Teja Vardhan > Teja's Quotes

Showing 1-12 of 12
sort by

  • #1
    Kuvempu
    “ಮುಚ್ಚು ಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ”
    Kuvempu

  • #2
    Kuvempu
    “ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?”
    Kuvempu

  • #3
    Kuvempu
    “ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
    ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.
    ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ”
    Kuvempu

  • #4
    Kuvempu
    “ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
    ಬಡತನವ ಬುಡಮುಟ್ಟ ಕೀಳ ಬನ್ನಿ”
    Kuvempu

  • #5
    Kuvempu
    “ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ
    ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ
    ರಾಜನುಡಿಯೊಂದು, ರಾಷ್ಟ್ರನುಡಿಯೆಂದೊಂದು
    ದೇವನುಡಿಯೆಂದೊಂದು ಹತ್ತಿ ಜಗ್ಗಿ,
    ನಿರನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ
    ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ”
    Kuvempu

  • #6
    Kuvempu
    “ನೂರು ದೇವರನೆಲ್ಲ ನೂಕಾಚೆ ದೂರ
    ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ!”
    Kuvempu

  • #7
    Kuvempu
    “ಕನ್ನಡದ ವಿಷಯದಲ್ಲಿ ನಾನು ಟ್ಯಾಂಕರಿನಂತೆ ಮುನ್ನುಗ್ಗುತ್ತೇನೆ. ನೀವು ದಾರಿಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ.”
    Kuvempu

  • #8
    Kuvempu
    “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು”
    Kuvempu

  • #9
    Kuvempu
    “ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು”
    Kuvempu

  • #10
    Kuvempu
    “ಕೋಟಿ ಧನವಿದ್ದರೂ ಪಟ್ಟಣವು ಗೋಳು,
    ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು”
    Kuvempu

  • #11
    Kuvempu
    “ಅಲ್ಪ ನಾನು ಎಂದು ಕುಗ್ಗಿ ಮುದುಗ ಬೇಡವೋ:
    ಓ ಅಲ್ಪವೆ, ಅನಂತದಿಂದ ಗುಣಿಸಿಕೊ;
    ನೀನ್ ಅನಂತವಾಗವೆ!”
    Kuvempu

  • #12
    Kuvempu
    “ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜಮತಕೆ ಓ, ಬನ್ನಿ, ಸೋದರರೆ, ವಿಶ್ವಪಥಕೆ!”
    Kuvempu



Rss