುತ್ತಾಳೆ. ಕಾದಂಬರಿ ಉದ್ದಕ್ಕೂ ಆಕೆಯ ಗಟ್ಟಿತನ, ಕಿಟ್ಟಿಯ ಮೇಲಿದ್ದ ಹಿಡಿತನವನ್ನು ಮೆಚ್ಚಬೇಕಾದದ್ದೆ. ಗಂಡನನ್ನು ಕಳೆದುಕೊಂಡನಂತರ ಕಿಟ್ಟಿಯನ್ನು ಬೆಳೆಸಲು ಕಷ್ಟಪಡುತ್ತಾಳೆ, ಆಕೆಯು ಕಿಟ್ಟಿಗಾಗಿಯೇ ಧೃಡ ಸಂಕಲ್ಪದಿಂದ ಜೀವಿಸಿದ್ದು, ಕಿಟ್ಟಿಗೆ ಮದುವೆ ಮಾಡಿ, ಜವಾಬ್ದಾರಿ ವಹಿಸಿ, ಮೊಮ್ಮಕ್ಕಳನ್ನು ನೋಡಿ ಕಣ್ಣು ಮುಚ್ಚಬೇಕೆಂಬುದೇ ಆಕೆಯ ಬಯಕೆ. ಅಂಥದ್ದರಲ್ಲಿ ಒಂದು ದಿನ ರಾಘಪ್ಪನ ಪ್ರವೇಶವಾಗುತ್ತದೆ, ತನ್ನ ತಮ್ಮ ರಾಘಪ್ಪನೆಂದರೆ ಕಿಡಿಕಾರುತ್ತಾಳೆ, ತಾನು ಕಷ್ಟದಲ್ಲಿದ್ದಾಗ ತನ್ನನ್ನು ಎಂದೂ ಕಾಣಲೂ ಬರದೆ ಇರುವವನು ಕಿಟ್ಟಿ ಸರ್ಕಾರಿ ನೌಕರಿ ಸೇರಿದನೆಂದು ತಿಳಿದು ತನ್ನ ಮಗಳಾದ ರತ್ನಾಳನ್ನು ಕಿಟ್ಟಿಗೆ ಕೊಟ್ಟು ಮದುವೆ ಮಾಡಬೇಕೆಂಬ ಕುತಂತ್ರ ಹೂಡುತ್ತಾನೆ, ಅದು ಗಂಗವ್ವನಿಗೂ ತಿಳಿದಿರುವ ಸಂಗತಿಯೇ. ರಾಘಪ್ಪನೆಂದರೆ ಸದಾ ದ್ವೇಷ ಕಾರಣ ತನ್ನ ಕಷ್ಟಕಾಲದಲ್ಲಿ ತನಗೆ ನೆರವಾಗಿಲ್ಲವೆಂದು ಹಾಗು ತನ್ನ ಗಂಡನ ಸಾವಿಗೆ ರಾಘಪ್ಪನೇ ಇರಬಹುದೆಂದು ಮತ್ತೊಂದು ಕಾರಣ.
