ಸಾಹಿತ್ಯದಲ್ಲಿ ಸಾಮಾಜಿಕ ಸಿದ್ಧಾಂತ ಮತ್ತು ಕಲಾತ್ಮಕ ಸಿದ್ಧಾಂತ
ವಿವೇಕಿಗಳ ಜೊತೆಗಿನ ಮುಖತಃ ಚರ್ಚೆ ಮತ್ತು ಮಾತುಕತೆಯಲ್ಲಿ ‘ನಾನು ಸಂಪ್ರದಾಯವಾದಿ’ ಎಂದು ನೇರವಾಗಿ ಹೇಳಿದ್ದೇನೆ. ಇದರ ಬಗ್ಗೆ ಯಾವುದೇ ಗೊಂದಲ ನನಗಿಲ್ಲ. ಏಕಕಾಲದಲ್ಲಿ ನಾನು ಸಂಪ್ರದಾಯವಾದಿಯೂ, ಮಧ್ಯಮ ಮಾರ್ಗಿಯೂ ಆಗಿದ್ದೇನೆ. ಮಧ್ಯಮ ಮಾರ್ಗ ಎಂದರೆ “ಅದೂ ಅಲ್ಲದ, ಇದೂ ಅಲ್ಲದ, ಇನ್ನೊಂದು” ಎಂದು ಅರ್ಥೈಸುವವರು ಮತ್ತು ಅರ್ಥೈಸಿಕೊಳ್ಳುವವರು ಅವಿವೇಕಿಗಳೇ ಆಗಿದ್ದಾರೆ. ಸಂಪ್ರದಾಯವಾದಿಯಾಗಿಯೇ ಶುದ್ಧ ದೃಷ್ಟಿ ಇಟ್ಟುಕೊಂಡು ಸ್ವಂತಂತ್ರವಾದಿ-ವಾದವನ್ನು ಪರಿಶೀಲಿಸಿ ಆಲೋಚಿಸುವವನು ಮಧ್ಯಮ ಮಾರ್ಗಿ. ಹಾಗೆಯೇ ಸ್ವತಂತ್ರವಾದಿಯಾಗಿಯೇ ಶುದ್ಧ ದೃಷ್ಟಿ ಇಟ್ಟುಕೊಂಡು ಸಂಪ್ರದಾಯವಾದಿ-ವಾದವನ್ನು ಪರಿಶೀಲಿಸಿ ಆಲೋಚಿಸುವವನು ಮಧ್ಯಮ ಮಾರ್ಗಿ. ಮಧ್ಯಮ ಚಿಂತನೆ ಬುದ್ಧನ ದಾರಿಯೂ ಹೌದು. ಶುದ್ಧ ದೃಷ್ಟಿಯ ಪ್ರಮಾಣ ವೈಪರೀತ್ಯದಿಂದಾಗಿ ಅತಿರೇಕ, ಮಧ್ಯಮ ಅತಿರೇಕ, ಅತಿ ಅತಿರೇಕ ಹೀಗೆ ಸೀಳುತ್ತಾ ಹಲವಾಗುತ್ತದೆ. ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ಕಲಾತ್ಮಕ ಸಿದ್ಧಾಂತ ವಿಷಯವನ್ನು ಮಂಡಿಸುವ ಮುನ್ನ ಮಧ್ಯಮ ಮಾರ್ಗದ ವ್ಯಾಖ್ಯಾನದ ಧಾವಂತ ಅವಶ್ಯವಾದದ್ದು. ಇಲ್ಲಿ ನಾನು ನನ್ನ ನಂಬಿಕೆಗಳನ್ನು suspend ಮಾಡಿ, ನನ್ನ ಧೋರಣೆಗಳಿಗೆ ಹೊರತಾದ ತೌಲನಿಕ ವಿಮರ್ಶೆಯನ್ನು ಈ ವಿಚಾರದ ಬಗೆಗೆ ನೀಡಲು ಯತ್ನಿಸುತ್ತೇನೆ.
