Dr Jyotsna Iyer
Dr Jyotsna Iyer asked Sudhakara Ramaiah:

What is the book 'Winters of Lion Garten' about?

Sudhakara Ramaiah Thank you for asking..
ಭಾರತೀಯ ಸಾಂಬಾರು ಪದಾರ್ಥಗಳಿಗೆ ಯುರೋಪ್ ದೇಶಗಳಲ್ಲಿ ಅಪಾರ ಬೇಡಿಕೆಯಿದ್ದ ಕಾಲವದು. ಟರ್ಕರು ಕಾನ್ಸ್ಟಾಂಟಿನೋಪಲನ್ನು ವಶಪಡಿಸಿಕೊಂಡ ನಂತರ ಪೋರ್ಚುಗೀಸರಿಗೆ ಬೇರೆ ಸಮುದ್ರ ಮಾರ್ಗ ಕಂಡುಹಿಡಿಯುವುದು ಅನಿವಾರ್ಯವಾಯಿತು. ಪೋರ್ಚುಗೀಸರ ನಾವಿಕ ವಾಸ್ಕೋಡಗಾಮ ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡುಹಿಡಿದ. ಆದರೆ ಹಣದ ದುರಾಸೆಗೆ ಬಿದ್ದ ಪೋರ್ಚುಗೀಸರು ಮಾರ್ಗ ಮಧ್ಯ ಸಿಗುತ್ತಿದ್ದ ಆಫ್ರಿಕಾದ ಕಾಡಿನಲ್ಲಿ ಜೀವಿಸುತ್ತಿದ್ದ ಬುಡಕಟ್ಟು ಜನಾಂಗದವರನ್ನು ಹಿಡಿದು ತಂದು ಭಾರತೀಯ ಸುಲ್ತಾನರಿಗೆ ಒತ್ತೆಯಾಳುಗಳಾಗಿರಿಸಿ ಅವರಿಂದ ಹಣವನ್ನು ಪಡೆಯುತ್ತಿದ್ದರು. ಹೀಗೆ ಒತ್ತೆಯಾಳಾಗಿ ಭಾರತಕ್ಕೆ ಬಂದವನೇ ಟೋಬೊ. ಇವನು ಮುಂದೆ ಕಾಸರಗೋಡಿನ ಹಳಬ ಎಂಬುವವನ ಸ್ನೇಹ ಮಾಡಿ ಅವನ ಸಹಾಯದಿಂದ ಪೋರ್ಚುಗೀಸರ ಮೇಲಿನ ಸೇಡು ತೀರಿಸಿಕೊಂಡದ್ದು ಹೇಗೆ? ಕಾಸರಗೋಡಿನ ಕಂಬಳದ ಓಟಗಾರ ʼಹಳಬʼ ಯುರೋಪಿಗೆ ಹೋಗಿದ್ದು ಯಾಕೆ? ಎರಡನೇ ಮಹಾಯುದ್ಧ ಹಿಜುಬಾ ಮತ್ತು ಆಥಿಯಾ ಎಂಬ ಪ್ರೇಮಿಗಳಿಬ್ಬರನ್ನು ಬೇರ್ಪಡಿಸಿ ಪರೀಕ್ಷಿಸಿದ್ದು ಹೇಗೆ? ಹೀಗೇ ಹತ್ತಾರು ಐತಿಹಾಸಿಕ ಘಟನೆಗಳ ಸುತ್ತ ಸುತ್ತುವ ಹಲವಾರು ಪಾತ್ರಗಳ ನಡುವಿನ ಕೊಂಡಿಯ ಮೇಲೆ ರಚಿತವಾಗಿರುವ
ಕಾಲ್ಪನಿಕ ಕಾದಂಬರಿ ʼವಿಂಟರ್ಸ್‌ ಆಫ್‌ ಲಯನ್‌ಗಾರ್ಟನ್ʼ.

About Goodreads Q&A

Ask and answer questions about books!

You can pose questions to the Goodreads community with Reader Q&A, or ask your favorite author a question with Ask the Author.

See Featured Authors Answering Questions

Learn more