ಮಾಮಲೇದಾರರ ಕಛೇರಿಯಲ್ಲಿ ಕೆಲಸ ಮಾಡುವ ಕಿಟ್ಟಿಗೆ, ಕೆಲಸದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾನೆ, ಪ್ರತಿ ಹೆಜ್ಜೆಗೂ ಅವಮಾನ ಎದುರಿಸುತ್ತಾ ತನ್ನ ಕೆಲಸವನ್ನು ಸಾಗಿಸುತ್ತಾನೆ, ಆ ಕೆಲಸದಲ್ಲಿ ಕಿಟ್ಟಿಗೆ ಅನುಭವ ಕಡಿಮೆ ಆದರೂ ತನ್ನ ಸಹೋದ್ಯೋಗಿಯಾದ ಜಾರ್ಜ್ ಇವನು ಮಾಡುವ ಕೆಲಸಕ್ಕೆ ಆಸರೆಯಾಗುತ್ತಾನೆ. ಮನೆಗೆ ಬಂದ ರಾಘಪ್ಪನನ್ನು ಅವಮಾನ ಪಡಿಸಿ ಕಳುಹಿಸಿದಾಗ ಕಿಟ್ಟಿ ಗಂಗವ್ವನ ಮೇಲೆ ಮುನಿಸಿಕೊಳ್ಳುತ್ತಾನೆ ಕಾರಣ ತನ್ನ ಕಛೇರಿಯಲ್ಲಿ ರಾಘಪ್ಪನು ಎಲ್ಲರಿಗೂ ತಿಳಿದಿರುವ ವ್ಯಕ್ತಿಯೆಂದು, ಅವರ ಸಹಾಯ ತನಗೆ ಅಗತ್ಯವೆಂದು ಆಕೆಯ ಮೇಲೆ ಕೋಪಿಸಿಕೊಳ್ಳುತ್ತಾನೆ. ಅಂತೂ ಮೆಹಬೂಬಜಾನ ಸಂಗೀತ ಕಾರ್ಯಕ್ರಮದಲ್ಲಿ ಮಾಮಲೇದಾರರ ಪರಿಚಯ ಮಾಡಿಸಿಕೊಟ್ಟಾಗ ತನಗೆ ಕಛೇರಿಯಲ್ಲಿ ಅನುಕೂಲವಾಗುತ್ತದೆ. ಅಂದಿನಿಂದ ರಾಘಪ್ಪನು ತನಗೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾನೆ. ಗಂಗವ್ವ ತನ್ನಲ್ಲಿದ್ದ ಹಣವನ್ನು ದೇಸಾಯರ ಬಳಿ ಜೋಪಾನವಾಗಿ ಇಟ್ಟಿರುತ್ತಾಳೆ, ಕಿಟ್ಟಿಗೆ ಆ ಸುದ್ಧಿ ಒಮ್ಮೆ ದೇಸಾಯರ ಮಗ ವಸಂತನಿಂದ ತಿಳಿದಾಗ ತಾಯಿಯ ಮೇಲೆ ಕಿಡಿಕಾರುತ್ತಾನೆ. ತಮ್ಮ ಹಣವನ್ನು ತಾವು ಕೇಳುವಾಗ ದೇಸಾಯರಿಂದ ಆಗುವ ಅವಮಾನಗಳಿಂದ ತಾಯಿಯ ಬಳಿ ಮಾತಾಡುವುದನ್ನೇ ಕಡಿಮೆ ಮಾಡುತ್ತಾನೆ. ಅಂತೂ ರಾಘಪ್ಪ ದೇಸಾಯರ ಸಂಧಾನದಿಂದ ಗಂಗವ್ವನಿಗೆ ಇಷ್ಟವಿಲ್ಲದಿದ್ದರೂ ರತ್ನಾಳನ್ನು ಕಿಟ್ಟಿಗೆ ಮದುವೆ ಮಾಡಿಸುತ್ತಾರೆ. ಹಣದ ವಿಷಯದಲ್ಲಿ ಮೆಹಬೂಬಜಾನ ರಾಘಪ್ಪನಿಗೆ ಸಹಾಯ ಮಾಡಿ ರಾಘಪ್ಪನಿಂದ ದೂರವಾಗುತ್ತಾಳೆ. ಮೊದಮೊದಲು ಅತ್ತೆ ಸೊಸೆಯರಲ್ಲಿ ಜಗಳಗಳಾದಗ ಕಿಟ್ಟಿಗೆ ಯಾರ ಪರ ವಹಿಸಬೇಕೊ ತಿಳಿಯುತ್ತಿರಲಿಲ್ಲ. ಕಿಟ್ಟಿ, ರತ್ನಾ, ರಾಘಪ್ಪನಿಂದ ಸದಾ ಅವಮಾನಿತಗೊಂಡ ಗಂಗವ್ವ ಕಿಟ್ಟಿಯನ್ನು ರಾಘಪ್ಪನ ಬಲೆಗೆ ಬೀಳದ ಹಾಗೆ ಕಾಪಾಡಿಕೊಂಡು ಬರುತ್ತಾಳೆ. ಕ್ರಮೇಣ ಕಿಟ್ಟಿ ಹಾಗು ರತ್ನಾ ಗಂಗವ್ವನ ಬೆಲೆ ತಿಳಿದು ಆಕೆಯ ಜೊತೆ ಹೊಂದುಕೊಂಡು ಹೋಗುತ್ತಾರೆ.