ಸಂಪ್ರದಾಯವಾದಿಗಳು ಹೆಚ್ಚಾಗಿ ಕಲಾತ್ಮಕ ಸಿದ್ಧಾಂತವನ್ನು, ಸ್ವತಂತ್ರವಾದಿಗಳು ಪ್ರಮುಖವಾಗಿ ಸಾಮಾಜಿಕ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ. ಎಷ್ಟೇ ಕಾಲವನ್ನು ಹಿಂದಕ್ಕೆ ಎಳೆದರೂ, ಸಾಹಿತ್ಯ ರಚನೆ ಪ್ರಾರಂಭವಾದ ಕ್ಷಣದಿಂದ ತೆಗೆದುಕೊಂಡರೂ ಇವೆರೆಡು tendencyಯನ್ನು ಗುರುತಿಸಬಹುದಾಗಿದೆ. ಶುದ್ಧ ಸಾಹಿತ್ಯ ಆಸ್ವಾದ, ಶುದ್ಧ ಸಾಹಿತ್ಯ ಬರೆಹಗಾರ ಎಂಬಿತ್ಯಾದಿ ಮಾತುಗಳು ಸಹ ಮಧ್ಯಮ ಮಾರ್ಗದ್ದೇ ಆಗಿದೆ. ಮಧ್ಯಮ ಮಾರ್ಗದ ಪರಿಚಯ ನಿಮಗೆ ಮೇಲೆ ಮಾಡಿಕೊಟ್ಟಂತೆ ಮೂಲದಲ್ಲಿ ಯಾವುದೋ ಒಂದು tendencyಗೆ ಅವರು ಪಕ್ಕಾಗಿರುವುದು ಅಥವಾ ಸಾಮಾನ್ಯ ಪರಿಭಾಷೆಯಲ್ಲಿ ವಾಲಿರುವುದು ಸಹಜಗಣ್ಣಿಗೆ ನಿಲುಕುವ ಸತ್ಯವಾಗಿದೆ. ಹಾಗಾದರೆ ಇವುಗಳ ವ್ಯತ್ಯಾಸ ಮತ್ತು ಗುಣಾವಲೋಕನವನ್ನು ಕೈಗೆತ್ತಿಕೊಳ್ಳೋಣ.
ಸಾಮಾಜಿಕ ಸಿದ್ಧಾಂತ:
ಒಬ್ಬ ಬರೆಹಗಾರ ತನ್ನ ಬಾಲ್ಯದಿಂದ ಸಮಾಜವನ್ನು ಎದುರಾಳಿ ಎಂದು ಭಾವಿಸಿದಾಗ, ಸಾಮಾಜಿಕ ಸಿದ್ಧಾಂತ ಮೇಲೇಳುತ್ತದೆ. ಸಮಾಜ ಎದುರಾಳಿ ಆಗಬೇಕಾದರೆ... ಅದು ಆ ಮಟ್ಟಿನ ಕ್ರೌರ್ಯವನ್ನೋ, ಅವಮಾನವನ್ನೋ ಆತನಿಗೆ ನೀಡಿರಬೇಕು. ಆಗ ಆತನಲ್ಲಿ ರಮ್ಯತೆ ಗೌಣವಾಗುತ್ತದೆ. ಅನುಭವ ಆತನನ್ನು penetrate ಮಾಡುವಷ್ಟು, ಕಲಾತ್ಮಕತೆ ಮಾಡುವುದಿಲ್ಲ. ನಾನು ಯಾವ ಲೇಖಕನ ಉದಾಹರಣೆಯನ್ನೂ ನೀಡಲು ಬಯಸುವುದಿಲ್ಲ, ಅದು ವಿಚಾರದ ಹಾದಿಯನ್ನೇ ತಪ್ಪಿಸುತ್ತದೆ. ಮುಕ್ತವಾಗಿ ಒಂದನ್ನು ಗಮನಿಸೋಣ. ಎರಡು ಹುಡುಗರು... ಇಬ್ಬರೂ ಕಡು ಬಡವರು, ಇಬ್ಬರೂ ತಿನ್ನಲು