ಇತ್ತ ದೇಸಾಯರ ಆಸ್ತಿಯ ಮೇಲೆ ರಾಘಪ್ಪನಿಗೆ ಕಣ್ಣು ಬಿದ್ದು ದೇಸಾಯರ ಮಗ ವಸಂತನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿ, ತನ್ನ ಮಗಳಾದ ಶಾಂತಳನ್ನು ವಸಂತನನ್ನು ಒಲಿಯುವ ಹಾಗೆ ಮಾಡಿ ಅದರಲ್ಲಿ ಸಫಲನಾಗುತ್ತಾನೆ, ಶಾಂತಳನ್ನು ಮದುವೆಯಾಗಲು ಹಾಗು ರಾಘಪ್ಪನ ಪ್ರೇರಣೆಯಿಂದ ವಸಂತನು ದೇಸಾಯರಲ್ಲಿ ಆಸ್ತಿಯಲ್ಲಿ ತನ್ನ ಪಾಲು ಕೊಡಲು ಕೇಳಿದಾಗ ಕಪಾಳ ಮೋಕ್ಷವಾಗುತ್ತದೆ. ಇದೇ ಸಮಯದಲ್ಲಿ ದೇಸಾಯರು ಮತ್ತೊಂದು ಕಡೆ ಮುಂಬಯಿಯಲ್ಲಿದ್ದ ತನ್ನ ಮಗ ಅಚ್ಯುತನಿಂದ ರಾಘಪ್ಪನ ತಮ್ಮನಾದ ವೆಂಕಟರಮಣನ ಸುದ್ಧಿಯನ್ನು ಪತ್ತೆ ಹಚ್ಚಿ ಅವನ ಪಾಲಿನ ಆಸ್ತಿಯನ್ನು ಮೋಸಮಾಡಿ ರಾಘಪ್ಪ ದಕ್ಕಿಸಿಕೊಂಡಿರುವನೆಂದು ಆತನ ಪಾಲು ಆತನಿಗೆ ಕೊಡತಕ್ಕದ್ದಂದು ಬೆದರಿಕೆಹಾಕುತ್ತಾನೆ, ಕಿಟ್ಟಿಯನ್ನು ದತ್ತು ತೆಗೆದು ಕೊಳ್ಳುವುದೆಂದು ಮದುವೆಯ ಸಮಯದಲ್ಲಿ ರಾಘಪ್ಪ ಗಂಗವ್ವನಿಗೆ ಮಾತು ಕೊಟ್ಟಿರುತ್ತಾನೆ, ಕಿಟ್ಟಿ ತನ್ನ ಆಸ್ತಿಗೆ ವಾರಸುದಾರನಾಗಲು ತಪ್ಪಿಸಲು ಚಂಪಕ್ಕನನ್ನು ಒಲಿಸಿ ಗಂಡು ಮಗು ಪಡೆಯಲು ಪ್ರಯತ್ನಪಟ್ಟು, ಆ ಪ್ರಯತ್ನದಲ್ಲಿ ಚಂಪಕ್ಕನನ್ನು ಹಾಗು ಪುಟ್ಟ ಗಂಡು ಮಗುವನ್ನು ಕಳೆದುಕೊಂಡು ಹಾಗು ತನ್ನ ಸಖಿ ಮೆಹಬೂಬಜಾನನ್ನು ಕಳೆದುಕೊಂಡು ಹಾಗು ದೇಸಾಯರ ಮುಂದೆ ಸೋಲು ಒಪ್ಪಿಕೊಳ್ಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇತ್ತ ಗಂಗವ್ವ ರಾಘಪ್ಪನನ್ನು ಕಳೆದುಕೊಂಡ ದುಖದಿಂದ ಹಾಗು ಆತನ ಮೇಲೆ ಕೊನೆಯವರೆಗೂ ಹಗೆ ಸಾಧಿಸಿದ ಕಾರಣ ವ್ಯಥೆಗೊಳ್ಳುತ್ತಾಳೆ. ತಾಯಿ ತಂದೆಯಿಲ್ಲದ ರತ್ನಾ, ಶಾಂತಳನ್ನು ತನ್ನ ಮಕ್ಕಳ ಹಾಗೆ ಸಾಕುತ್ತಾಳೆ.