ಅನ್ನವಿಲ್ಲದವರು. ಒಂದೇ ವ್ಯತ್ಯಾಸ ಶಾಲೆಯಲ್ಲಿ ಒಬ್ಬ ನೀರು ಮುಟ್ಟಬಹುದು, ಇನ್ನೊಬ್ಬ ನೀರು ಮುಟ್ಟುವಂತಿಲ್ಲ. ಮೇಲ್ನೋಟಕ್ಕೆ ಇಬ್ಬರೂ ಶೋಷಿತರೇ. ಆದರೆ ನೀರು ಮುಟ್ಟುವ ವ್ಯಕ್ತಿ ರಮ್ಯತೆ ಬಯಸುತ್ತಾನೆ, ಮುಟ್ಟಲಾಗದ ವ್ಯಕ್ತಿ ಸಿದ್ಧಾಂತಕ್ಕೆ ವಾಲುತ್ತಾನೆ. ಇಂದು ಈ ಪರಿಸ್ಥಿತಿಯಲ್ಲಿ ಇಲ್ಲ. ಹಲವು ಲೇಖಕರು ತಮ್ಮ ಬಾಲ್ಯ ವಿವರಣೆ ನೀಡುವುದರಿಂದ ಸತ್ಯದಲ್ಲಿ ಭಾರತದಲ್ಲಿ ಹಿಂದೆ ಜಾರಿಯಿದ್ದ ಈ ನಿದರ್ಶನ ನೀಡಿದೆ. ಆತ ಇದರಿಂದ ಹೊರತಾಗಿ ಹೊಟ್ಟೆ-ಬಟ್ಟೆ ಕಂಡ ನಂತರವೂ ರಮ್ಯತೆ ಅವನಿಗೆ ಹಿಡಿಸುವುದಿಲ್ಲ. ಆಗ ಆತ ತನ್ನ ಅಭಿವ್ಯಕ್ತಿಯನ್ನು ಹೆಚ್ಚು ಬಳಸುತ್ತಾನೆ, ಅದನ್ನೇ ಸಮರ್ಥಿಸುತ್ತಾನೆ. ಸಾಮಾಜಿಕ ಸ್ಥಿತ್ಯಂತರವಾಗದೇ ಸಾಹಿತ್ಯ ಜೊಳ್ಳು ಎಂದಾಡುತ್ತಾನೆ. ಸಾಹಿತ್ಯದ ರಸ-ಧ್ವನಿ-ಔಚಿತ್ಯಗಳು ಅವನಿಗೆ ಸೆಕೆಂಡರಿ. ಒಂದು ಕಥೆಯನ್ನು ಅವನು ನಿರೂಪಿಸಲು ಹೊರಟಾಗ ಅಭಿವ್ಯಕ್ತಿಯಲ್ಲಿರುವ ರಸವೇ ಎಲ್ಲಾ ಪಾತ್ರದಲ್ಲು ಬಂದುಬಿಡುತ್ತದೆ. ಒಳದನಿಯೇ ಸಾಹಿತ್ಯ, ಮಿಕ್ಕೆಲ್ಲವೂ ಮೇಕ್-ಅಪ್ ಎಂಬ ವಾದವನ್ನು ಅವರ ಸಾಹಿತ್ಯವು ಗಟ್ಟಿಯಾಗಿ ಪ್ರತಿಪಾದಿಸುತ್ತದೆ. ರಸೋತ್ಪಾದನೆಗಿಂತಲೂ, ದನಿ ಏಳಿಸುವ ಸಾಹಿತ್ಯವು ಸಮಾಜಕ್ಕೆ ಅವಶ್ಯಕ ಎಂಬುದು ಇದರ ಅಂತರಂಗ. ಸಮಾಜದ ಮೇಲೆ ಪರಿಣಾಮ ಬೀರಿ, ಅದರಲ್ಲಿನ ಅಸಮಂಜಸತೆಯನ್ನು ರಮ್ಯತೆಯಲ್ಲಿ ಮುಚ್ಚಿಹಾಕದೇ ವಾಸ್ತವವನ್ನು ಹಸಿಯಾಗಿ ತೆರೆದಿಡಬಲ್ಲ ಬರೆಹವು ಸಾಹಿತ್ಯದಲ್ಲಿ ಮೂಲವಾಗಬೇಕು ಎನ್ನುವುದನ್ನು ಸಾಮಾಜಿಕ ಸಿದ್ಧಾಂತದ ಲೇಖಕರು ಹೇಳುತ್ತಾರೆ.