ಈ ಕಾದಂಬರಿಯಲ್ಲಿ ಗಂಗವ್ವ-ರಾಘಪ್ಪರ ದೀರ್ಘದ್ವೇಷ, ಕಿಟ್ಟಿಯ ಮನೋದೌರ್ಬಲ್ಯ, ಜಾರ್ಜ್ ಹಾಗು ಮೆಹಬೂಬಾನರ ಔದಾರ್ಯ, ಅಚ್ಯುತನ ಯೌವನೋತ್ಸಾಹ, ಚಂಪಕ್ಕನ ಮರಣ, ತಾಯಿ ಗರ್ಭವತಿಯಾದಳೆಂದು ತಿಳಿದ ರತ್ನಾ ತನಗೆ ಮಕ್ಕಳಾಗದಿರುವುದನ್ನು ನೆನೆದು ಅಸೂಯೆ ಪಡುವುದು, ಇವುಗಳನ್ನು ಪುಣೇಕರರು ಮುನುಷ್ಯರ ಮನೋಭಾವನೆಗಳನ್ನು ಈ ಪಾತ್ರಗಳ ಮೂಲಕ ಸುಂದರವಾಗಿ ಚಿತ್ರಿಸಿದ���ದಾರೆ.
ಉತ್ತರ ಕರ್ನಾಟಕ ಕನ್ನಡದಲ್ಲಿರುವ ಪೂರ್ಣ ಪ್ರಮಾಣದ ಪುಸ್ತಕವನ್ನು ಓದಿದ್ದು ಇದೆ ಮೊದಲು. ಮೊದಲ ಐವತ್ತು ಪುಟಗಳವರೆಗೂ ಓದಿನ ವೇಗಕ್ಕೆ ಭಾಷೆ ತೊಡಕಾಗಿದ್ದು ನಿಜ, ನಂತರದ ನೂರೈವತ್ತು ಪುಟಗಳು ಓದಿನ ಸಾವಧಾನ ಮತ್ತು ತಾಳ್ಮೆ ಬೇಡಿದರೂ ಕಥಾವಸ್ತು ಮತ್ತು ಪಾತ್ರಗಳು ನನ್ನನು ಕಾದಂಬರಿಯ ಪರಿಧಿಯೊಳಗೆ ಹಿಡಿದುಕೊಂಡಿದ್ದವು. ಉತ್ತರ ಕರ್ನಾಟಕ ಭಾಷೆಯುಳ್ಳ ಒಂದಷ್ಟು ಕಾದಂಬರಿಗಳನ್ನು ಈ ವರ್ಷ ಓದುವುದಿದೆ, ಆ ನಿಟ್ಟಿನಲ್ಲಿ “ಗಂಗವ್ವ ಗಂಗಾಮಾಯಿ” ಒಂದೊಳ್ಳೆ ಆರಂಭ ಅಂತಲೇ ಹೇಳಬಹುದು.