ಸಾಮಾಜಿಕ ಸಿದ್ಧಾಂತ, ಕೇವಲ ಸಮಾಜದ ವಿರುದ್ಧವಾದ ಮುಖವಾಣಿ ಎಂಬುದನ್ನೂ ಇಲ್ಲಿ ಒಪ್ಪುವುದಿಲ್ಲ. ಸಮಾಜದಿಂದ ದಾಳಿಗೊಳಗಾಗದ ಒಬ್ಬ ವ್ಯಕ್ತಿಯೂ ಕೂಡ, ಸಾಮಾಜಿಕ ಸಿದ್ಧಾಂತವನ್ನು ಸಾಹಿತ್ಯದಲ್ಲಿ ತರುವುದಿದೆ. ಈ ಭಿನ್ನ ವರ್ಗದ ಲೇಖಕರು ಕಲಾತ್ಮಕತೆಯನ್ನು ಮತ್ತು ಸಾಮಾಜಿಕ ಸಿದ್ಧಾಂತವನ್ನು ಎರಡನ್ನೂ ನಂಬುತ್ತಾರೆ. ಆದರೆ ಕಲಾತ್ಮಕತೆಯ ಮೂಲವೇ ಸಾಮಾಜಿಕ ಸಿದ್ಧಾಂತ ಎಂದು ಅವರು ನಿರೂಪಿಸುತ್ತಾರೆ. ರಾಜಕೀಯ ಸಿದ್ಧಾಂತ ಸ್ಪಷ್ಟತೆ ಇಲ್ಲದವನು ಯಾವ ಸಾಹಿತ್ಯವನ್ನು ನಿಷ್ಠುರವಾಗಿ ಬರೆಯಲು ಆಗುವುದಿಲ್ಲ ಎಂಬ ಮಾತನ್ನು ಇವರಲ್ಲಿ ಗಮನಿಸಬಹುದು. ಜೀವನವನ್ನು ನೋಡುವ ಕ್ರಮದಲ್ಲು ಹಂತ ಹಂತವಾಗಿ ರಾಜಕೀಯ-ಸಾಮಾಜಿಕ ಸಿದ್ಧಾಂತವೇ ಪ್ರಭಾವ ಬೀರಬೇಕು ಎಂಬುದನ್ನು ಇವರ ಸಾಹಿತ್ಯ ಪಾತ್ರಗಳಲ್ಲಿ ಕಾಣಬಹುದು. ಇದರ ಅಚೆಗೆ ಸಾಮಾಜಿಕ ಸಿದ್ಧಾಂತ ಪ್ರೇರಿತ ಸಾಹಿತ್ಯ ಸ್ವಾದ ನೀಡುವುದಿಲ್ಲವೇ ಎಂದು ಕೇಳಿದರೆ, ನೀಡುತ್ತದೆ ಎಂದೇ ಹೇಳಬೇಕು. ತನ್ನ ದನಿಯಾಗಿ ಇನ್ನೊಬ್ಬನಿದ್ದಾನೆ ಎಂಬ ಭರವಸೆ ಇನ್ನಷ್ಟು ದನಿಯನ್ನು ಹೊರಡಿಸಬಲ್ಲದು. ಆ ದನಿಗೂಡಿಸುವಿಕೆ ಸ್ವಾದವಿಲ್ಲದೇ ಬರುವುದಿಲ್ಲ. ಅದು ಯಾವುದೋ ಒಂದು ರಸವನ್ನು ಅವನಲ್ಲಿ ಉತ್ಪತ್ತಿ ಮಾಡಿರಬಹುದು. ಆದರೆ ಖಂಡಿತಾ ಅದು ಆತನಿಗೆ ದಾಟಿದೆ-ನಾಟಿದೆ ಎನ್ನಬಹುದು.
ಕಲಾತ್ಮಕ ಸಿದ್ಧಾಂತ:
ರಸ-ಧ್ವನಿ-ಔಚಿತ್ಯವೇ ಸಾಹಿತ್ಯಕ್ಕೆ ಪ್ರಧಾನ ಎಂಬುದು ಕಲಾತ್ಮಕ ಸಿದ್ಧಾಂತದ ನಂಬಿಕೆ. ಅನುಭವವನ್ನು ಸಾರ್ವತ್ರಿಕ ಮಾಡಿಕೊಳ್ಳದೇ, ಹೊಸದನ್ನು ಹುಡುಕುವ ಪ್ರಯೋಗದಲ್ಲಿ ಕಲಾತ್ಮಕತೆ ಏಳುತ್ತದೆ. ಒಬ್ಬ ಬರೆಹಗಾರ ಕಲಾತ್ಮಕತೆಯನ್ನು ಹೇಗೆ ನಂಬುತ್ತಾನೆ ಎಂದು ಹೇಳುವುದು ಕಷ್ಟ. ಒಬ್ಬ ವ್ಯಕ್ತಿ ತನ್ನ ಇರುವಿನ ಬಗ್ಗೆ ಯೋಚಿಸುವಷ್ಟು ಪುರುಸೊತ್ತು ಮಾಡಿಕೊಂಡಾಗ ಕಲಾತ್ಮಕತೆಯನ್ನು ದಾಟಿಸುವ ಪ್ರಯತ್ನ ಮಾಡುತ್ತಾನೆ. ವ್ಯತ್ಯಾಸ ಗಮನಿಸಿ ಇರುವಿನ ಬಗೆಗಿನ ಹೋರಾಟ ಸಾಮಾಜಿಕ ಸಿದ್ಧಾಂತ, ಇರುವನ್ನು ಅರಿಯುವ ಹೋರಾಟ ಕಲಾತ್ಮಕ ಸಿದ್ಧಾಂತ. ಅಸ್ತಿತ್ವಕ್ಕೆ ಅನುಭವವೇ ಮುಖ್ಯ, ಅಸ್ತಿತ್ವ ಶೋಧಕ್ಕೆ ರಮ್ಯತೆಯೇ ಮುಖ್ಯ. ಇವರ ಸಾಹಿತ್ಯದಲ್ಲಿ ತಮ್ಮ ನಂಬಿಕೆಯನ್ನು ಬಣ್ಣಗಟ್ಟಿಸಿ ಹೇಳುವ ಪ್ರಕ್ರಿಯೆ ಹೆಚ್ಚಿರುತ್ತದೆ. ತುಂಬಾ ಸರಳವಾದುದು ಕೂಡ ಇಲ್ಲಿ ಗಹನ. ತುಂಬಾ ಗಹನವಾದದ್ದು ಇಲ್ಲಿ ಸರಳ. ಏಕೆಂದರೆ ಇಲ್ಲಿ ಸಾಹಿತ್ಯ ಸಾಧನಗಳು ಹೆಚ್ಚು. ಸಾಮಾಜಿಕ ಸಿದ್ಧಾಂತ ನಿರ್ಣಯಿಸುವ ಕಾರ್ಯವನ್ನೂ ಒಮ್ಮೊಮ್ಮೆ ಕಲಾತ್ಮಕತೆ ಮಾಡುತ್ತದೆ. ಆದರೆ ದಾಹವಾದಾಗ ನೀರು ಸಿಗುವ ಹಪಹಪಿ ಕಲಾತ್ಮಕ ಸಿದ್ಧಾಂತದಲ್ಲಿ ಸೃಷ್ಟಿಗೊಂಡರೆ, ನೀರು ಮುಟ್ಟಲಿಕ್ಕೂ ಬಿಡದ ಹತಾಶೆ ಸಾಮಾಜಿಕ ಸಿದ್ಧಾಂತದಲ್ಲಿ ಸೃಷ್ಟಿಗೊಳ್ಳುತ್ತದೆ. ಎರಡನ್ನೂ ತಿರಸ್ಕರಿಸುವುದು ಅಸಾಧ್ಯ. ರಾಜಕೀಯ ಆಯಾಮ ಇಟ್ಟುಕೊಂಡು ಪಾತ್ರ-ಕಥಾನಕ ಬರೆದಾಗ ಸಾಹಿತ್ಯದ ಸಾಂದ್ರತೆ ಹೊರಟುಹೋಗುತ್ತದೆ ಎಂದು ಇಲ್ಲಿ ಲೇಖಕ ಸಮರ್ಥಿಸುತ್ತಾನೆ. ಸಮಾಜದ ವೈಪರೀತ್ಯವನ್ನ ಹಸಿ ಹಸಿಯಾಗಿ ನಿಲ್ಲಿಸುವುದು ಎಂದಿಗೂ ಸಾಹಿತ್ಯವಾಗಲಾರದು, ಸಾಮಾಜಿಕ ಸಿದ್ಧಾಂತವು ಅಕ್ಕಿಯಾದರೆ, ಕಲಾತ್ಮಕ ಸಿದ್ಧಾಂತವು ಅನ್ನ. ಬೇಯಿಸುವುದೇ ಸಾಹಿತ್ಯ ಪ್ರಕ್ರಿಯೆ. ಅದು ರುಚಿ ಹೆಚ್ಚಿಸುತ್ತದೆ ಎಂಬ ಪ್ರತಿಪಾದನೆ ಇಲ್ಲಿದೆ.
ಕಲಾತ್ಮಕ ಸಿದ್ಧಾಂತವು ಕೇವಲ ರಮ್ಯತೆ ಎಂಬುದನ್ನೂ ಇಲ್ಲಿ ಒಪ್ಪುವುದಿಲ್ಲ. ಅನುಭವವಿಲ್ಲದ ರಮ್ಯತೆ, ಜೊಳ್ಳು ಎಂಬುದೂ ಕೂಡ ಇಲ್ಲಿನ ನಂಬಿಕೆ. ಸಂಪ್ರದಾಯವಾದಿ ಕಲಾತ್ಮಕ ಲೇಖಕರು ಸಾಮಾಜಿಕ ಅಸಮತೋಲನ ವಿರುದ್ಧ ಧೋರಣೆಯನ್ನು ಸಾಹಿತ್ಯದಲ್ಲಿ ತರುತ್ತಾರೆ. ಆದರೆ ಧೋರಣೆಯನ್ನು ನಿರೂಪಿಸುವಾಗ ವಾದಿ-ಪ್ರತಿವಾದಿ ಕಲಾತ್ಮಕ ಸಾಹಿತ್ಯ ತಂತ್ರ ಇಟ್ಟುಕೊಂಡು ಆಶಯವನ್ನು ದಾಟಿಸುವಾಗಲೂ ತಮ್ಮ ನಂಬಿಕೆಯ ಸಂಪ್ರದಾಯವೇ ಗೆಲ್ಲುವಂತೆ ನೋಡಿಕೊಳ್ಳುತ್ತಾರೆ. ಸೌಂದರ್ಯ ಮತ್ತು ಆನಂದ ಇವರ ಸಾಹಿತ್ಯ ಪಾತ್ರಗಳಲ್ಲಿ ಪ್ರಮುಖವೇ ಹೊರತು, ಜೀವನವನ್ನು ಸಾಮಾಜಿಕ ಸಿದ್ಧಾಂತ ಆಧಾರದಲ್ಲೇ ನೋಡುವುದನ್ನು ಒಪ್ಪುವುದಿಲ್ಲ. ಫಿಲಸಾಫಿಕಲ್ ಆಯಾಮವನ್ನು ಜೀವನದ ಮೇಲೆ ಪ್ರಯೋಗಿಸುವುದು ಕಲಾತ್ಮಕ ಸಿದ್ಧಾಂತಿಗಳ ಮುಖ್ಯ ಪ್ರಕ್ರಿಯೆ. ತನಗನ್ನಿಸಿದ್ದು ಮತ್ತು ತನ್ನಲ್ಲೇ ಶೋಧಿಸಿದ್ದನ್ನು ರಸ-ದನಿ-ಔಚಿತ್ಯದಲ್ಲಿ ನೀಡಿದರೆ ಮಾತ್ರ ಹೆಚ್ಚು ಕಾಲ ಜನರಲ್ಲಿ ಉಳಿಯುತ್ತದೆ ಎಂಬ ಕಲಾತ್ಮಕ ಪ್ರತಿಪಾದನೆ ಜನ ಸಾಮಾನ್ಯರನ್ನು ಪ್ರಬಲವಾಗಿ ತಲುಪಿದೆ.
ಒಟ್ಟು ಮಾತು:
ತಾಂತ್ರಿಕ ಆಂಶಗಳನ್ನು ನಾನು ಉಲ್ಲೇಖಿಸಲು ಹೋಗಿಲ್ಲ. ಯಾವ ಸಿದ್ಧಾಂತ ಶ್ರೇಷ್ಠ ಎಂಬ ತರ್ಕವೂ ಇಲ್ಲಿಲ್ಲ. ಒಪ್ಪಲಿ, ಬಿಡಲೀ, ಇವರೆಡು ಅಸ್ತಿತ್ವದಲ್ಲಿ ಇದೆ. ಇವೆರೆಡನ್ನೂ ಒಪ್ಪಿಕೊಂಡ, ಓದುಗರು, ಬರೆಹಗಾರರು ಇದ್ದಾರೆ. ತಮ್ಮ ತಮ್ಮ ನಂಬಿಕೆಯೇ ಶ್ರೇಷ್ಠ ಎಂದು ತಿಳಿದವರೂ ಇದ್ದಾರೆ. ಸಾಮಾನ್ಯವಾಗಿ ಎಲ್ಲಾ ಸಾಹಿತ್ಯ ಬರೆಹದಲ್ಲೂ ಇವೆರೆಡರ ಹದವಾದ ಮಿಶ್ರಣ ಕಂಡೇ ಕಾಣುತ್ತದೆ. ಆದರೂ ಲೇಖಕ ಯಾವ tendency ಹೆಚ್ಚಾಗಿ ಹೊಂದಿದ್ದಾನೆ ಎಂದು ಗಂಭೀರ ಓದುಗರಿಗೆ ತಿಳಿಯದೇ ಇರೋಲ್ಲ. ಅದೇ ಕಾರಣಕ್ಕೆ ಅವನನ್ನು ವಿರೋಧಿಸುವುದು ಅಥವಾ ಸಂಭ್ರಮಿಸುವುದು ಇದ್ದರೆ ಅಂಥಹದು ಬಲು ಅಪಾಯಕಾರಿ. ಎರಡರ ಅಸ್ತಿತ್ವವನ್ನು ಒಪ್ಪಿಕೊಳ್ಳಲೇಬೇಕು. ನೀವು ಒಪ್ಪದಿದ್ದ ಮಾತ್ರಕ್ಕೆ ಅದು ಸುಳ್ಳಾಗುವುದಿಲ್ಲ!

Published on July 24, 2017 23:29
No comments have been added yet.