ಮೊದಲೇ ಹೇಳಿದಂತೆ “ಗಂಗವ್ವ ಗಂಗಾಮಾಯಿ” ಉತ್ತರ ಕರ್ನಾಟಕದ ಬ್ರಾಹ್ಮಣ ಮನೆತನದ ಮಧ್ಯಮವರ್ಗದ ಕುಟುಂಬಗಳ ಕತೆಯನ್ನೊಳಗೊಂಡಿದೆ, ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ರಚನೆಯಾದ ಕಾದಂಬರಿಯಾದರೂ ಅಲ್ಲಿನ ವಿಷಯಗಳು ಇಂದಿಗೂ ಪ್ರಸ್ತುತವೆನಿಸಿವಷ್ಟು ಆಪ್ತವಾಗಿವೆ, ವಾಸ್ತವಕ್ಕೆ ಹತ್ತಿರವಾಗಿವೆ. ಕಥೆಗಿಂತ ನನ್ನನು ಹೆಚ್ಚು ಆಕರ್ಷಿಸಿದ್ದು ಕಾಡಿದ್ದು ಕಾದಂಬರಿಯ ಪಾತ್ರಗಳು, ಅದ್ಭುತ ಪಾತ್ರಸೃಷ್ಟಿ ಮತ್ತು ಪೋಷಣೆ. ಮಗನ ಮೇಲಿನ ಪ್ರೀತಿಯ ಸಲುವಾಗಿ ಕಾಶಿಯಾತ್ರೆಯಿಂದ ತಂದ ಗಂಗಾಜಲವನ್ನು ಮಣ್ಣಿಗರ್ಪಿಸಿ ನಾನಿನ್ನೂ ಬದುಕಬೇಕು ಬದುಕಿ ಮಗನ ಯಶಸ್ಸನ್ನು ನೋಡಬೇಕೆನ್ನುವ ಗಂಗವ್ವನ ಜೀವನಪ್ರೀತಿ ಮತ್ತು ಅದೇ ಮಗನಿಗೋಸ್ಕರ ತನ್ನ ತಮ್ಮನೊಂದಿಗೆ ಜೀವನಪೂರ್ತಿ ದ್ವೇಷ ಕಟ್ಟಿಕೊಳ್ಳುವ ಆಕೆಯ ಛಲ ಇಷ್ಟವಾಯಿತು. ಒಂದೊಳ್ಳೆ ಸಶಕ್ತ ಸ್ತ್ರೀಪಾತ್ರವೇ ಸರಿ. ಗೋಪುರದಂತಹ ಅಹಂ ಉಳ್ಳ, ಸೋಲನ್ನೇ ಒಪ್ಪದ, ಸಾಯುವ ಮುನ್ನವೂ ನಾನು ಭಯಕ್ಕೆ ಸಾಯಲಿಲ್ಲ ಎನ್ನುವು ಎದೆಗಾರಿಕೆಯನ್ನು ಸ್ಥಾಪಿಸಿ ಸಾಯುವ ರಾಘಪ್ಪ, ಇದು ನನ್ನ ನೆಚ್ಚಿನ ಪಾತ್ರವೂ ಹೌದು. ಓದಾರ್ಯಕ್ಕೆ ಒಳ್ಳೆಯತನಕ್ಕೆ ಕರುಣೆಗೆಂದೇ ಹೇಳಿಮಾಡಿಸಿದಂತಹ ದೇಸಾಯಿಯವರ ಪಾತ್ರ. ವಸಂತ ಕಿಟ್ಟಿ ಪಾತ್ರಗಳ ಆಂತರಿಕ ಹೋರಾಟ ಇಷ್ಟವಾಯಿತು, ನಾನು ಓದುವ ಪ್ರತಿ ಕಾದಂಬರಿಯಲ್ಲಿ ಹುಡುಕುವುದು ಇದನ್ನೇ, ಪಾತ್ರಗಳು ನೈತಿಕ ದ್ವಂದ್ವಕ್ಕೆ ಒಳಪಡಬೇಕು, ಅದರ ಮೀಮಾಂಸೆಗೆ ನಾನು ತೊಡಗಬೇಕು. ಹೀಗೆ ಈ ಕಾದಂಬರಿ ವಿವಿಧ ಪಾತ್ರಗಳ ವ್ಯಕ್ತಿತ್ವಗಳ ಜೀವನದ ಆಗುಹೋಗುಗಳನ್ನು ಓದುಗರ ಮುಂದೆ ಯಶಸ್ವಿಯಾಗಿ ತೆರೆದಿಡುತ್ತದೆ.
ಕೊನೆಯದಾಗಿ ಒಂದು ಮಾತು, ಈಗಷ್ಟೇ ಓದನ್ನ ಆರಂಭಿಸಿರುವವರಾದರೆ ಈ ಪುಸ್ತಕ ಓದಲು ಕೊಂಚ ಕಷ್ಟವಾಗಬಹದು. ಕಥೆ ನಿಧಾನಗತಿಯಲ್ಲಿ ಸಾಗುವುದರಿಂದ ತಾಳ್ಮೆಯ ಅವಶ್ಯಕತೆ ಇದೆ, ಓದಬೇಕಾದ ಪುಸ್ತಕಗಳ ಪಟ್ಟಿಯಲ್ಲಂತೂ ಇರಲಿ.
ಭಾಷೆಯ ಭಾಂದವ್ಯವೋ, ಮೊಕಾಶಿಯವರ ಸರಳ ಶೈಲಿಯ ಬರವಣಿಗೆಯೋ ಗೊತ್ತಿಲ್ಲ. ಕಾದಂಬರಿ ನನ್ನನ್ನು ಕೊನೆಯವರೆಗೂ ತನ್ನ ಪರಿಧಿಯೊಳಗೆ ಹಿಡಿದಿಟ್ಟುಕೊಂಡಿತ್ತು. ಗಂಗವ್ವ ಮತ್ತು ಗಂಗಾಮಾಯಿ ಉತ್ತರ ಕರ್ನಾಟಕದ ಭಾಷೆಯ ಮೆರುಗನ್ನು ಹೊತ್ತು ಸ್ವಾತಂತ್ರೋತ್ತರ ಭಾರತದ ಅದರಲ್ಲೂ ಬ್ರಾಹ್ಮಣ ಮನೆತನದ ಮಧ್ಯಮ ವರ್ಗದ ಕುಟುಂಬಗಳ ಭಾವ, ಬವಣೆಗಳನ್ನು ಎತ್ತಿ ತೋರಿಸುತ್ತದೆ.
ಇಲ್ಲಿ ತಾಯಿಯ ಮಮತೆಯನ್ನು ಬಿಗಿ ಮುಷ್ಟಿಯೆಂದುಕೊಂಡು ಅದರಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುವ ಕಿಟ್ಟಿಯಿದ್ದಾನೆ. ಮಗನೆ ತನ್ನ ಪ್ರಪಂಚ ಎಂದು ತನ್ನ ಇಡೀ ಜೀವನವನ್ನು ಅವನಿಗಾಗಿ ತೇಯ್ದ ಗಂಗವ್ವಳಿದ್ದಾಳೆ. ಪ್ರತಿ ಸನ್ನಿವೇಶವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಗೋಸುಂಬೆ ರಾಘಪ್ಪನಿದ್ದಾನೆ. ತಮಗೆ ಕುತ್ತು ಬಂದರೂ ನಂಬಿದವರನ್ನು ಕಾಪಾಡಬೇಕೆಂಬ ಆದರ್ಶ ಜೀವನ ಸಾಗಿಸುವ ದೇಸಾಯಿಯವರಿದ್ದಾರೆ. ಚಿಕ್ಕ ಪಾತ್ರಗಳು ರತ್ನ, ವೆಂಕಾಟಿ, ಅಚ್ಯುತ, ವಸಂತ, ಚಂಪಕ್ಕ,ಮೆಹಬೂಬಜಾನ್ ಇತ್ಯಾದಿ ಊಟದ ಮಧ್ಯದ ಪಲ್ಯ ಕೋಸಂಬರಿಗಳಂತೆ ತಮ್ಮದೇ ಆದ ಸ್ವಾದವನ್ನು ಒದಗಿಸಿವೆ.
ನನಗೇನೋ ಇಡೀ ಕಾದಂಬರಿ ರಾಘಪ್ಪನ ಸುತ್ತ ಗಿರ್ಕಿ ಹೊಡೆಯುತ್ತಿದೆ ಎಂದೆನಿಸಿತು. ಕೊನೆಗೆ ಅವನ ಸಾವಿನಿಂದಲೇ ಎಲ್ಲರ ಜೀವನಕ್ಕೊಂದು ಪೂರ್ಣ ವಿರಾಮ ಸಿಕ್ಕಂತಾಯಿತು. ಗಂಗವ್ವ ಕಾಶಿಯಿಂದ ಮರಳಿ ಬರುವಾಗ ಗಂಗಾಜಲವನ್ನು ಚೆಲ್ಲಿದ್ದು ಗಂಗಾಮಾಯಿಯ ಮೇಲೆ ಅವಳಿಗಿದ್ದ ಬಲವಾದ ನಂಬಿಕೆ ಮತ್ತು ಇನ್ನು ಬದುಕಬೇಕೆಂಬ ಅವಳ ಜೀವನ ಪ್ರೀತಿಯನ್ನು ತೋರಿಸಿತು.
ಆಗಿನ ಕಾಲದ ಕತೆಯಾದರೂ ಇಂದಿಗೂ ಈ ಪಾತ್ರಗಳು, ನಂಬಿಕೆಗಳು, ಕಲ್ಪನೆಗಳು ನಮ್ಮೊಂದಿಗೆ ಜೀವಿಸುತ್ತಿವೆ. ನಾಟಕದವರ ಮೇಲೆ ಆಗಿನಷ್ಟು ತಿರಸ್ಕಾರ ಇಲ್ಲವಾದರೂ ಗೌರವವೇನು ಹೆಚ್ಚಾಗಿಲ್ಲ. ಹಲವು ಕಡೆ ಬಣ್ಣ ಹಚ್ಚಿ ನಾಟಕವಾಡುವದನ್ನು ಗೌಣವಾಗಿಯೇ ನೋಡುತ್ತಾರೆ.
ಒಟ್ಟಿನಲ್ಲಿ ನನ್ನ ಓದಿನ ಅನುಭವ ಸುಂದರವಾಗಿತ್ತು. ಮೊದಲ ಕಾದಂಬರಿಯೇ ಈ ಪರಿಯಾದರೆ ಮುಂದಿನವು ಹೇಗಿರಬಹುದೆಂಬ ಕುತೂಹಲವೊಂದು ಹುಟ್ಟಿಕೊಂಡಿದೆ.
'ഗം ഗ വ്വ ഗ o ഗാ മാതാവ്' ഒരു നിശ്ചിതമായ സാമൂഹ്യ ചുറ്റുപാടിൽ വളർന്നുവന്ന ഒരു കുടുംബ കഥയാണ്. മൂന്നു കുടുംബങ്ങളെ ചുറ്റിപറ്റി ഉണ്ടാകാവുന്ന സംഭവങ്ങളുടെ ആധാരത്തിൽ കഥ വളർന്നുവരുന്നു